ಕರ್ನಾಟಕ

karnataka

ETV Bharat / bharat

10ನೇ ಮಹಡಿಯ ಕಟ್ಟಡದಿಂದ ಹಾರಿ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ - 10 ಅಂತಸ್ತಿನ ಕಟ್ಟಡದಿಮದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

ವಿದ್ಯಾರ್ಥಿಯೋರ್ವ ಬಹುಮಹಡಿ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹರಿಯಾಣದಲ್ಲಿ ಈ ಘಟನೆ ನಡೆದಿದೆ.

student-commit-suiside-in-faridabad
10ನೇ ತರಗತಿ ವಿದ್ಯಾರ್ಥಿ 10ನೇ ಮಹಡಿಯ ಕಟ್ಟಡದಿಂದ ಹಾರಿ ಆತ್ಮಹತ್ಯೆ

By

Published : Feb 26, 2022, 10:19 AM IST

ಫರಿದಾಬಾದ್​(ಹರಿಯಾಣ): 10 ನೇ ತರಗತಿಯ ವಿದ್ಯಾರ್ಥಿಯೋರ್ವ 10ನೇ ಮಹಡಿಯ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಫರಿದಾಬಾದ್ ನಲ್ಲಿ ನಡೆದಿದೆ. ಸಾಯುವ ಮುನ್ನ ಡೆತ್ ನೋಟ್ ಬರೆದಿರುವುದಾಗಿ ತಿಳಿದುಬಂದಿದೆ.

ಈ ಕುರಿತು ವಿದ್ಯಾರ್ಥಿಯ ತಾಯಿಯು ಮಗನ ಸಹಪಾಠಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸುಬೇ ಸಿಂಗ್ ಹೇಳಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಗೆ ಆತನ ಸಹಪಾಠಿಗಳು ಮಾನಸಿಕ ಕಿರುಕುಳ ನೀಡಿರುವುದಾಗಿ ಹೇಳಲಾಗ್ತಿದೆ. ಈ ಬಗ್ಗೆ ವಿದ್ಯಾರ್ಥಿಯು ಚಿಕಿತ್ಸೆಗೂ ಒಳಗಾಗಿದ್ದ. ಆತನ ತಾಯಿಯ ದೂರಿನ ಮೇರೆಗೆ ಶಾಲಾ ಮುಖ್ಯಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಜೊತೆಗೆ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಯ ತಾಯಿಯೂ ಅದೇ ಶಾಲೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಫರಿದಾಬಾದ್ ಠಾಣೆಯ ಅಧಿಕಾರಿ ಅರ್ಜುನ್ ಹೇಳಿದ್ದಾರೆ.

ಓದಿ :ಉಕ್ರೇನ್​​​​ನ ಚೆರ್ನೊಬಿಲ್​ ಬಳಿ ವಿಕಿರಣ ಹೊರಸೂಸುವಿಕೆ ಹೆಚ್ಚಳ: ವರದಿ

ABOUT THE AUTHOR

...view details