ಕರ್ನಾಟಕ

karnataka

ETV Bharat / bharat

ಯೂಟ್ಯೂಬ್ ನೋಡಿ 10ನೇ ತರಗತಿ ಬಾಲಕನಿಂದ ಕೊಲೆ: ವಿಚಾರಣೆಯಲ್ಲಿ ಆಘಾತಕಾರಿ ಸಂಗತಿ ಬಯಲು - ಉತ್ತರ ಪ್ರದೇಶ

ಪೋಷಕರು ಶಾಲೆಗೆ ಹೋಗಲು ಹೇಳಬಾರದು ಎಂಬ ಕಾರಣಕ್ಕೆ ಯೂಟ್ಯೂಬ್​ನಲ್ಲಿ ಕೊಲೆ ಬಗ್ಗೆ ವಿಡಿಯೋಗಳನ್ನು ನೋಡಿ ತನ್ನದೇ ಪ್ರದೇಶದ ಬಾಲಕನನ್ನು ಹತ್ತನೇ ತರಗತಿ ವಿದ್ಯಾರ್ಥಿ ಕೊಂದು ಹಾಕಿದ್ದಾನೆ. ಇಂಥದ್ದೊಂದು ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

Ghaziabad boy murder
ಕೊಲೆ

By

Published : Aug 24, 2022, 8:19 PM IST

ಘಾಜಿಯಾಬಾದ್(ಉತ್ತರ ಪ್ರದೇಶ):ಬಾಲಕನೊಬ್ಬಯೂಟ್ಯೂಬ್ ಮತ್ತು ಇಂಟರ್ನೆಟ್ ಮೂಲಕ ಕೊಲೆ ಮಾಡುವ ವಿಧಾನವನ್ನು ತಿಳಿದುಕೊಂಡು ಸಂಚು ರೂಪಿಸಿ ದುಷ್ಕೃತ್ಯ ಎಸಗಿರುವ ಘಟನೆ ಘಾಜಿಯಾಬಾದ್​ನ ಮಸೂರಿಯಲ್ಲಿ ನಡೆದಿದೆ. ಹತ್ತನೇ ತರಗತಿ ಓದಲಾಗದೇ ಶಾಲೆಗೆ ಹೋಗುವುದರಿಂದ ತಪ್ಪಿಸಿಕೊಳ್ಳಲು ಕೊಲೆ ಮಾಡಿದ್ದಾನೆ. ಜೈಲಿಗೆ ಹೋದರೆ ಆರಾಮಾಗಿರಬಹುದು ಎಂಬುದನ್ನು ಯೂಟ್ಯೂಬ್​ನಲ್ಲಿ ನೋಡಿಕೊಂಡಿದ್ದ ಎಂದು ತಿಳಿದು ಬಂದಿದೆ.

ಸೋಮವಾರ 13 ವರ್ಷದ ಬಾಲಕನನ್ನು ಹತ್ತನೇ ತರಗತಿಯಲ್ಲಿ ಓದುತ್ತಿದ್ದ 16 ವರ್ಷದ ಬಾಲಕ ಕೊಲೆ ಮಾಡಿದ್ದಾನೆ. ಆರೋಪಿ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ, "ನನಗೆ ಶಾಲೆಗೆ ಹೋಗಿ ಓದಲು ಆಸಕ್ತಿ ಇಲ್ಲ. ಆದರೆ ಮನೆಯವರು ಒತ್ತಾಯ ಮಾಡಿ ಕಳುಹಿಸುತ್ತಿದ್ದಾರೆ. ಇದರಿಂದ ಸಿಟ್ಟಿಗೆದ್ದು ನಮ್ಮದೇ ಏರಿಯಾದ ಬಾಲಕನನ್ನು ಕೊಲೆ ಮಾಡಿದ್ದೇನೆ" ಎಂದು ವಿವರಿಸಿದ್ದಾನೆ.

ಮೃತ ಬಾಲಕನ ಶವ ದೆಹಲಿ-ಮೀರತ್ ಎಕ್ಸ್‌ಪ್ರೆಸ್ ವೇ ಕೆಳಗೆ ಪತ್ತೆಯಾಗಿದೆ. ಬಾಲಕನ ಹತ್ಯೆಗೆ ಬಿಯರ್ ಬಾಟಲಿ ಬಳಸಲಾಗಿತ್ತು. ಅಲ್ಲದೆ, ಕೊಲೆಯಾದ ಬಾಯಿಂದ ನೊರೆ ಬರುತ್ತಿದ್ದ ಕಾರಣ ಆರೋಪಿಯು ಬಾಲಕನ ಕತ್ತು ಹಿಸುಕಿದ್ದಾನೆ ಎಂದು ತಿಳಿದುಬಂದಿದೆ.

"ಆರೋಪಿಯ ಪಾಲಕರು ಆತನಿಗೆ ಓದುವಂತೆ ಒತ್ತಡ ಹೇರಿದ್ದಾರೆ. ಹೀಗಾಗಿ ಆತ ತನ್ನ ಪ್ರದೇಶದಲ್ಲಿ ವಾಸಿಸುತ್ತಿದ್ದ ಬಾಲಕನನ್ನು ತನ್ನೊಂದಿಗೆ ಕರೆದುಕೊಂಡು ಹೋಗಿ ಕೊಲೆಗೈದಿದ್ದಾನೆ. ಘಟನೆಯ ನಂತರ ಯಾರೂ ಶಾಲೆಗೆ ಹೋಗುವಂತೆ ಕೇಳುವುದಿಲ್ಲ ಎಂಬ ಕಾರಣಕ್ಕೆ ತಾನು ಕೃತ್ಯ ಎಸಗಿರುವುದಾಗಿ ಆರೋಪಿ ತಿಳಿಸಿದ್ದಾನೆ" ಎಂದು ಪೊಲೀಸ್ ಅಧಿಕಾರಿ ಆಕಾಶ್ ಪಟೇಲ್ ಹೇಳಿದರು.

ಇದನ್ನೂ ಓದಿ :ಎಂಟು ತಿಂಗಳ ತುಂಬು ಗರ್ಭಿಣಿ ಪತ್ನಿಗೆ ಹೊಡೆದು ಕೊಂದ ಪೊಲೀಸ್​: ಹೊಟ್ಟೆಯಲ್ಲೇ ಶಿಶು ಕೂಡ ಸಾವು

ABOUT THE AUTHOR

...view details