ಕರ್ನಾಟಕ

karnataka

ETV Bharat / bharat

ಬೀದಿನಾಯಿಗಳಿಗೆ ಆಹಾರ ಹಕ್ಕಿದೆ, ಅವುಗಳನ್ನ ಪೋಷಿಸುವ ಹಕ್ಕೂ ಜನರಿಗಿದೆ.. ದೆಹಲಿ ಕೋರ್ಟ್​ ಆದೇಶ - ಬೀದಿನಾಯಿ

ಬೀದಿನಾಯಿಗಳು ಆಹಾರದ ಹಕ್ಕನ್ನು ಹೊಂದಿವೆ. ನಾಗರಿಕರಿಗೆ ಬೀದಿನಾಯಿಗಳನ್ನು ಪೋಷಿಸುವ ಹಕ್ಕಿದೆ. ಆದರೆ, ಈ ಹಕ್ಕನ್ನು ಚಲಾಯಿಸುವಾಗ, ಅದು ಇತರರ ಹಕ್ಕುಗಳಿಗೆ ಅಡ್ಡಿಯಾಗದಂತೆ ಕಾಳಜಿ ಮತ್ತು ಎಚ್ಚರಿಕೆ ವಹಿಸಬೇಕು..

Stray Dogs
ಬೀದಿನಾಯಿ

By

Published : Jul 2, 2021, 6:28 AM IST

ನವದೆಹಲಿ :ಬೀದಿನಾಯಿಗಳಿಗೆ ಆಹಾರದ ಹಕ್ಕಿದೆ ಮತ್ತು ಜನರಿಗೆ ಅವುಗಳನ್ನು ಪೋಷಿಸುವ ಹಕ್ಕಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಈ ಸರಿಯಾದ ಕಾಳಜಿ ಮತ್ತು ಎಚ್ಚರಿಕೆ ವಹಿಸುವಾಗ ಇತರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದೆ.

ಬೀದಿನಾಯಿಗಳಿಗೆ ಆಹಾರ ನೀಡುವ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಿದ ಹೈಕೋರ್ಟ್, ಪ್ರತಿ ನಾಯಿಯು ಒಂದು ಪ್ರಾದೇಶಿಕ ಜೀವಿ. ಅವುಗಳಿಗೆ ಜನರು ಹೆಚ್ಚಾಗಿ ಭೇಟಿ ನೀಡದ ಪ್ರದೇಶದೊಳಗೆ ಆಹಾರ ನೀಡಬೇಕು ಎಂದು ಆದೇಶಿಸಿದೆ.

ಇದನ್ನು ಓದಿ: ಬಿಳಿಯ ಖಂಡ ಅಂಟಾರ್ಟಿಕಾದಲ್ಲಿ ದಾಖಲೆಯ ತಾಪಮಾನ ದೃಢ

ಬೀದಿನಾಯಿಗಳ ಬಗ್ಗೆ ಸಹಾನುಭೂತಿ ಹೊಂದಿರುವ ಯಾವುದೇ ವ್ಯಕ್ತಿಯು ಇತರ ನಿವಾಸಿಗಳು ಭೇಟಿ ನೀಡಿದ ಯಾವುದೇ ಸ್ಥಳದಲ್ಲಿ ಅವುಗಳಿಗೆ ಆಹಾರವನ್ನು ನೀಡಬಹುದು. ಆದರೆ, ಇತರರಿಗೆ ನಾಯಿಗಳಿಗೆ ಆಹಾರವನ್ನು ನೀಡುವುದನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

"ಬೀದಿನಾಯಿಗಳು ಆಹಾರದ ಹಕ್ಕನ್ನು ಹೊಂದಿವೆ. ನಾಗರಿಕರಿಗೆ ಬೀದಿನಾಯಿಗಳನ್ನು ಪೋಷಿಸುವ ಹಕ್ಕಿದೆ. ಆದರೆ, ಈ ಹಕ್ಕನ್ನು ಚಲಾಯಿಸುವಾಗ, ಅದು ಇತರರ ಹಕ್ಕುಗಳಿಗೆ ಅಡ್ಡಿಯಾಗದಂತೆ ಕಾಳಜಿ ಮತ್ತು ಎಚ್ಚರಿಕೆ ವಹಿಸಬೇಕು"ಎಂದು ನ್ಯಾಯಮೂರ್ತಿ ಜೆ.ಆರ್ ಮಿಧಾ ತೀರ್ಪಿನಲ್ಲಿ ಹೇಳಿದ್ದಾರೆ.

ABOUT THE AUTHOR

...view details