ಕರ್ನಾಟಕ

karnataka

ETV Bharat / bharat

ಸಿಬಿಐ ನೂತನ ನಿರ್ದೇಶಕರಾಗಿ ಐಪಿಎಸ್ ಸುಬೋಧ್ ಕುಮಾರ್ ಜೈಸ್ವಾಲ್ ನೇಮಕ - ಸಿಬಿಐ ನೂತನ ನಿರ್ದೇಶಕರಾಗಿ

ಇದಕ್ಕೂ ಮೊದಲು ಸುಬೋಧ್ ಕುಮಾರ್ ಮಹಾರಾಷ್ಟ್ರದ ಡಿಜಿಪಿ ಆಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಸಿಐಎಸ್​​​ಜಿಯ ಮಹಾನಿರ್ದೇಶಕ, 1985ರ ಬ್ಯಾಚ್ ಮಹಾರಾಷ್ಟ್ರ ಕೇಡರ್ ಐಪಿಎಸ್ ಅಧಿಕಾರಿ ಜೈಸ್ವಾಲ್ ಅವರು ಮಹಾರಾಷ್ಟ್ರ ಡಿಜಿಪಿ ಮತ್ತು ಮುಂಬೈ ಪೊಲೀಸ್ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸಿಬಿಐ ನೂತನ ನಿರ್ದೇಶಕರಾಗಿ ಐಪಿಎಸ್ ಸುಬೋಧ್ ಕುಮಾರ್ ಜೈಸ್ವಾಲ್ ನೇಮಕ
ಸಿಬಿಐ ನೂತನ ನಿರ್ದೇಶಕರಾಗಿ ಐಪಿಎಸ್ ಸುಬೋಧ್ ಕುಮಾರ್ ಜೈಸ್ವಾಲ್ ನೇಮಕ

By

Published : May 25, 2021, 10:55 PM IST

ನವದೆಹಲಿ: ಕೇಂದ್ರೀಯ ತನಿಖಾ ದಳದ (ಸಿಬಿಐ) ನೂತನ ನಿರ್ದೇಶಕರಾಗಿ ಸುಬೋಧ್ ಕುಮಾರ್ ಜೈಸ್ವಾಲ್ ಅವರು ನೇಮಕವಾಗಿದ್ದಾರೆ. 2 ವರ್ಷಗಳ ಅವಧಿಗೆ ನಿರ್ದೇಶಕರಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ನಿರ್ದೇಶಕರ ಆಯ್ಕೆ ಸಮಿತಿ ಸಭೆಯಲ್ಲಿ ಸುಬೋಧ್ ಕುಮಾರ್ ಜೈಸ್ವಾಲ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.

ಇದಕ್ಕೂ ಮೊದಲು ಸುಬೋಧ್ ಕುಮಾರ್ ಮಹಾರಾಷ್ಟ್ರದ ಡಿಜಿಪಿ ಆಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಸಿಐಎಸ್​​​ಜಿಯ ಮಹಾನಿರ್ದೇಶಕ, 1985ರ ಬ್ಯಾಚ್ ಮಹಾರಾಷ್ಟ್ರ ಕೇಡರ್ ಐಪಿಎಸ್ ಅಧಿಕಾರಿ ಜೈಸ್ವಾಲ್ ಅವರು ಮಹಾರಾಷ್ಟ್ರ ಡಿಜಿಪಿ ಮತ್ತು ಮುಂಬೈ ಪೊಲೀಸ್ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಇಂಟೆಲಿಜೆನ್ಸ್​ ಬ್ಯೂರೋ, ಎಸ್​ಪಿಜಿಯಲ್ಲಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

ABOUT THE AUTHOR

...view details