ನಮಕ್ಕಲ್(ತಮಿಳುನಾಡು):ದೇಶಾದ್ಯಂತ ಕೊರೊನಾ ವೈರಸ್ ಹಾವಳಿಯಿಂದ ಶಾಲಾ-ಕಾಲೇಜು ಬಂದ್ ಆಗಿವೆ. ಆನ್ಲೈನ್ ಮೂಲಕ ತರಗತಿಗಳು ನಡೆಯಲು ಶುರುವಾಗಿವೆ.
ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಗೆ ಮೊಬೈಲ್ ಇಲ್ಲದೇ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕೆಲವು ಗ್ರಾಮಗಳಲ್ಲಿ ನೆಟ್ವರ್ಕ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಮತ್ತಷ್ಟು ಸಮಸ್ಯೆ ಎದುರಿಸುವಂತಾಗಿದೆ.
ಬೃಹತ್ ಮರವೇರಿ ಪಾಠ ಕೇಳುವ ವಿದ್ಯಾರ್ಥಿಗಳು ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ಎರಡು ಗ್ರಾಮದ ವಿದ್ಯಾರ್ಥಿಗಳು ಆನ್ಲೈನ್ ತರಗತಿಗೋಸ್ಕರ ಸರ್ಕಸ್ ಮಾಡ್ತಿದ್ದು, ಊರ ಹೊರಗಿನ ಬೃಹತ್ ಆಲದ ಮರವೇರಿ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ. ಊರಿನಲ್ಲಿ ನೆಟ್ವರ್ಕ್ ಇಲ್ಲದ ಕಾರಣ ಪುರುಷ ಹಾಗೂ ಮಹಿಳಾ ವಿದ್ಯಾರ್ಥಿಗಳು ಕ್ಲಾಸ್ ಕೇಳಲು ಮರವೇರಬೇಕಾಗಿದ್ದು, ಈ ವೇಳೆ ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೆ ಆಪತ್ತು ಬರುವುದು ಗ್ಯಾರಂಟಿ.
ಆನ್ಲೈನ್ ಕ್ಲಾಸ್ಗೋಸ್ಕರ ಈ ಕಸರತ್ತು! ಇದನ್ನೂ ಓದಿರಿ: ಮದುವೆ ಮಂಟಪದಲ್ಲೇ ವರನಿಗೆ ಚಪ್ಪಲಿಯಿಂದ ಹೊಡೆದ ತಾಯಿ! Viral Video
ಆನ್ಲೈನ್ ತರಗತಿಗಳು ಆರಂಭಗೊಂಡಾಗಿನಿಂದಲೂ ವಿದ್ಯಾರ್ಥಿಗಳು ಪ್ರತಿ ದಿನ ಮರವೇರಿ ಪಾಠ ಕೇಳುತ್ತಿದ್ದಾರೆ. ವಿದ್ಯಾರ್ಥಿನಿಯರು ಸಹ ಈ ರೀತಿ ಸರ್ಕಸ್ ಮಾಡ್ತಿದ್ದಾರೆ. ಪೆರಪಂಚೋಲೈ ಮತ್ತು ಪೆರಿಯಾ ಗೊಂಬೈ ಎಂಬ ಗ್ರಾಮದಲ್ಲಿ ನೆಟ್ವರ್ಕ್ ಸಮಸ್ಯೆ ಇದ್ದು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಹ ಸಲ್ಲಿಕೆ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ಅವರಿಗೆ ಯಾವುದೇ ರೀತಿಯ ಸಹಾಯ ಸಿಕ್ಕಿಲ್ಲ.
ಮರವೇರಿ ಕ್ಲಾಸ್ ಕೇಳುತ್ತಿರುವ ವಿದ್ಯಾರ್ಥಿಗಳು ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಶ್ರೇಯಾ ಸಿಂಗ್, ಆದಷ್ಟು ಬೇಗ ಗ್ರಾಮಗಳಲ್ಲಿ ಅನುಕೂಲವಾಗುವ ರೀತಿಯಲ್ಲಿ ನೆಟ್ವರ್ಕ್ ಟವರ್ ನಿರ್ಮಾಣ ಮಾಡಲಾಗುವುದು ಎಂದಿದ್ದಾರೆ.