ಅಲ್ವಾರ್ (ರಾಜಸ್ಥಾನ): ಖೇಡ್ಲಿ ಪೊಲೀಸ್ ಠಾಣಾ ಸಬ್ ಇನ್ಸ್‌ಪೆಕ್ಟರ್ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಆರೋಪಿ ಭರತ್ ಸಿಂಗ್ನನ್ನು ಬಂಧಿಸಲಾಗಿದೆ.
ಕೌಟುಂಬಿಕ ವಿವಾದದಿಂದ ವಿಚ್ಚೇದನ ಪಡೆಯುವ ಸಲುವಾಗಿ ಸಹಾಯ ಮಾಡುವಂತೆ ಸಂತ್ರಸ್ತೆ ಠಾಣೆಗೆ ಆಗಮಿಸಿದ್ದಾಳೆ. ಆದರೆ, ಸಮಸ್ಯೆ ಬಗೆಹರಿಸುತ್ತೇನೆ ಎಂದು ಸುಳ್ಳು ಹೇಳಿ ಪೊಲೀಸ್ ಠಾಣೆಯಲ್ಲೇ ಅತ್ಯಾಚಾರ ಮಾಡಿದ್ದಾನೆ.
ಇದನ್ನು ಓದಿ:ಹತ್ತು ದಿನದಲ್ಲಿ ಸಿಹಿ ಸುದ್ದಿ ನೀಡ್ತಾರಂತೆ ಮೊಹಮ್ಮದ್ ನಲಪಾಡ್!
ಕೌಟುಂಬಿಕ ವಿವಾದದಿಂದಾಗಿ ಮಾರ್ಚ್ 2ರಂದು ಪೊಲೀಸರ ಸಹಾಯ ಪಡೆಯಲು ಬಂದಿದ್ದೇನೆ. ಈ ವೇಳೆ, ಸಬ್ ಇನ್ಸ್‌ಪೆಕ್ಟರ್ ಭರತ್ ಸಿಂಗ್ ಸಹಾಯ ಮಾಡುತ್ತೇನೆ ಎಂದು ಸುಳ್ಳು ಭರವಸೆ ನೀಡಿ ಪೊಲೀಸ್ ಠಾಣೆಯ ಆವರಣದಲ್ಲಿರುವ ಕೋಣೆಯಲ್ಲಿ ಅತ್ಯಾಚಾರ ಎಸಗಿದ್ದಾನೆ. ಮಾರ್ಚ್ 2,3 ಮತ್ತು 4 ರಂದು ಆರೋಪಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ತನ್ನ ವರದಿಯಲ್ಲಿ ತಿಳಿಸಿದ್ದಾರೆ.
ಜೈಪುರ ಐಜಿ ಹವಾ ಸಿಂಗ್ ಘುಮರಿಯಾ ಮತ್ತು ಅಲ್ವಾರ್ ಎಸ್ಪಿ ತೇಜಸ್ವಿನಿ ಗೌತಮ್ ಅವರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.