ವಿಶಾಖಪಟ್ಟಣ:ಜಿಲ್ಲೆಯ ಗಾಜುವಾಕದ ಎಂಬಿಎ ವಿದ್ಯಾರ್ಥಿನಿ ಸಾಲ ಮರುಪಾವತಿಸಲಾಗದೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ವಿದ್ಯಾರ್ಥಿನಿ ಅಹಲ್ಯಾ(22) ಎಂಬಾಕೆ ಕೆಲವು ಆನ್ಲೈನ್ ಆ್ಯಪ್ಗಳಿಂದ ಸಾಲ ಪಡೆದಿದ್ದರು. ಆದರೆ, ಈ ವೇಳೆ ಆ್ಯಪ್ನಿಂದ ಪದೇ ಪದೆ ಸಾಲ ಮರುಪಾವತಿಸುವಂತೆ ಕರೆಗಳು, ಮೆಸೇಜ್ಗಳು ಬರುತ್ತಿದ್ದವು ಎಂದು ವಿದ್ಯಾರ್ಥಿನಿಯ ತಾಯಿ ಮಾಹಿತಿ ನೀಡಿದ್ದಾರೆ.
ಸಾಲ ಮರುಪಾವತಿಸುವಂತೆ ಆನ್ಲೈನ್ ಆ್ಯಪ್ಗಳ ಒತ್ತಡ: ಎಂಬಿಎ ವಿದ್ಯಾರ್ಥಿನಿ ನೇಣಿಗೆ ಶರಣು - student suicide
ವಿದ್ಯಾರ್ಥಿನಿ ಅಹಲ್ಯಾ(22) ಎಂಬಾಕೆ ಕೆಲವು ಆನ್ಲೈನ್ ಆ್ಯಪ್ಗಳಿಂದ ಸಾಲ ಪಡೆದಿದ್ದರು. ಆದರೆ, ಈ ವೇಳೆ ಆ್ಯಪ್ನಿಂದ ಪದೇ ಪದೆ ಸಾಲ ಮರುಪಾವತಿಸುವಂತೆ ಕರೆಗಳು, ಮೆಸೇಜ್ಗಳು ಬರುತ್ತಿದ್ದವು ಎಂದು ವಿದ್ಯಾರ್ಥಿನಿಯ ತಾಯಿ ಮಾಹಿತಿ ನೀಡಿದ್ದಾರೆ.

ಎಂಬಿಎ ವಿದ್ಯಾರ್ಥಿನಿ ನೇಣಿಗೆ ಶರಣು
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ತಾಯಿ
ಆನ್ಲೈನ್ ಆ್ಯಪ್ಗಳು ಕರೆ ಮಾಡಿ ಹಣ ಪಾವತಿಸುವಂತೆ ಒತ್ತಡ ಹಾಕುತ್ತಿದ್ದವು. ಇದರಿಂದ ಮನನೊಂದ ಯುವತಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.