ಕರ್ನಾಟಕ

karnataka

ETV Bharat / bharat

ದಿನಗೂಲಿ ವ್ಯಕ್ತಿಯ ಡ್ಯಾನ್ಸ್‌ ಮಸ್ತ್‌ ಫೇಮಸ್: 50 ವರ್ಷದ ವ್ಯಕ್ತಿಗಾಗಿ ಈಗ ಪತ್ನಿಯರ ಸರ್ಕಸ್‌

ವಿಭಿನ್ನ ನೃತ್ಯದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್​ ಆಗಿರುವ ವ್ಯಕ್ತಿಯೋರ್ವನಿಗೋಸ್ಕರ ಇದೀಗ ಆತನ ಇಬ್ಬರು ಹೆಂಡ್ತಿಯರು ಸಂಘರ್ಷಕ್ಕಿಳಿದಿದ್ದಾರೆ.

Street dancer suddenly famous on Instagram
Street dancer suddenly famous on Instagram

By

Published : Aug 16, 2022, 9:42 PM IST

ಚೆನ್ನೈ(ತಮಿಳುನಾಡು):ಸಾಮಾಜಿಕ ಜಾಲತಾಣ ಪ್ರತಿಭೆ ಅನಾವರಣಕ್ಕೆ ಅತ್ಯುತ್ತಮ ವೇದಿಕೆಯಾಗುತ್ತಿದೆ. ಒಪ್ಪೊತ್ತಿನ ಊಟಕ್ಕಾಗಿ ರಸ್ತೆ ಬದಿಯ ಅಂಗಡಿಗಳಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ ಇಲ್ಲೊಬ್ಬರನ್ನು ಇದೀಗ ಇದೇ ಸಾಮಾಜಿಕ ಜಾಲತಾಣ ಫೇಮಸ್ ಮಾಡಿಬಿಟ್ಟಿದೆ.

ಬಾಲ್ಯದಿಂದಲೂ ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಕುಣಿಯುತ್ತಿದ್ದ ರಮೇಶ್ ಎಂಬುವವರಿಗೆ ಈಗ 50 ವರ್ಷ ಪ್ರಾಯ. ದಿನನಿತ್ಯದ ಊಟಕ್ಕಾಗಿ ಚೆನ್ನೈನ ಮೂರ್ಮಾರ್ಕೆಟ್ ಪ್ರದೇಶದ ರಸ್ತೆಬದಿಯ ಅಂಗಡಿಗಳಲ್ಲಿ ಇವರು ದಿನಗೂಲಿ ಮಾಡುತ್ತಿದ್ದರು. ಆದರೆ, ಈಗ ಸ್ನೇಹಿತರ ಸಹಾಯದೊಂದಿಗೆ ತಮ್ಮ ನೃತ್ಯಗಳ ರೀಲ್ಸ್ ವಿಡಿಯೋ ಮಾಡುತ್ತಿದ್ದು ಅವುಗಳನ್ನು ಇನ್​​​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ರಮೇಶ್​ ಅವರ ವಿಶಿಷ್ಟ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿವೆ. ನೆಟ್ಟಿಗರಿಂದ ಸಾಕಷ್ಟು ಲೈಕ್ಸ್ ಸಿಗುತ್ತಿದೆ. ಖಾಸಗಿ ವಾಹಿನಿಯ ನೃತ್ಯ ಕಾರ್ಯಕ್ರಮದಲ್ಲಿಯೂ ಭಾಗಿಯಾಗುವ ಅವಕಾಶ ಇವರಿಗೆ ಸಿಕ್ಕಿದೆ. ಈ ಮೂಲಕ ಆರ್ಥಿಕವಾಗಿಯೂ ತುಸು ಸದೃಢರಾಗಿದ್ದಾರೆ.

ದಿನಗೂಲಿ ಮಾಡ್ತಿದ್ದ ವ್ಯಕ್ತಿ ವಿಭಿನ್ನ ಡ್ಯಾನ್ಸ್​ಗಳ ಮೂಲಕ ಫೇಮಸ್

ಇದನ್ನೂ ಓದಿ:ಡೊಳ್ಳು ಚಿತ್ರದ ಮಾಯಾನಗರಿ ಸಾಂಗ್ ರಿಲೀಸ್.. ಡಾಲಿ ಧನಂಜಯ್ ಮೆಚ್ಚುಗೆ

ಇಬ್ಬರ ಹೆಂಡ್ತಿಯರ ಗಲಾಟೆ:ಗಂಡ ಜನಪ್ರಿಯತೆ​ ಗಳಿಸುತ್ತಿದ್ದಂತೆ ಆತನ ಇಬ್ಬರು ಹೆಂಡ್ತಿಯರು ಕಚ್ಚಾಡಲು ಶುರು ಮಾಡಿದ್ದಾರೆ. ಆಗಸ್ಟ್​​ 16ರಂದು ರಮೇಶ್ ಅವರ 2ನೇ ಪತ್ನಿ ಇಂಬವಳ್ಳಿ ಮೊದಲ ಪತ್ನಿಯ ವಿರುದ್ಧ ಪೊಲೀಸ್ ಕಮಿಷನರ್​ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ. ಆಗಸ್ಟ್​​ 11 ರಂದು ರಂಜಿತ್, ಕುಮಾರ್, ಜಯ್ ಮತ್ತು ರಾಜ್‌ಕುಮಾರ್ ಎಂಬುವವರು ರಮೇಶ್ ಅವರನ್ನು ಚಿತ್ರೀಕರಣಕ್ಕೆ ಕರೆದೊಯ್ದರು. ತದನಂತರ ಆತ ಮನೆಗೆ ಹಿಂತಿರುಗಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅಷ್ಟೇ ಅಲ್ಲ, ರಮೇಶ್​ ಮೊದಲ ಪತ್ನಿ ಚಿತ್ರಾ ಎಂಬುವವರು ಆತನ ಮೇಲೆ ಹಲ್ಲೆ ನಡೆಸಿ ಡ್ರಗ್ಸ್ ನೀಡಿ ಅಪಹರಣ ಮಾಡಿದ್ದಾರೆಂದು ಆರೋಪಿಸಿದ್ದಾರೆ. ನನ್ನ ಗಂಡನನ್ನು ಕರೆತರಲು ಹೋದಾಗ ಚಿತ್ರಾ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ. ತನಗೆ ಎರಡು ಹೆಣ್ಣು ಮಕ್ಕಳಿದ್ದು ರಕ್ಷಣೆ ನೀಡುವಂತೆಯೂ ಕೇಳಿಕೊಂಡಿದ್ದಾರೆ.

ಈ ಆರೋಪದ ಬಗ್ಗೆ ಚಿತ್ರಾ ಪ್ರತಿಕ್ರಿಯಿಸಿ, 24 ವರ್ಷಗಳ ಹಿಂದೆ ರಮೇಶ್ ಎಂಬುವರೊಂದಿಗೆ ಮದುವೆಯಾಗಿದ್ದೇನೆ. 10 ವರ್ಷಗಳ ಹಿಂದೆ ನಾವು ಬೇರ್ಪಟ್ಟಿದ್ದೇವೆ. ಕಳೆದ ಕೆಲ ದಿನಗಳ ಹಿಂದೆ ಮಗಳ ಮದುವೆಗೆಂದು ಬಂದಿದ್ದ ರಮೇಶ್ ಮನಸ್ಸು ಬದಲಿಸಿ ನನ್ನೊಂದಿಗೆ ಜೀವನ ನಡೆಸಲು ನಿರ್ಧರಿಸಿದರು. ಅವರನ್ನು ಯಾರೂ ಅಪಹರಿಸಿಲ್ಲ ಎಂದಿದ್ದಾರೆ.

ABOUT THE AUTHOR

...view details