ಕರ್ನಾಟಕ

karnataka

ETV Bharat / bharat

ದೇಶದಲ್ಲಿ ಹೆಚ್ಚುತ್ತಿರುವ ಭಾಷಾವಾರು ರಾಜ್ಯಗಳ ಕಿತ್ತಾಟ.. ಇವೆಲ್ಲದಕ್ಕೆ ಕಡಿವಾಣ ಎಂದು? - ಬೆಳಗಾವಿ ಗಡಿ ವಿವಾದ

ರಾಜಕೀಯ ವಿಜ್ಞಾನಿ ಬೆನೆಡಿಕ್ಟ್ ಆಂಡರ್ಸನ್ ರಾಷ್ಟ್ರಗಳು ಕಲ್ಪಿತ ಸಮುದಾಯಗಳಾಗಿವೆ ಎಂದು ಉಲ್ಲೇಖಿಸಿದ್ದರು. ಅವರ ಸಿದ್ಧಾಂತದ ಪ್ರಕಾರ, ಭಾರತವೂ ಒಂದು ಕಲ್ಪಿತ ಸಮುದಾಯವಾಗಿದ್ದು, ಇದರಲ್ಲಿ ವಿವಿಧ ಸಮುದಾಯಗಳನ್ನು ಒಟ್ಟಿಗೆ ಜೋಡಿಸುವ ಸಾಮಾನ್ಯ ಸಂಯೋಜಿತ ಸಂಸ್ಕೃತಿ ಮತ್ತು ಐತಿಹಾಸಿಕ ನಿರೂಪಣೆಯಿದೆ ಎಂದು 'ಈಟಿವಿ ಭಾರತ'ದ ಸಹಾಯಕ ಸುದ್ದಿ ಸಂಪಾದಕ ವರ್ಗೀಸ್ ಪಿ ಅಬ್ರಹಾಂ ಹೇಳಿದರು. ದೇಶದಲ್ಲಿರುವ ಹೆಚ್ಚುತ್ತಿರುವ ಭಾಷಾವಾರು ರಾಜ್ಯಗಳ ಕಿತ್ತಾಟ ಬಗ್ಗೆಯೂ ಅವರು ಮಾತನಾಡಿದ್ದಾರೆ.

Sub-nationalism
ಭಾಷಾವಾರು ರಾಜ್ಯಗಳ ಕಿತ್ತಾಟ

By

Published : Jan 20, 2021, 10:24 AM IST

Updated : Jan 20, 2021, 10:44 AM IST

ಹೈದರಾಬಾದ್:ಭಾರತದ ಸಾಮಾಜಿಕ ವೈವಿಧ್ಯತೆಗೆ ಧ್ವನಿ ನೀಡುವುದು ಏಕತೆಯ ವಿಶಿಷ್ಟ ಲಕ್ಷಣ. ಭಾಷೆಗಳ ಆಧಾರದ ಮೇಲೆ ನೂತನ ರಾಜ್ಯಗಳು ಹುಟ್ಟಿಕೊಳ್ಳುತ್ತವೆ. ಅಷ್ಟೇ ಅಲ್ಲದೆ ಭಾಷೆಗಳ ಮೂಲಕ ತಮ್ಮ ರಾಜ್ಯಗಳು ಗುರುತನ್ನು ಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳುವ ಪ್ರಯತ್ನ ಒಂದು ಕಾಲದಲ್ಲಿ ನಡೆದಿತ್ತು.

ರಾಜ್ಯಗಳ ಗಡಿಗಳನ್ನು ಗುರುತಿಸುವಾಗ, ಮಿಶ್ರ ಜನಸಂಖ್ಯೆಯ ಪ್ರದೇಶಗಳು ಅಥವಾ ಕೆಲವೊಮ್ಮೆ ಅದರ ಭಾಷಾ ಗುರುತಿನೊಂದಿಗೆ ಜನಸಂಖ್ಯೆಯನ್ನು ಗುರುತಿಸದ ರಾಜ್ಯಗಳಿಗೆ ಹಾಗೆಯೇ ಉಳಿದುಬಿಡುತ್ತದೆ. ಈ ಜನಸಂಖ್ಯೆಯಲ್ಲಿ ಕೆಲವರು ತಾವು ಗುರುತಿಸುವ ರಾಜ್ಯಗಳೊಂದಿಗೆ ಸಂಪೂರ್ಣ ವಿಲೀನವನ್ನು ಬಯಸುತ್ತಾರೆ. ಆದಾಗ್ಯೂ, ರಾಜ್ಯಗಳ ಮರುಸಂಘಟನೆಯಿಂದಾಗಿ ಸುಪ್ತವಾಗಿದ್ದ ಹಳೆಯ ವಿವಾದಗಳು ಮತ್ತೆ ಹೆಡೆಎತ್ತುವ ಸಂಭವವೂ ಇದೆ. ಇದು ರಾಜ್ಯಗಳ ನಡುವಿನ ಶಾಂತಿಯ ಕಲ್ಪನೆಯನ್ನು ಪ್ರಶ್ನಿಸಬಹುದು ಮತ್ತು ಭಾರತೀಯ ರಾಷ್ಟ್ರದ ಅಡಿಪಾಯವನ್ನು ಅಲುಗಾಡಿಸಬಹುದು.

ಬೆಳಗಾವಿ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾಡಿದ ಟ್ವೀಟ್, ಕರ್ನಾಟಕದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಎರಡೂ ರಾಜ್ಯಗಳು ಈ ಜಿಲ್ಲೆಯಲ್ಲಿ ಐತಿಹಾಸಿಕ ಹಕ್ಕು ಹೊಂದಿವೆ. ಮಹಾರಾಷ್ಟ್ರದೊಂದಿಗೆ ಬೆಳಗಾವಿಯನ್ನು ವಿಲೀನ ಮಾಡಲು ಮುಂಚೂಣಿಯಲ್ಲಿರುವ ಎಂಇಎಸ್, ಬೆಳಗಾವಿಯ ಮರಾಠಿ ಜನರಲ್ಲಿ ರಾಜಕೀಯ ಆಂದೋಲನವನ್ನು ಸೃಷ್ಟಿಸುತ್ತದೆ. ಈ ಮಧ್ಯೆ ಕರ್ನಾಟಕವು ಬೆಳಗಾವಿಗೆ ಎರಡನೇ ರಾಜಧಾನಿ ಎಂದು ಪ್ರಾತಿನಿಧ್ಯ ನೀಡಿದೆ. ಅಷ್ಟೇ ಅಲ್ಲದೆ, ಈ ಪ್ರದೇಶದ ಮೇಲಿನ ತನ್ನ ಹಕ್ಕುಗಳನ್ನು ದೃಢೀಕರಿಸಲು ಅಲ್ಲಿ ತನ್ನ ಎರಡನೇ ಶಾಸಕಾಂಗ ಕಟ್ಟಡವನ್ನು ನಿರ್ಮಿಸಿದೆ. ಆದರೆ ಇದೀಗ ಉದ್ಧವ್​ ಠಾಕ್ರೆ ಟ್ವೀಟ್​ ಅಲ್ಲಿಯ ಯಥಾಸ್ಥಿತಿಯನ್ನು ಕೆರಳಿಸಿದೆ.

ಶಿವಸೇನೆ ತನ್ನ ರಾಜಕೀಯವನ್ನು ಭಾಷಾ ಚಾತುರ್ಯ ಮತ್ತು ಹಿಂದುತ್ವದ ಪರಿಕಲ್ಪನೆಗಳ ಮೇಲೆ ನಿರ್ಮಿಸಿದೆ. ಕರ್ನಾಟಕವೂ ಸಹ ಅಸಂಖ್ಯಾತ ಸಂಸ್ಥೆಗಳಿಂದ ಪ್ರತಿನಿಧಿಸಲ್ಪಡುವ ಅದರ ಭಾಷಾ ಕೋಮುವಾದಕ್ಕೆ ಅನ್ಯವಾಗಿಲ್ಲ. ಕರ್ನಾಟಕದ ಗಡಿರೇಖೆಗಳು ಹೇಗೆ ಬೆದರಿಕೆಗೆ ಒಳಗಾಗುತ್ತವೆ ಎಂಬುದಕ್ಕೆ ಸಾಕ್ಷಿ ಬೆಳಗಾವಿ. ಇಂದಿನ ಭಾಷಾ ರಾಜ್ಯಗಳು ಏಕರೂಪದ ಜನಾಂಗೀಯ, ಧಾರ್ಮಿಕ ಮತ್ತು ಭಾಷಾ ಜನಸಂಖ್ಯೆಯನ್ನು ಹೊಂದಿರುವ ಪ್ರಾದೇಶಿಕ ಪ್ರದೇಶಗಳಿಂದ ರೂಪುಗೊಂಡಿಲ್ಲ.

ಬೆಳಗಾವಿ ಕುರಿತು ಮಹಾರಾಷ್ಟ್ರದ ಹಕ್ಕನ್ನು ಒಪ್ಪಿಕೊಳ್ಳಬೇಕಾದರೆ, ಇಡೀ ಗೋವಾ ರಾಜ್ಯವು ಅವರ ಮುಂದಿನ ಹಕ್ಕು. ಕೇರಳದ ಕಾಸರಗೋಡು ಈಗಿನ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿತ್ತು. ಜಿಲ್ಲೆಯ ಬಗ್ಗೆ ಕರ್ನಾಟಕದ ಹಕ್ಕನ್ನು ಪರಿಗಣಿಸಬೇಕಾಗುತ್ತದೆ. ಕನ್ಯಾಕುಮಾರಿ ತಿರುವಾಂಕೂರು ರಾಜಪ್ರಭುತ್ವದ ಭಾಗವಾಗಿತ್ತು. ಮಾರ್ಥಂಡಮ್ ಮತ್ತು ನಾಗರ್‌ಕೋಯಿಲ್ ಕೂಡ ಕೇರಳವು ಐತಿಹಾಸಿಕ ಆಧಾರದ ಮೇಲೆ ಈ ಪ್ರದೇಶಗಳ ಮೇಲೆ ಹಕ್ಕು ಸಾಧಿಸಬಹುದು. ಇಂತಹ ಅನೇಕ ಹಕ್ಕುಗಳು ದೇಶದ ರಾಜ್ಯಗಳಲ್ಲಿ ಹರಡುತ್ತವೆ. ಇದು ಭಾರತದ ಅಸ್ಥಿರಗೊಳಿಸುವ ಅಂಶಗಳಲ್ಲಿ ಒಂದಾಗಬಹುದು.

ರಾಜಕೀಯ ವಿಜ್ಞಾನಿ ಬೆನೆಡಿಕ್ಟ್ ಆಂಡರ್ಸನ್, ರಾಷ್ಟ್ರಗಳು ಕಲ್ಪಿತ ಸಮುದಾಯಗಳಾಗಿವೆ ಎಂದು ಉಲ್ಲೇಖಿಸಿದ್ದರು. ಅವರ ಸಿದ್ಧಾಂತದ ಪ್ರಕಾರ, ಭಾರತವೂ ಒಂದು ಕಲ್ಪಿತ ಸಮುದಾಯವಾಗಿದ್ದು, ಇದರಲ್ಲಿ ವಿವಿಧ ಸಮುದಾಯಗಳನ್ನು ಒಟ್ಟಿಗೆ ಜೋಡಿಸುವ ಸಾಮಾನ್ಯ ಸಂಯೋಜಿತ ಸಂಸ್ಕೃತಿ ಮತ್ತು ಐತಿಹಾಸಿಕ ನಿರೂಪಣೆಗಳಿವೆ. ಆದಾಗ್ಯೂ, ಆಧುನಿಕ ಭಾರತೀಯ ರಾಷ್ಟ್ರದ ಸಂಯೋಜಿತ ಇತಿಹಾಸವನ್ನು ಸವಾಲು ಮಾಡುವುದು ಭಾಷಾ ಆಧಾರವನ್ನು ಹೊಂದಿರುವ ಉಪ-ರಾಷ್ಟ್ರೀಯತೆಯಾಗಿದೆ.

ಉದ್ಧವ್ ಠಾಕ್ರೆ ಅವರ ಹೇಳಿಕೆಯು ಸಂಕುಚಿತ ಭಾಷಾ ರಾಜಕಾರಣದಿಂದ ಬಂದಿದೆ. ಅದನ್ನು ಸುಲಭವಾಗಿ ತಪ್ಪಿಸಬಹುದು. ಆದಾಗ್ಯೂ, ಭಾಷಾ ಅಲ್ಪಸಂಖ್ಯಾತರನ್ನು ಹೊಂದಿರುವ ರಾಜ್ಯಗಳು ಆ ರಾಜ್ಯದ ಆಡಳಿತದಲ್ಲಿ ಸರಿಯಾಗಿ ಪ್ರತಿನಿಧಿಸಲ್ಪಟ್ಟಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು. ಭಾಷಾ ಕೋಮುವಾದದ ಸಣ್ಣತನದಲ್ಲಿ ಭಾರತದ ಕಲ್ಪನೆಯನ್ನು ಕಳೆದುಕೊಳ್ಳಲಾಗುವುದಿಲ್ಲ. ಆದರೆ ಜನಸಂಖ್ಯೆಯ ಭಾಷಾ ಗುರುತನ್ನು ಸಹ ನಿರಾಕರಿಸಲಾಗುವುದಿಲ್ಲ.

Last Updated : Jan 20, 2021, 10:44 AM IST

ABOUT THE AUTHOR

...view details