ನಳಂದಾ(ಬಿಹಾರ):ಬಿಹಾರದ ನಳಂದಾದಲ್ಲಿ ಇಂಟರ್‌ಮೀಡಿಯೇಟ್(ಪಿಯು) ಪರೀಕ್ಷೆ ವೇಳೆ ವಿಚಿತ್ರ ಘಟನೆಯೊಂದು ನಡೆದಿದೆ. ಬಿಹಾರ ಬೋರ್ಡ್‌ನ 12 ನೇ ತರಗತಿ ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಯೊಬ್ಬ ಪರೀಕ್ಷಾ ಕೊಠಡಿಯಲ್ಲೇ ಮೂರ್ಛೆ ಹೋಗಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, ಆ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ ಆ ವಿದ್ಯಾರ್ಥಿ ಮೂರ್ಛೆ ಹೋಗಿರುವ ಕಾರಣ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಹೌದು, 500 ಹುಡುಗಿಯರಿರುವ ವಿದ್ಯಾರ್ಥಿನಿಯರ ಕೇಂದ್ರದಲ್ಲಿ ಆತನೊಬ್ಬನೇ ಕುಳಿತುಕೊಂಡು ಪರೀಕ್ಷೆ ಬರೆಯುವಂತಾಗಿದೆ. ಇಷ್ಟೊಂದು ಹುಡುಗಿಯರ ನಡುವೆ ಪರೀಕ್ಷೆ ಬರೆಯಬೇಕಾ ಎಂದು ಭಯ ಉಂಟಾಗಿ ಮೂರ್ಛೆ ಹೋಗಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆ ನಗರದ ಬ್ರಿಲಿಯಂಟ್ ಕಾನ್ವೆಂಟ್ ಖಾಸಗಿ ಶಾಲೆಯಲ್ಲಿ ಬುಧವಾರ ನಡೆದಿದೆ.
ಬಾಲಕಿಯರನ್ನು ನೋಡಿ ಪ್ರಜ್ಞೆ ತಪ್ಪಿದ ವಿದ್ಯಾರ್ಥಿ: ಅಲ್ಲಮ ಇಕ್ಬಾಲ್ ಕಾಲೇಜಿನ ವಿದ್ಯಾರ್ಥಿ ಮನೀಶ್ ಶಂಕರ್ (17) ಮೂರ್ಛೆ ಹೋದ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಮನೀಶ್ ತನ್ನ ತಂದೆ ಸಚ್ಚಿದಾನಂದ ಪ್ರಸಾದ್ ಅವರ ಜೊತೆ ಸುಂದರ್‌ಗಡ್‌ನಲ್ಲಿರುವ ಪರೀಕ್ಷಾ ಕೇಂದ್ರ ಬ್ರಿಲಿಯಂಟ್ ಕಾನ್ವೆಂಟ್ ಸ್ಕೂಲ್ಗೆ ತೆರಳಿದ್ದಾನೆ. ಮನೀಶ್ ಗಣಿತ ಪರೀಕ್ಷೆ ಬರೆಯಲು ನಿಗದಿತ ವೇಳಾಪಟ್ಟಿಯಂತೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು. ಪರೀಕ್ಷೆ ಅಂದ್ಮೇಲೆ ವಿದ್ಯಾರ್ಥಿಗಳು ನರ್ವಸ್ ಆಗುವುದು ಕಾಮಾನ್.. ಅದರಲ್ಲಿ ಗಣಿತ ಪರೀಕ್ಷೆ.. ಮನೀಶ್ ಮೊದಲೇ ನರ್ವಸ್ ಆದಂತೆ ಕಾಣುತ್ತಿದೆ. ಆಗ ತಮ್ಮ ಸೀಟಿಗೆ ಹೋದಾಗ ಹಾಲ್ನಲ್ಲಿ ಬಹಳಷ್ಟು ಹುಡುಗಿಯರು ಇರುವುದನ್ನೇ ನೋಡಿದ್ದಾನೆ. ಇದರಿಂದ ಮತ್ತಷ್ಟು ಭಯದಿಂದ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾನೆ.