ಕರ್ನಾಟಕ

karnataka

ETV Bharat / bharat

ಲಸಿಕೆ ಖುಷಿಯಲ್ಲಿ ಆರ್ಥಿಕ ಕುಸಿತ, ಲಡಾಖ್​ನಲ್ಲಿ ಚೀನಾದ 4,000 ಕಿ.ಮೀ ಅತಿಕ್ರಮಣ ಮರಿಬೇಡಿ : ಮೋದಿಗೆ ಸ್ವಾಮಿ ಟಾಂಗ್ - ಆರ್ಥಿಕ ಕುಸಿತ

ಮೋದಿ ಸರ್ಕಾರದ ಆರ್ಥಿಕತೆ ನಿರ್ವಹಣೆ ಮತ್ತು ಚೀನಾದೊಂದಿಗೆ ವ್ಯವಹಾರ ನಿಭಾಸುವುದನ್ನು ಪ್ರಶ್ನಿಸಿ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ. ಭಾರತದ ಭೂಪ್ರದೇಶದ ಮೇಲೆ ಚೀನಾದ ಯಾವುದೇ ಆಕ್ರಮಣ ನಡೆದಿಲ್ಲ ಎಂದು ತಮ್ಮದೇ ಸರ್ಕಾರದ ಹೇಳಿಕೆಯನ್ನ ಸ್ವಾಮಿ ಟೀಕಿಸಿದ್ದಾರೆ..

Subramanian Swamy
ಸುಬ್ರಮಣಿಯನ್ ಸ್ವಾಮಿ

By

Published : Jan 6, 2021, 2:56 PM IST

ನವದೆಹಲಿ :ಕೊರೊನಾ ಲಸಿಕೆಯ ಉತ್ಸಾಹದ ಮಧ್ಯೆ ಇತರ ಒತ್ತಡದ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು ಎಂದು ಬಿಜೆಪಿ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಮೋದಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮೋದಿ ಸರ್ಕಾರದ ಆರ್ಥಿಕತೆ ನಿರ್ವಹಣೆ ಮತ್ತು ಚೀನಾದೊಂದಿಗೆ ವ್ಯವಹಾರ ನಿಭಾಸುವುದನ್ನು ಪ್ರಶ್ನಿಸಿ ಟ್ವೀಟ್ ಮಾಡಿರುವ ಅವರು, ಲಸಿಕೆಯ ಉತ್ಸಾಹದಲ್ಲಿ ಆರ್ಥಿಕತೆಯು ಕುಸಿಯುತ್ತಿರುವುದನ್ನು ಮರೆಯಬೇಡಿ ಮತ್ತು ಚೀನಾ ಲಡಾಖ್‌ನಲ್ಲಿ ಕನಿಷ್ಠ 4000 ಚದರ ಕಿ.ಮೀ. ಕಸಿದುಕೊಂಡಿದೆ ಎಂದರು.

ಲಸಿಕೆ ಬಗೆಗಿನ ಉತ್ಸಾಹದ ಹೊರತಾಗಿಯೂ ಕುಸಿದ ಆರ್ಥಿಕತೆ ಮತ್ತು ಚೀನಾದ ಲಡಾಖ್​ನಲ್ಲಿನ ಆಕ್ರಮಣ ಮರೆಯಬಾರದು. ಅಲ್ಲಿ ಅವರು ಕನಿಷ್ಠ 4000 ಚದರ ಕಿಲೋಮೀಟರ್ ಆಕ್ರಮಿಸಿಕೊಂಡಿದ್ದಾರೆ ಎಂದು ಹೇಳಿದರು.

ಭಾರತದ ಭೂಪ್ರದೇಶದ ಮೇಲೆ ಚೀನಾದ ಯಾವುದೇ ಆಕ್ರಮಣ ನಡೆದಿಲ್ಲ ಎಂದು ತಮ್ಮದೇ ಸರ್ಕಾರದ ಹೇಳಿಕೆಯನ್ನ ಸ್ವಾಮಿ ಟೀಕಿಸಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ ಚೀನಾದ ಪಿಎಲ್‌ಎ 30 ಆಧುನಿಕ ಟ್ಯಾಂಕ್‌ಗಳನ್ನು ಎಲ್‌ಎಸಿ ಪ್ರದೇಶದಲ್ಲಿ ನಿಲ್ಲಿಸಿ ಭಾರತೀಯ ಸೈನಿಕರ ಮೇಲೆ ಗುಂಡು ಹಾರಿಸಿದೆ. ನಮ್ಮ ಸ್ವಂತ ಭೂಪ್ರದೇಶದಲ್ಲಿರುವ ಚೀನಾವನ್ನು ಹಿಂದೆಗೆದುಕೊಳ್ಳವಂತೆ ಹೇಳಲು ಏಕೆ ನಾಚಿಕೆಪಡುತ್ತೀರಿ [ಅಥವಾ ಚಿಕನ್]? ಎಂದು ಪ್ರಶ್ನಿಸಿದ್ದಾರೆ.

ABOUT THE AUTHOR

...view details