ಫತೇಹಾಬಾದ್(ಹರಿಯಾಣ): ಪರೀಕ್ಷೆ ಬಂದ್ರೆ ಸಾಕು ಕೆಲವು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಇದ್ದರೆ, ಇನ್ನೂ ಕೆಲವರು ಹೆದರುವುದುಂಟು. ಹಾಗೆ ಮತ್ತೆ ಕೆಲವರು ಪರಿಕ್ಷಾ ಕೊಠಡಿಯಲ್ಲಿ ನಕಲು ಮಾಡುವುದು ಹೇಗೆ ಎಂಬ ಆಲೋಚನೆಗೆ ಬೀಳುವುದೂ ಉಂಟು. ಈ ನಕಲು ವಿಚಾರಕ್ಕೆ ಬಂದರೆ ಮೈಕ್ರೋ ಝೆರಾಕ್ಸ್ ಅಥವಾ ಏರ್ ಫೋನ್ ಬಳಕೆ ಮಾಡಿರುವುದನ್ನು ನಾವು ಇದುವರೆಗೆ ನೋಡಿದ್ದೇವೆ. ಆದರೆ ಇಲ್ಲೋರ್ವ ವಿದ್ಯಾರ್ಥಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ.
ಹೌದು, ಅಷ್ಟಕ್ಕೂ ಆ ವಿದ್ಯಾರ್ಥಿ ಮಾಡಿದ್ದ ಖತರ್ನಾಕ್ ಐಡಿಯಾ ಏನು ಎಂಬುದನ್ನು ತಿಳಿದುಕೊಳ್ಳೋಣ.. ಹರಿಯಾಣದಲ್ಲಿ ಬೋರ್ಡ್ ಆಫ್ ಸ್ಕೂಲ್ ಎಜುಕೇಶನ್ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷೆಗಳಲ್ಲಿ ನಕಲು ಮಾಡುವವರ ಮೇಲೆ ಅಧಿಕಾರಿಗಳು ಹದ್ದಿನ ಕಣ್ಣಿರಿಸಿ ಪತ್ತೆ ಮಾಡುತ್ತಿದ್ದಾರೆ. ಫತೇಹಾಬಾದ್ ಜಿಲ್ಲೆಯಲ್ಲಿ ಇಂತಹ ಕೆಲವು ಚಾಲಾಕಿಗಳು ಸಿಕ್ಕಿಬಿದ್ದಿದ್ದಾರೆ.
ಪರೀಕ್ಷಾ ಕೊಠಡಿಯಲ್ಲಿ ಕಾಪಿ ಮಾಡಲು ವಿದ್ಯಾರ್ಥಿಯ ಖತರ್ನಾಕ್ ಐಡಿಯಾ ಇದನ್ನೂ ಓದಿ: ಸುಳ್ಳು ಮಾಹಿತಿ ಪ್ರಕಟ: 4 ಪಾಕಿಸ್ತಾನದ ಯೂಟ್ಯೂಬ್ ಚಾನೆಲ್ ಸೇರಿದಂತೆ 22 ಚಾನೆಲ್ ನಿರ್ಬಂಧಿಸಿದ ಸರ್ಕಾರ
ಸೋಮವಾರ ಇಂಗ್ಲಿಷ್ ವಿಷಯದ ಪರೀಕ್ಷೆ ನಡೆಯುತ್ತಿತ್ತು. ಫತೇಹಾಬಾದ್ ಜಿಲ್ಲೆಯ ಎರಡು ಕೇಂದ್ರಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಮೊಬೈಲ್ ತಂದಿದ್ದರು. ಇದಲ್ಲದೇ ಕೆಲ ಹುಡುಗಿಯರು ನಕಲು ಮಾಡಲು ಚೀಟಿ ತಂದಿದ್ದು, ಅವರೆಲ್ಲಾ ಸಿಕ್ಕಿಬಿದ್ದಿದ್ದಾರೆ. ಹಾಗೆ ಭೂತಾನ್ ಗ್ರಾಮದ ಸರ್ಕಾರಿ ಶಾಲೆಯಲ್ಲಿಯೂ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿದ್ದಾರೆ. ಪರಿವೀಕ್ಷಣಾ ತಂಡವು ಇಲ್ಲಿಗೆ ಬಂದಾಗ ಓರ್ವ ವಿದ್ಯಾರ್ಥಿ ಅನುಮಾನಾಸ್ಪದ ರೀತಿಯಲ್ಲಿ ವರ್ತಿಸಿದ್ದಾನೆ. ಆತನನ್ನು ಗಮನಿಸಿದ ತಂಡ ಆತನ ಬಳಿ ಹೋಗಿ ಪೇಪರ್ ಬೋರ್ಡ್ ನೋಡಿದಾಗ ಬೆಚ್ಚಿಬಿದ್ದಿದ್ದಾರೆ. ಪೇಪರ್ ಬೋರ್ಡ್ನ್ನು ಕೊರೆದು ಅಲ್ಲಿ ಮೊಬೈಲ್ ಇರಿಸಿ ಆ ಮೂಲಕ ವಿದ್ಯಾರ್ಥಿ ನಕಲು ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ.
ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಗ್ಯಾಲರಿಯಲ್ಲಿ ಇಂಗ್ಲಿಷ್ ವಿಷಯದ ಉತ್ತರಗಳು ಪತ್ತೆಯಾಗಿವೆ. ಹಾಗೆ ಅದೇ ಕೇಂದ್ರದಲ್ಲಿ ಓರ್ವ ಬಾಲಕಿ ಬಳಿ ನಕಲು ಚೀಟಿಗಳು ಪತ್ತೆಯಾವೆ. ಚೀಟಿಯನ್ನು ಆ ಬಾಲಕಿ ತನ್ನ ಶರ್ಟ್ ನಲ್ಲಿ ಬಚ್ಚಿಟ್ಟಿದ್ದಳು ಎನ್ನಲಾಗ್ತಿದೆ. ಇದಾದ ನಂತರ ಈ ತಂಡವು ಬಿರ್ದಾನ ಗ್ರಾಮದ ಪರೀಕ್ಷಾ ಕೇಂದ್ರವನ್ನೂ ಪರಿಶೀಲಿಸಿದೆ. ಇಲ್ಲಿ ಆರು ಮಂದಿ ನಕಲು ಮಾಡುತ್ತಿದ್ದುದು ಕಂಡುಬಂದಿದೆ. ಈ ಬಗ್ಗೆ ಜಿಲ್ಲಾ ಶಿಕ್ಷಣಾಧಿಕಾರಿ ದಯಾನಂದಸಿಂಗ್ ಮಾಹಿತಿ ನೀಡಿದ್ದಾರೆ.