ನವದೆಹಲಿ:ದೇಶದ ವಿವಿಧ ನಗರಗಳಲ್ಲಿನ ರಸ್ತೆ ರಸ್ತೆಗಳಲ್ಲಿ ಬೀದಿ ನಾಯಿ, ಬೆಕ್ಕು ಕಾಣುವುದು ಸರ್ವೇ ಸಾಮಾನ್ಯ. ಆದರೆ ದೇಶದಲ್ಲಿ ಇವುಗಳ ಒಟ್ಟು ಸಂಖ್ಯೆ ಎಷ್ಟು? ಎಂಬುದು ಯಾರಿಗೂ ಗೊತ್ತಿರಲಿಲ್ಲ. ಇದೀಗ ಈ ಕುರಿತ ವರದಿಯೊಂದು ಬಿಡುಗಡೆಯಾಗಿದೆ.
ಈ ವರದಿಯ ಪ್ರಕಾರ, ಭಾರತದಲ್ಲಿ 6.2 ಕೋಟಿ ಬೀದಿ ನಾಯಿಗಳಿವೆ. 91 ಲಕ್ಷ ಬೀದಿ ಬೆಕ್ಕುಗಳಿವೆ. ದೇಶದ ಶೇ. 77ರಷ್ಟು ಜನರು ವಾರದಲ್ಲಿ ಒಂದು ಸಲವಾದರೂ ಬೀದಿ ನಾಯಿಗಳನ್ನು ನೋಡುತ್ತಾರೆಂದು ತಿಳಿಸಿದ್ದಾರೆ.
ಭಾರತದ ಒಟ್ಟು ಜನಸಂಖ್ಯೆಯಲ್ಲಿನ ಶೇ. 68ರಷ್ಟು ಜನರು ಅಂದರೆ, ಪ್ರತಿ 10ರಲ್ಲಿ 7 ಜನರು ವಾರಕ್ಕೊಮ್ಮೆ ಬೆಕ್ಕು ಕಾಣಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ಶೇ. 70ರಷ್ಟು ಜನರು ಪ್ರತಿನಿತ್ಯ ಬೀದಿನಾಯಿ ಕಾಣಿಸಿಕೊಳ್ಳುತ್ತವೆ ಎಂಬ ಮಾಹಿತಿ ನೀಡಿದ್ದಾರೆ. ದೇಶದಲ್ಲಿರುವ 88 ಲಕ್ಷ ಬೆಕ್ಕು ಹಾಗೂ ನಾಯಿಗಳಿಗೆ ಆಶ್ರಯತಾಣಗಳಲ್ಲಿ ನೆಲೆ ಸಿಕ್ಕಿದೆ ಎಂದು ತಿಳಿದು ಬಂದಿದೆ.