ನವದೆಹಲಿ:ಅಕೌಂಟಿಂಗ್ (ಲೆಕ್ಕ ಪರಿಶೋಧಕ) ಪರೀಕ್ಷೆಗಳಲ್ಲಿ ಚಾಟ್‌ಜಿಪಿಟಿಗಿಂತ ವಿದ್ಯಾರ್ಥಿಗಳು ಉತ್ತಮವಾದ ಅಂಕಗಳಿಸಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಚಾಟ್ ಜಿಪಿಟಿಯ ಕಾರ್ಯಕ್ಷಮತೆಯು "ಪ್ರಭಾವಶಾಲಿಯಾಗಿದೆ" ಮತ್ತು "ಎಲ್ಲರೂ ಕಲಿಸುವ ಮತ್ತು ಕಲಿಯುವ ವಿಧಾನವನ್ನು ಬದಲಿಸುವ ಸಾಮರ್ಥ್ಯವಿದೆ" ಎಂದು ಸಂಶೋಧಕರು ತಿಳಿಸಿದ್ದಾರೆ.
openAI ತಂತ್ರಜ್ಞಾನವು ಅಕೌಂಟಿಂಗ್ ಪರೀಕ್ಷೆಗಳಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯಲು ಬ್ರಿಗಮ್ ಯಂಗ್ ಯೂನಿವರ್ಸಿಟಿ (BYU) ಮತ್ತು ಇತರ 186 ವಿಶ್ವವಿದ್ಯಾನಿಲಯಗಳ ಸಂಶೋಧಕರು ಪರೀಕ್ಷೆ ಏರ್ಪಡಿಸಿದ್ದರು. ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಸರಾಸರಿ ಶೇ. 76.7 ಗಳಿಸಿದ್ದರೆ. ಚಾಟ್ಜಿಪಿಟಿ ಶೇ 47.4 ಅಂಕಗಳನ್ನು ಪಡೆದುಕೊಂಡಿದೆ.
ಲೆಕ್ಕಪರಿಶೋಧಕ ಮಾಹಿತಿ ವ್ಯವಸ್ಥೆಗಳು (ಎಐಎಸ್) ಮತ್ತು ಲೆಕ್ಕಪರಿಶೋಧನೆಯಲ್ಲಿ ಪ್ರಶ್ನೆಗಳಲ್ಲಿ ಚಾಟ್ಜಿಪಿಟಿ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಅಂಕಗಳನ್ನು ಗಳಿಸಿದೆ. ಆದರೆ ತೆರಿಗೆ, ಹಣಕಾಸು ಮತ್ತು ವ್ಯವಸ್ಥಾಪಕ ವಿಷಯಗಳಲ್ಲಿ ಚಾಟ್‌ಜಿಪಿಟಿಯು ಕಳಪೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಕಡಿಮೆ ಅಂಕಗಳಿಸಲು ಗಣಿತದ ಪ್ರಕ್ರಿಯೆಗಳೇ ಕಾರಣ ಎಂದು ಸಂಶೋಧಕರು ಭಾವಿಸಿದ್ದಾರೆ.
ನೈಸರ್ಗಿಕ ಭಾಷಾ ಪಠ್ಯವನ್ನು ರಚಿಸಲು ಯಂತ್ರ ಕಲಿಕೆಯನ್ನು ಬಳಸುವ AI ಬಾಟ್, ನಿಜ/ಸುಳ್ಳು ಪ್ರಶ್ನೆಗಳಲ್ಲಿ ಶೇ 68.7 ಸರಿ ಉತ್ತರವನ್ನು ನೀಡಿದೆ. ಬಹು-ಆಯ್ಕೆಯ ಪ್ರಶ್ನೆಗಳಲ್ಲಿ ಶೇ 59.5 ಸರಿ ಉತ್ತರವನ್ನು ನೀಡಿದೆ. ಆದರೆ ಸಣ್ಣ ಉತ್ತರದ ಪ್ರಶ್ನೆಗಳಿಗೆ ಉತ್ತರಿಸಲು ಚಾಟ್ಜಿಪಿಟಿ ಹೋರಾಟ ನಡೆಸಿದ್ದು ಕೇವಲ ಶೇ 28.7ರಷ್ಟು ಅಂಕವನ್ನು ಪಡೆದಕೊಂಡಿದೆ. ಕೆಲವೊಮ್ಮೆ ಚಾಟ್ಜಿಪಿಟಿ ತಪ್ಪಾದ ಉತ್ತರಗಳಿಗೆ ಲಿಖಿತ ವಿವರಣೆಯನ್ನು ಒದಗಿಸಿದೆ ವಿಭಿನ್ನ ರೀತಿಯಲ್ಲಿ ಉತ್ತರಿಸಲು ಪ್ರಯತ್ನಿಸಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.