ಜೈಪುರ (ರಾಜಸ್ಥಾನ):ಜೈಪುರದ ಶಾಹಪುರದ ಖೋರಲದ್ಖಾನಿ ಗ್ರಾಮದಲ್ಲಿ ಐದು ವರ್ಷದ ಬಾಲಕಿಯ ಮೇಲೆ ಬೀದಿ ನಾಯಿ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿದೆ. ಬಾಲಕಿಗೆ ಶ್ವಾಸಕೋಶದ ಸಮಸ್ಯೆಯೂ ಇದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಎದೆಯ ಮೇಲೆ ಕಚ್ಚಿದ ಗುರುತುಗಳಾಗಿವೆ ಎಂದು ಜೆ ಕೆ ಲೋನ್ ಆಸ್ಪತ್ರೆಯ ಡಾ.ಮನೀಶ್ ಶರ್ಮಾ ತಿಳಿಸಿದರು.
ರಾಜಸ್ಥಾನ: 5 ವರ್ಷದ ಬಾಲಕಿ ಮೇಲೆ ಬೀದಿ ನಾಯಿ ದಾಳಿ - kannada top news
ದೇಶದ ಕೆಲವೆಡೆ ಬೀದಿನಾಯಿಗಳ ಉಪಟಳ ಸಾಮಾನ್ಯವಾಗಿದೆ. ಅನಾರೋಗ್ಯಪೀಡಿತ ಪುಟ್ಟ ಬಾಲಕಿಯ ಮೇಲೆ ನಾಯಿಗಳು ಎರಗಿ ಗಂಭೀರವಾಗಿ ಗಾಯಗೊಳಿಸಿವೆ. ಈ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ರಾಜಸ್ಥಾನ: 5 ವರ್ಷದ ಪುಟ್ಟ ಬಾಲಕಿಯ ಮೇಲೆ ಬೀದಿ ನಾಯಿ ದಾಳಿ...ಸ್ಥಿತಿ ಗಂಬೀರ
ಬಾಲಕಿಯ ಆರೋಗ್ಯ ಸ್ಥಿತಿ ನೋಡಿಕೊಂಡು ಎದೆಗೆ ಟ್ಯೂಬ್ ಅಳವಡಿಸಲಾಗಿದೆ. ಚಿಕಿತ್ಸೆಯ ಬಳಿಕ ಆರೋಗ್ಯ ಸ್ಥಿರವಾಗಿದೆ. ಎಷ್ಟು ದಿನದಲ್ಲಿ ಚೇತರಿಸಿಕೊಳ್ಳುತ್ತಾಳೆ ಎಂದು ಹೇಳುವುದು ಕಷ್ಟ ಅವರು ಹೇಳಿದರು.
ಇದನ್ನೂ ಓದಿ:ಶ್ರದ್ಧಾ ಹತ್ಯೆ: ಅಫ್ತಾಬ್ನ ಧ್ವನಿ ಮಾದರಿ ದಾಖಲಿಸಿಕೊಂಡ ಸಿಎಫ್‌ಎಸ್‌ಎಲ್ ತಂಡ