ಕರ್ನಾಟಕ

karnataka

ETV Bharat / bharat

ಸೋರುತಿಹುದು ಶಾಲೆ ಮಾಳಿಗೆ.. ಛತ್ರಿ ಹಿಡಿದು ಪಾಠ ಕೇಳುವ ಸ್ಥಿತಿ! ವಿದ್ಯಾರ್ಥಿಗಳ ಗೋಳು ಕೇಳೊರ್ಯಾರು? - ಸರ್ಕಾರಿ ಶಾಲೆ ಸೋರಿಕೆ

ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳು ಕೊಠಡಿಯಲ್ಲಿ ಛತ್ರಿ ಹಿಡಿದುಕೊಂಡು ಪಾಠ ಕೇಳುವಂತಹ ಸ್ಥಿತಿ ನಿರ್ಮಾಣಗೊಂಡಿದೆ.

Madhya Pradesh Government Schools
Madhya Pradesh Government Schools

By

Published : Jul 27, 2022, 8:24 PM IST

ಸಿಯೋನಿ(ಮಧ್ಯಪ್ರದೇಶ):ದೇಶದ ಕೆಲವೊಂದು ರಾಜ್ಯಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಹೀಗಾಗಿ, ಜನರು ಇನ್ನಿಲ್ಲದ ಸಮಸ್ಯೆ ಎದುರಿಸುವಂತಾಗಿದೆ. ಇದೀಗ ಮಧ್ಯಪ್ರದೇಶದ ಸಿಯೋನಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಛತ್ರಿ ಹಿಡಿದುಕೊಂಡು ಪಾಠ ಕೇಳುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಪ್ರಾಥಮಿಕ ಶಿಕ್ಷಣ ಅಭಿವೃದ್ಧಿಗೋಸ್ಕರ ಬಹುತೇಕ ಎಲ್ಲ ರಾಜ್ಯದ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡ್ತವೆ. ಆದರೆ, ಮಧ್ಯಪ್ರದೇಶದ ಶಿಕ್ಷಣ ವ್ಯವಸ್ಥೆ ಮಾತ್ರ ವಿಭಿನ್ನವಾಗಿದೆ. ಮಕ್ಕಳಿಗೋಸ್ಕರ ಸರಿಯಾದ ಕಟ್ಟಡ ಸಹ ಇಲ್ಲ. ಶಿಥಿಲಗೊಂಡಿರುವ ಶಾಲೆಯಲ್ಲಿ ಮಕ್ಕಳಿಗೆ ಪಾಠ-ಪ್ರವಚನ ನಡೆಯುತ್ತಿದೆ. ಮಳೆಗಾಲಯದಲ್ಲಿ ವಿದ್ಯಾರ್ಥಿಗಳು ಪ್ರತಿದಿನ ಛತ್ರಿ ಹಿಡಿದುಕೊಂಡು ಪಾಠ ಕೇಳುವಂತಹ ಸ್ಥಿತಿ ನಿರ್ಮಾಣಗೊಂಡಿದೆ.

ಛತ್ರಿ ಹಿಡಿದುಕೊಂಡು ಪಾಠ ಕೇಳುವ ಮಕ್ಕಳು

ಶಾಲೆ ಯಾವಾಗ ಬೀಳುತ್ತೋ ಎಂಬ ಭಯದಲ್ಲೇ ವಿದ್ಯಾರ್ಥಿಗಳು ಪಾಠ ಕೇಳುವ ಸ್ಥಿತಿ ನಿರ್ಮಾಣಗೊಂಡಿದೆ. ಹೀಗಾಗಿ, ಮಕ್ಕಳನ್ನ ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕ್ತಿದ್ದಾರೆ. ಈ ಶಾಲೆಯಲ್ಲಿ 35 ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿದ್ದು, ಸುಮಾರು 12 ವರ್ಷಗಳ ಹಿಂದೆ ಈ ಶಾಲೆ ನಿರ್ಮಾಣಗೊಂಡಿದೆ. ನಿರಂತರವಾಗಿ ಶಾಲೆ ಸೋರುತ್ತಿರುವ ಕಾರಣ ಗೋಡೆ ಶಿಥಿಲಗೊಂಡಿವೆ.

ಇದನ್ನೂ ಓದಿರಿ:ರೋಡ್ ರೋಮಿಯೋಗೆ ಚಪ್ಪಲಿ ಏಟು.. ನಡುರಸ್ತೆಯಲ್ಲೇ ಥಳಿಸಿದ ಮಹಿಳೆ!

ದೂರು ನೀಡಿದರೂ ಗಮನ ಹರಿಸದ ಅಧಿಕಾರಿಗಳು: ಶಾಲೆಯ ಪರಿಸ್ಥಿತಿ ಕುರಿತು ಅನೇಕ ಸಲ ಮೇಲಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೆ,ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿಲ್ಲ. ಜೊತೆಗೆ ಶಾಲೆಯ ಸ್ಥಿತಿ ನೋಡಲು ಯಾರೊಬ್ಬರು ಇಲ್ಲಿಗೆ ಬಂದಿಲ್ಲ ಎಂಬ ಆರೋಪವಿದೆ. ಇನ್ನೂ ವಿದ್ಯಾರ್ಥಿಗಳಿಗೋಸ್ಕರ ಕುಡಿಯುವ ನೀರಿನ ವ್ಯವಸ್ಥೆ ಕೂಡ ಸರಿಯಾಗಿಲ್ಲ. ಶೌಚಾಲಯಗಳ ಸ್ಥಿತಿ ಹೇಳ ತೀರದಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ABOUT THE AUTHOR

...view details