ಕರ್ನಾಟಕ

karnataka

ETV Bharat / bharat

ಬುದ್ಧಿಮಾಂದ್ಯತೆಗೆ ಕಾರಣವಾಗಬಹುದು 'ಕಾಫಿ': ವರದಿ ಬಿಚ್ಚಿಟ್ಟ ಶಾಕಿಂಗ್ ಸತ್ಯ! - Coffee risk of dementia

ಹೆಚ್ಚಿನ ಕಾಫಿ ಸೇವನೆಯು ಮೆದುಳಿನ ಮೇಲೆ ಪರಿಣಾಮ ಮತ್ತು ಬುದ್ಧಿಮಾಂದ್ಯತೆಯ ಅಪಾಯವನ್ನು ತಂದೊಡ್ಡಬಹುದು ಎಂದು ಸಂಶೋಧನೆಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ 'ನ್ಯೂಟ್ರಿಷನಲ್ ನ್ಯೂರೋಸೈನ್ಸ್' ಜರ್ನಲ್​ನಲ್ಲಿ ವರದಿಯಾಗಿದೆ. SAHMRIಯಲ್ಲಿರುವ ಯುನಿಸಾದ ಆಸ್ಟ್ರೇಲಿಯನ್ ಸೆಂಟರ್ ಫಾರ್ ಪ್ರೆಸಿಷನ್ ಹೆಲ್ತ್ ಮತ್ತು ಅಂತಾರಾಷ್ಟ್ರೀಯ ಸಂಶೋಧಕರ ತಂಡ ನಡೆಸಿದ ಈ ಅಧ್ಯಯನದಲ್ಲಿ 17,702 ಮಂದಿ ಭಾಗವಹಿಸಿದ್ದರು

coffee
ಕಾಫಿ

By

Published : Jul 27, 2021, 9:27 AM IST

Updated : Jul 27, 2021, 9:41 AM IST

ಅಡಿಲೇಡ್ (ಆಸ್ಟೇಲಿಯಾ): ನೀವು ಹೆಚ್ಚು ಕಾಫಿ ಕುಡಿಯುತ್ತೀರಾ. ಒಂದು ವೇಳೆ ನೀವು ಕಾಫಿ ಪ್ರಿಯರಾದಲ್ಲಿ ಈ ವರದಿ ಓದಲೇಬೇಕು. ಹೌದು ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾಲಯ ಕಂಡುಹಿಡಿದ ಸಂಶೋಧನಾ ವರದಿಯಲ್ಲಿ ಸತ್ಯವೊಂದು ಬಹಿರಂಗವಾಗಿದ್ದು, ಹೆಚ್ಚು ಕಾಫಿ ಸೇವನೆ ಮೆದುಳಿನ ಆರೋಗ್ಯ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿಸಿದೆ.

ಹೆಚ್ಚಿನ ಕಾಫಿ ಸೇವನೆಯು ಮೆದುಳಿನ ಮೇಲೆ ಪರಿಮಾಣ ಮತ್ತು ಬುದ್ಧಿಮಾಂದ್ಯತೆಯ ಅಪಾಯವನ್ನು ತಂದೊಡ್ಡಬಹುದು ಎಂದು ಸಂಶೋಧನೆಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ 'ನ್ಯೂಟ್ರಿಷನಲ್ ನ್ಯೂರೋಸೈನ್ಸ್' ಜರ್ನಲ್​ನಲ್ಲಿ ವರದಿಯಾಗಿದೆ. SAHMRIಯಲ್ಲಿರುವ ಯುನಿಸಾದ ಆಸ್ಟ್ರೇಲಿಯನ್ ಸೆಂಟರ್ ಫಾರ್ ಪ್ರೆಸಿಷನ್ ಹೆಲ್ತ್ ಮತ್ತು ಅಂತಾರಾಷ್ಟ್ರೀಯ ಸಂಶೋಧಕರ ತಂಡ ನಡೆಸಿದ ಈ ಅಧ್ಯಯನದಲ್ಲಿ 17,702 ಮಂದಿ ಭಾಗವಹಿಸಿದ್ದರು. ಆರು ಕಪ್​ಗಳಿಗಿಂತ ಹೆಚ್ಚು ಕಾಫಿ ಕುಡಿದವರಲ್ಲಿ ಶೇ.53 ರಷ್ಟು ಮಂದಿಗೆ ಒಂದು ದಿನದ ಕಾಲ ಬುದ್ಧಿಮಾಂದ್ಯತೆಯ ಅಪಾಯ ಎದುರಾಗಿದೆ.

"ಕಾಫಿ, ಮೆದುಳಿನ ಮೇಲಿನ ಪರಿಮಾಣಗಳು, ಬುದ್ಧಿಮಾಂದ್ಯತೆಯ ಅಪಾಯಗಳು ಮತ್ತು ಪಾರ್ಶ್ವವಾಯು ಅಪಾಯಗಳ ನಡುವಿನ ಸಂಪರ್ಕಗಳ ಬಗ್ಗೆ ಇದು ಅತ್ಯಂತ ವ್ಯಾಪಕವಾದ ತನಿಖೆಯಾಗಿದೆ. ಇದು ವಾಲ್ಯೂಮೆಟ್ರಿಕ್ ಮೆದುಳಿನ ಚಿತ್ರಣ ದತ್ತಾಂಶ ಮತ್ತು ವ್ಯಾಪಕವಾದ ಗೊಂದಲಕಾರಿ ಅಂಶಗಳನ್ನು ಪರಿಗಣಿಸುವ ಅತಿದೊಡ್ಡ ಅಧ್ಯಯನವಾಗಿದೆ" ಎಂದು ವರದಿಯಲ್ಲಿ ವಿವರಿಸಲಾಗಿದೆ

ಬುದ್ಧಿಮಾಂದ್ಯತೆಯು ಕ್ಷೀಣಗೊಳ್ಳುವ ಮೆದುಳಿನ ಸ್ಥಿತಿಯಾಗಿದ್ದು ಅದು ಮೆಮೊರಿ, ಆಲೋಚನೆ, ನಡವಳಿಕೆ ಮತ್ತು ದೈನಂದಿನ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ವಿಶ್ವಾದ್ಯಂತ ಸುಮಾರು 50 ಮಿಲಿಯನ್ ಜನರಿಗೆ ಸಿಂಡ್ರೋಮ್ ಇರುವುದು ಪತ್ತೆಯಾಗಿದೆ. ಆಸ್ಟ್ರೇಲಿಯಾದಲ್ಲಿ, ಬುದ್ಧಿಮಾಂದ್ಯತೆಯು ಸಾವಿಗೆ ಎರಡನೇ ಪ್ರಮುಖ ಕಾರಣವಾಗಿದೆ. ಅಂದಾಜು 250 ಜನರು ಪ್ರತಿದಿನ ರೋಗಕ್ಕೆ ತುತ್ತಾಗುತ್ತಿದ್ದಾರೆ.

Last Updated : Jul 27, 2021, 9:41 AM IST

ABOUT THE AUTHOR

...view details