ಗಿರಿಡ್ (ಜಾರ್ಖಂಡ್): ಕೋವಿಡ್ ಕೊಂಚ ಇಳಿಕೆಯಾದ ಬಳಿಕ ದೇಶದ ಬಹುತೇಕ ಕಡೆಗಳಲ್ಲಿ ಶಾಲಾ-ಕಾಲೇಜುಗಳು ಆರಂಭವಾಗಿವೆ. ಕೆಲವೆಡೆ ಕನಿಷ್ಠ ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳು ನಾನಾ ರೀತಿಯ ಸವಾಲುಗಳನ್ನು ಎದುರಿಸಿಕೊಂಡು ಶಾಲಾ-ಕಾಲೇಜುಗಳತ್ತ ತೆರಳುತ್ತಿದ್ದಾರೆ. ಜಾರ್ಖಂಡ್‌ನ ಗಿರಿಡ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಬಸ್‌ನ ಮೇಲ್ಛಾವಣಿ ಮೇಲೆ ಕುಳಿತು ಪ್ರಯಾಣಿಸುತ್ತಿರುವುದು ಕಂಡುಬಂತು.
ಶಿಕ್ಷಣ ಸಚಿವರ ಕ್ಷೇತ್ರದಲ್ಲೇ ಕನಿಷ್ಠ ಸೌಲಭ್ಯಗಳಿಲ್ಲ; ಬಸ್ ಮೇಲೆ ಕುಳಿತು ವಿದ್ಯಾರ್ಥಿಗಳ ಪ್ರಯಾಣ ಶಿಕ್ಷಣ ಸಚಿವರ ಕ್ಷೇತ್ರದಲ್ಲೇ ವಿದ್ಯಾರ್ಥಿಗಳಿಗಿಲ್ಲ ಬಸ್ ಸೌಲಭ್ಯ!
ಡುಮ್ರಿ ಬ್ಲಾಕ್ ಡುಮ್ರಿ ವಿಧಾನಸಭಾ ಕ್ಷೇತ್ರದಲ್ಲಿ ಬರುತ್ತದೆ. ರಾಜ್ಯ ಶಿಕ್ಷಣ ಸಚಿವ ಜಾಗರಣಾಥ್ ಮಹತೋ ಈ ಕ್ಷೇತ್ರದ ಏಕೈಕ ಶಾಸಕರಾಗಿದ್ದು, ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗಲು ಕನಿಷ್ಠ ಬಸ್ ಸೌಲಭ್ಯವನ್ನು ಕಲ್ಪಿಸಿಲ್ಲ.
ಈ ಸಂಬಂಧ ಬಸ್ ಚಾಲಕ ಬಸುದೇವ್ ಪ್ರತಿಕ್ರಿಯಿಸಿ, ಬಸ್ ನಿಲ್ಲಿಸದಿದ್ದರೆ ಮರುದಿನದಿಂದ ಬಸ್ ಓಡಿಸಲು ಇಲ್ಲಿನ ಜನರು ಬಿಡುವುದಿಲ್ಲ. ಜನರು ಹೋರಾಟಕ್ಕೆ ನಿಲ್ಲುತ್ತಾರೆ. ಇವರೊಂದಿಗೆ ಜಗಳವಾಡುವುದಕ್ಕಿಂತ ಮಕ್ಕಳನ್ನು ಬಸ್ಸಿನಲ್ಲಿ ಹೀಗೆ ಕರೆದುಕೊಂಡು ಹೋಗುವುದೇ ಉತ್ತಮ ಎಂದು ತಮ್ಮ ಅಸಹಾಯಕತೆ ತೋಡಿಕೊಂಡರು.