ಕೋಯಿಕ್ಕೋಡ್ (ಕೇರಳ) : ಜಿಲ್ಲೆಯ ಅರಕ್ಕಿನಾರ್ ಎಂಬಲ್ಲಿ ಬೀದಿ ನಾಯಿಯೊಂದು ಬಾಲಕನ ಮೇಲೆ ದಾಳಿ ನಡೆಸಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೈಕಲ್ ತುಳಿದುಕೊಂಡು ಹೋಗುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಯೊಂದು ದಿಢೀರ್ ದಾಳಿ ನಡೆಸಿ ಕೈ ಕಾಲುಗಳಿಗೆ ಕಚ್ಚಿ ಗಾಯ ಮಾಡಿದೆ. ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಬಾಲಕ ಅಲ್ಲಿಯೇ ಇದ್ದ ಮನೆಯ ಒಳಗೆ ಓಡಿದ್ದಾನೆ.
ಬಾಲಕನ ಮೇಲೆ ಬೀದಿ ನಾಯಿ ದಾಳಿ.. ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಅರಕ್ಕಿನಾರ್ ಮತ್ತು ವಿಲಂಗಾಡ್ ನಲ್ಲಿ ಬೀದಿನಾಯಿಗಳು ದಾಳಿ
ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಬಾಲಕನ ಮೇಲೆ ಬೀದಿನಾಯಿ ದಾಳಿ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೋಯಿಕ್ಕೋಡ್ ನಲ್ಲಿ ಬಾಲಕನ ಮೇಲೆ ಬೀದಿ ನಾಯಿ ದಾಳಿ.. ಸಿಸಿಟಿವಿ ದೃಶ್ಯ
ಭಾನುವಾರ ಜಿಲ್ಲೆಯಲ್ಲಿ ಮೂವರು ಮಕ್ಕಳು ಸೇರಿ ನಾಲ್ವರಿಗೆ ಬೀದಿ ನಾಯಿ ಕಚ್ಚಿರುವುದಾಗಿ ವರದಿಯಾಗಿದೆ. ಅರಕ್ಕಿನಾರ್ ಮತ್ತು ವಿಲಂಗಾಡ್ ನಲ್ಲಿ ಬೀದಿನಾಯಿಗಳು ದಾಳಿ ನಡೆಸಿವೆ. ದಾಳಿಯಲ್ಲಿ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ :ಸೀರಮ್ ಇನ್ಸ್ಟಿಟ್ಯೂಟ್ಗೆ ವಂಚನೆ ಪ್ರಕರಣ: 5 ರಾಜ್ಯಗಳ ಬ್ಯಾಂಕ್‌ಗಳಿಗೆ ಹಣ ವರ್ಗಾವಣೆ