ಲಖನೌ, ಉತ್ತರಪ್ರದೇಶ:ಶಾಲಾ- ಕಾಲೇಜಿನಲ್ಲಿ ಮಕ್ಕಳು ತಪ್ಪು ಮಾಡಿದರೆ ಈ ಹಿಂದೆ ದಂಡಿಸಲಾಗುತ್ತಿತ್ತು. ಈಗ ದಂಡಿಸುವುದು ಬಿಡಿ, ಬೈದರೂ ಕಷ್ಟ ಎಂಬಂತಾಗಿದೆ. ಉತ್ತರಪ್ರದೇಶದಲ್ಲಿ ವಿದ್ಯಾರ್ಥಿಗಳಿಬ್ಬರು ಕಿತ್ತಾಡಿಕೊಂಡಿದ್ದನ್ನು ತಪ್ಪು ಎಂದು ಹೇಳಿ ಓರ್ವ ವಿದ್ಯಾರ್ಥಿಯನ್ನು ಬೈದಿದ್ದಕ್ಕೆ ಕೋಪಗೊಂಡ ಆತ ಪ್ರಾಂಶುಪಾಲರ ಮೇಲೆಯೇ ಪಿಸ್ತೂಲಿನಿಂದ ಗುಂಡಿನ ದಾಳಿ ಮಾಡಿದ್ದಾನೆ. ಪ್ರಾಂಶುಪಾಲರ ಸ್ಥಿತಿ ಗಂಭೀರವಾಗಿದೆ.
ಏನಾಯ್ತು?:ಇಲ್ಲಿನ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿಗಳಿಬ್ಬರು ಯಾವುದೋ ಕಾರಣಕ್ಕಾಗಿ ಕಿತ್ತಾಡಿಕೊಂಡಿದ್ದಾರೆ. ಓರ್ವ ಇನ್ನೊಬ್ಬನನ್ನು ಥಳಿಸಿದ್ದ. ಇದು ಪ್ರಾಂಶುಪಾಲರ ಗಮನಕ್ಕೆ ಬಂದು ಅವರು ಹಲ್ಲೆ ಮಾಡಿದ ವಿದ್ಯಾರ್ಥಿಯನ್ನು ಬೈದಿದ್ದಾರೆ. ಅಲ್ಲಿಂದ ಆತನನ್ನು ತೆರಳುವಂತೆ ಹೇಳಿದ್ದಾರೆ.
ಇದರಿಂದ ಅವಮಾನಗೊಡ ಆತ, ಮರುದಿನ 315 ಬೋರ್ ಪಿಸ್ತೂಲ್ ಸಮೇತ ಕಾಲೇಜಿಗೆ ಆಗಮಿಸಿದ್ದಾನೆ. ಈ ವೇಳೆ, ಕಾಲೇಜಿನಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವನ್ನು ಪ್ರಾಂಶುಪಾಲರು ವೀಕ್ಷಿಸುತ್ತಿದ್ದರು. ಅಲ್ಲಿಗೆ ಬಂದ ಆ ವಿದ್ಯಾರ್ಥಿ ರಿವಾಲ್ವರ್ನಿಂದ ಏಕಾಏಕಿ ಪ್ರಾಂಶುಪಾಲರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.