ಕರ್ನಾಟಕ

karnataka

By

Published : Apr 24, 2022, 11:03 AM IST

ETV Bharat / bharat

ವಿದ್ಯಾರ್ಥಿ ಸಾವು: ವಿಶ್ವಭಾರತಿಯಲ್ಲಿ ಉದ್ವಿಗ್ನ ಪರಿಸ್ಥಿತಿ, ಉಪಕುಲಪತಿಗಳ ಮನೆಗೆ ಪೊಲೀಸ್ ರಕ್ಷಣೆ

ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ವಿಶ್ವಭಾರತಿ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆಗಳು ತೀವ್ರಗೊಂಡಿವೆ. ಎರಡು ದಿನಗಳ ಬಳಿಕ ವಿದ್ಯಾರ್ಥಿಯೊಬ್ಬ ತನ್ನ ಪೋಷಕರೊಂದಿಗೆ ವಿದ್ಯಾಲಯದ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಈ ಬಗ್ಗೆ ವಿದ್ಯಾರ್ಥಿಯನ್ನು ಕೊಲೆ ಮಾಡಲಾಗಿದೆ ಜೊತೆಗೆ ವಿಶ್ವವಿದ್ಯಾಲಯವು ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವುದಾಗಿ ಪ್ರತಿಭಟನಾಕಾರರು ಹೇಳಿದ್ದಾರೆ..

student-death-situation-tense-at-visva-bharati-cops-deployed-outside-vc-home
ವಿದ್ಯಾರ್ಥಿ ಸಾವು: ವಿಶ್ವಭಾರತಿಯಲ್ಲಿ ಉದ್ವಿಗ್ನ ಪರಿಸ್ಥಿತಿ, ಉಪಕುಲಪತಿಗಳ ಮನೆಗೆ ಪೊಲೀಸ್ ರಕ್ಷಣೆ

ಕೋಲ್ಕತ್ತಾ :ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ವಿಶ್ವಭಾರತಿ ವಿಶ್ವ ವಿದ್ಯಾಲಯದಲ್ಲಿ ಪ್ರತಿಭಟನೆಗಳು ತೀವ್ರಗೊಂಡಿವೆ. ಎರಡು ದಿನಗಳ ಬಳಿಕ ವಿದ್ಯಾರ್ಥಿಯೊಬ್ಬ ತನ್ನ ಪೋಷಕರೊಂದಿಗೆ ವಿದ್ಯಾಲಯದ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಈ ಬಗ್ಗೆ ವಿದ್ಯಾರ್ಥಿಯನ್ನು ಕೊಲೆ ಮಾಡಲಾಗಿದೆ ಜೊತೆಗೆ ವಿಶ್ವವಿದ್ಯಾಲಯವು ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವುದಾಗಿ ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಮೃತ ವಿದ್ಯಾರ್ಥಿಯು ಸಂಸ್ಥೆಯು ನಡೆಸುತ್ತಿರುವ 'ಪಥ ಭವನ' ಶಾಲೆಯ 12ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಬಾಲಕನ ಸಾವಿನ ಬಗ್ಗೆ ಮಾಹಿತಿ ನೀಡುವಂತೆ ಬಾಲಕನ ಪೋಷಕರು ಮತ್ತು ಇತರ ವಿದ್ಯಾರ್ಥಿಗಳು ಉಪಕುಲಪತಿ ಬಿದ್ಯುತ್ ಚಕ್ರವರ್ತಿ ಅವರನ್ನು ಒತ್ತಾಯಿಸಿದ್ದು, ಕಳೆದ ಎರಡು ದಿನಗಳಿಂದ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಪ್ರತಿಭಟನೆಗಳು ನಡೆಸುತ್ತಿದ್ದಾರೆ.

ಕೆಲ ಪ್ರತಿಭಟನಾಕಾರರು ಉಪಕುಲಪತಿಗಳ ನಿವಾಸದ ಬಳಿಯೂ ಪ್ರತಿಭಟನೆ ನಡೆಸಿದ್ದು, ಮುಖ್ಯ ಗೇಟ್‌ನ ಬೀಗ ಒಡೆದು ಒಳ ನುಗ್ಗಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕುಲಪತಿಗಳ ನಿವಾಸದ ಹೊರಗೆ ಪೊಲೀಸ್ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಲಕನ ಸಾವಿನ ಬಗ್ಗೆ ಸಂಬಂಧಿಕರು ಶಾಂತಿನಿಕೇತನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತಮ್ಮ ಮಗುವನ್ನು ಕೊಲೆ ಮಾಡಲಾಗಿದೆ, ವಿಶ್ವಭಾರತಿ ಅಧಿಕಾರಿಗಳು ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಗವರ್ನರ್ ಜಗದೀಪ್ ಧಂಖರ್ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಮತ್ತು ಘಟನೆ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಹೆಚ್‌ ಕೆ ದ್ವಿವೇದಿ ಅವರಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ವಿಶ್ವಭಾರತಿಯಲ್ಲಿ ಪೊಲೀಸರ ನಿಯೋಜನೆಯ ನಡುವೆಯೂ ಪ್ರತಿಭಟನಾಕಾರರಿಂದ ಉದ್ವಿಗ್ನತೆ ಉಂಟಾಗಿದೆ ಎಂದು ತಿಳಿದು ಬಂದಿದೆ.

ಓದಿ :ಬಿಜೆಪಿಯ ಮಾಜಿ ಸಂಸದ ಕಿರಿತ್ ಸೋಮಯ್ಯ ಮೇಲೆ ದಾಳಿ

ABOUT THE AUTHOR

...view details