ಪುಣೆ:ಮಕ್ಕಳಿಗೂ ಹೃದಯಾಘಾತ ತಪ್ಪಿದ್ದಲ್ಲ. ಮಹಾರಾಷ್ಟ್ರದ ರಾಯರೇಶ್ವರ ಕೋಟೆಗೆ ಪ್ರವಾಸಕ್ಕೆ ಬಂದಿದ್ದ ವೇಳೆ ಹೃದಯಾಘಾತಕ್ಕೀಡಾಗಿ 17 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಆಘಾತಕಾರಿ ಘಟನೆ ಪುಣೆಯಲ್ಲಿ ನಡೆದಿದೆ.
ಶುಭಂ ಪ್ರದೀಪ್ ಚೋಪ್ಡೆ ಮೃತ ವಿದ್ಯಾರ್ಥಿ. ನಿನ್ನೆ ಬಾರಾಮತಿಯಲ್ಲಿರುವ ಶಾರದಾಬಾಯಿ ಪವಾರ್ ವಿದ್ಯಾನಿಕೇತನ ಜೂನಿಯರ್ ಕಾಲೇಜಿನ 46 ವಿದ್ಯಾರ್ಥಿಗಳು ಮತ್ತು 4 ಶಿಕ್ಷಕರು ರಾಯರೇಶ್ವರ ಕೋಟೆಗೆ ಪ್ರವಾಸಕ್ಕೆ ಬಂದಿದ್ದರು. ಬೆಳಗ್ಗೆ 9 ಗಂಟೆಗೆ ಭೋರ್- ರಾಯರೇಶ್ವರ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ಉಪಾಹಾರ ಸೇವಿಸಿದ ಬಳಿಕ ಹೊರಡಲು ಸಿದ್ಧರಾಗಿದ್ದಾಗ ವಿದ್ಯಾರ್ಥಿ ಶುಭಂ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡಿದ್ದಾನೆ.