ಕರ್ನಾಟಕ

karnataka

ETV Bharat / bharat

ಪ್ರಿಯಕರ ಆತ್ಮಹತ್ಯೆ.. ಜಾಲತಾಣದಲ್ಲಿ ಜೋಡಿ ಫೋಟೋ ವೈರಲ್, ಯುವತಿ ಬಾರದಲೋಕಕ್ಕೆ ಪಯಣ - ಜಾಲತಾಣದಲ್ಲಿ ಫೋಟೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್. ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ. ತೆಲಂಗಾಣದ ಗದ್ವಾಲ್ ಜಿಲ್ಲೆಯಲ್ಲಿ ಘಟನೆ.

Representative image
ಸಾಂದರ್ಭಿಕ ಚಿತ್ರ

By

Published : Nov 16, 2022, 1:15 PM IST

ಗದ್ವಾಲ್(ತೆಲಂಗಾಣ):ಪ್ರಿಯಕರನೊಂದಿಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೆಲಂಗಾಣದ ಗದ್ವಾಲ್ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

ಜಿಲ್ಲೆಯ ಅನಂತಪುರ ಗ್ರಾಮದ ಲಕ್ಷ್ಮಣ್​ ಹಾಗೂ ನಾಗಮ್ಮ ದಂಪತಿಯ ಪುತ್ರಿ ಮೇಘಲತಾ (20) ಮೃತ ವಿದ್ಯಾರ್ಥಿನಿ. ಜಿಲ್ಲಾ ಕೇಂದ್ರದ ಕಾಲೇಜಿನಲ್ಲಿ ಪದವಿ ಅಂತಿಮ ವರ್ಷದಲ್ಲಿ ಓದುತ್ತಿದ್ದ ಯುವತಿ ಅದೇ ಗ್ರಾಮದ ಹತ್ತಿರದ ಸಂಬಂಧಿ ಶಿವಕುಮಾರ್ (24) ಎಂಬಾತನನ್ನು ಪ್ರೀತಿಸುತ್ತಿದ್ದರು. ಆದರೆ ಪೋಷಕರು ಇವರ ಪ್ರೀತಿಯನ್ನು ನಿರಾಕರಿಸಿದ್ದರು. ಅಲ್ಲದೇ ಮೇಘಲತಾಗೆ ಬೇರೆ ಹುಡುಗನನ್ನು ಹುಡುಕಲು ಪ್ರಾರಂಭಿಸಿದ್ದರಂತೆ.

ಈ ವಿಷಯ ತಿಳಿದ ಶಿವಕುಮಾರ್ ನ.6ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ಅವರ ಸ್ನೇಹಿತರು ಅವರಿಬ್ಬರ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾರೆ. ಇದರಿಂದ ಮನನೊಂದ ಮೇಘಲತಾ ಮಂಗಳವಾರ ಬೆಳಗ್ಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಆತ್ಮಹತ್ಯೆಗೂ ಮುನ್ನ "ಅಪ್ಪಾ.. ನಾನು ನಿನ್ನ ಮಗಳು. ಪ್ರಾಣ ಕಳೆದುಕೊಂಡರೂ ತಪ್ಪು ಮಾಡುವುದಿಲ್ಲ. 2019ರಲ್ಲಿ ತೆಗೆದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದವರನ್ನು ಬಿಡಬೇಡಿ'' ಎಂದು ಅಪ್ಪನಿಗೆ ಮೇಘಲತಾ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಐ ಆನಂದ್ ಮಾಹಿತಿ ನೀಡಿದ್ಧಾರೆ.

ಇದನ್ನೂ ಓದಿ:2,000 ರೂಪಾಯಿ ಹಣಕ್ಕಾಗಿ ಚಾಕು ಇರಿದು ವ್ಯಕ್ತಿಯ ಬರ್ಬರ ಹತ್ಯೆ

ABOUT THE AUTHOR

...view details