ಕರ್ನಾಟಕ

karnataka

ETV Bharat / bharat

ದೆಹಲಿ, ಉತ್ತರ ಭಾರತದ ರಾಜ್ಯಗಳಲ್ಲಿ ಪ್ರಬಲ ಭೂಕಂಪನ: 6.6 ತೀವ್ರತೆ ದಾಖಲು

ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಆರು ರಾಜ್ಯಗಳಲ್ಲಿ ಭೂಕಂಪನ ಸಂಭವಿಸಿದೆ. ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲೂ ಭೂಮಿ ಕಂಪಿಸಿತು.

ಭೂಕಂಪನ
ಭೂಕಂಪನ

By

Published : Mar 21, 2023, 11:13 PM IST

Updated : Mar 22, 2023, 9:14 AM IST

ನವದೆಹಲಿ:ಪ್ರಬಲ ಭೂಕಂಪನಕ್ಕೆ ಉತ್ತರ ಭಾರತ ನಡುಗಿದೆ. ದೆಹಲಿ, ರಾಜಸ್ಥಾನ, ಪಂಜಾಬ್​ ಹರಿಯಾಣ ಸೇರಿದಂತೆ ಉತ್ತರ ಭಾರತದ 6 ರಾಜ್ಯಗಳಲ್ಲಿ ಭೂಕಂಪನ ಸಂಭವಿಸಿದೆ. ಮಂಗಳವಾರ ರಾತ್ರಿ 10.20 ರ ಸುಮಾರಿನಲ್ಲಿ 6.6 ತೀವ್ರತೆಯಲ್ಲಿ ಭೂಮಿ ನಡುಗಿದೆ. ನಿದ್ರೆಯಲ್ಲಿದ್ದ ಜನರು ಎದ್ದು ಮನೆಗಳಿಂದ ಓಡಿ ಹೊರಬಂದಿದ್ದಾರೆ.

ಇದಕ್ಕೂ ಮೊದಲು ಅಫ್ಘಾನಿಸ್ತಾನದಲ್ಲಿ ಭೂಕಂಪನ ಸಂಭವಿಸಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಭಾರತದ ಭೂಭಾಗಗಳಲ್ಲಿ ಪ್ರಕೃತಿ ನರ್ತನ ನಡೆದಿದೆ. ಕಂಪನದ ಅಲೆಗಳು ಪಾಕಿಸ್ತಾನದ ಲಾಹೋರ್​ ನಗರದಲ್ಲಿ ಎದ್ದಿವೆ ಎಂದು ಹೇಳಲಾಗಿದೆ.

ಏಷ್ಯಾ ರಾಷ್ಟ್ರಗಳಾದ ತುರ್ಕಮೆನಿಸ್ತಾನ, ಕಜಕಿಸ್ತಾನ್​, ಪಾಕಿಸ್ತಾನ, ತಜಕಿಸ್ತಾನ್​, ಉಜ್ಬೇಕಿಸ್ತಾನ, ಚೀನಾ ಮತ್ತು ಕಿರ್ಗಿಸ್ತಾನದಲ್ಲೂ ಭೂಮಿ ಅಲ್ಲಾಡಿದೆ. ಪಾಕಿಸ್ತಾನದಲ್ಲಿ 9 ಮಂದಿ ಸಾವನ್ನಪ್ಪಿದ್ದು 100ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಅಲ್ಲಿನ ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಉಳಿದ ರಾಷ್ಟ್ರಗಳಲ್ಲಿ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ.

ದೆಹಲಿಯ ಹಲವೆಡೆ ಕಂಪನ:ಮಂಗಳವಾರ ರಾತ್ರಿ 10.30 ರ ಸುಮಾರಿನಲ್ಲಿ ದೆಹಲಿಯ ನೋಯ್ಡಾ, ಗುರುಗ್ರಾಮ ಸೇರಿದಂತೆ ರಾಜಧಾನಿಯ ಹಲವು ಪ್ರದೇಶಗಳಲ್ಲಿ ಜನರು ಭೂಕಂಪನದ ಅನುಭವ ಹೊಂದಿದ್ದಾರೆ. ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದವರೂ ಹೊರಗೋಡಿ ಬಂದಿದ್ದಾರೆ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಭೂಮಿ ನಡುಗಿದ್ದರಿಂದ ಮನೆಗಳಲ್ಲಿದ್ದ ವಸ್ತುಗಳು ಉದುರಿ ಬಿದ್ದಿವೆ. ಒಂದು ನಿಮಿಷಕ್ಕೂ ಅಧಿಕ ಕಾಲ ನಡುಕ ಉಂಟಾಗಿತ್ತು. ಜನರು ಬೀದಿಗಳಲ್ಲಿ ಬಂದು ಚರ್ಚಿಸುತ್ತಿರುವುದು ವಿಡಿಯೋಗಳಲ್ಲಿ ಕಂಡುಬಂದಿದೆ.

ಪಾಕಿಸ್ತಾನದಲ್ಲಿ ಸಾವು-ನೋವು:ಪಾಕಿಸ್ತಾನದಲ್ಲಿ ಸಂಭವಿಸಿದ ಭೂಕಂಪನದಲ್ಲಿ 10 ಮಂದಿ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ನೂರಾರು ಜನರು ಗಾಯಗೊಂಡಿದ್ದಾರೆ. ವಾಯುವ್ಯ ಖೈಬರ್​ ಪಖ್ತುಂಕ್ವಾ ಪ್ರಾಂತ್ಯದ ಸ್ವಾತ್​ ಕಣಿವೆ ಪ್ರದೇಶವೊಂದರಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭೂಕಂಪನ ಅಲೆಗಳು ಲಾಹೋರ್​ನಲ್ಲಿ ಹಾಗೂ ಅಫ್ಘಾನಿಸ್ತಾನದಲ್ಲಿ ಎದ್ದಿರುವುದಾಗಿ ಅಂದಾಜಿಸಲಾಗಿದೆ. ಕೆಲವು ಪರ್ವತ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದೆ ಎಂದು ತಿಳಿದುಬಂದಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, 6.6 ತೀವ್ರತೆಯ ಭೂಕಂಪವು ಅಫ್ಘಾನಿಸ್ಥಾನದ ಫೈಜಾಬಾದ್‌ನಿಂದ 153 ಕಿಮೀ ಆಳದಲ್ಲಿ, 133 ಕಿಮೀ ಆಗ್ನೇಯ ವ್ಯಾಪ್ತಿಯಲ್ಲಿ ಸಂಭವಿಸಿರುವುದಾಗಿ ತಿಳಿಸಿದೆ.

ಈಚೆಗೆ ಸಂಭವಿಸಿದ ಭೀಕರ ಭೂಕಂಪನಕ್ಕೆ ಟರ್ಕಿ, ಸಿರಿಯಾ ತೀವ್ರವಾಗಿ ಹಾನಿಗೊಳಗಾಗಿವೆ. 50 ಸಾವಿರಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ. ಟರ್ಕಿ ಮತ್ತು ಸಿರಿಯಾದಲ್ಲಿ 12 ಸಾವಿರಕ್ಕೂ ಹೆಚ್ಚು ಕಟ್ಟಡಗಳು ನೆಲಸಮಗೊಂಡಿವೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ:ನೈರುತ್ಯ ರೈಲ್ವೆಯ ಕೆಲವು ರೈಲುಗಳು ರದ್ದು; ಹಲವೆಡೆ ಮಾರ್ಗ ಬದಲು

Last Updated : Mar 22, 2023, 9:14 AM IST

ABOUT THE AUTHOR

...view details