ಕಿನ್ನೌರ್ (ಹಿಮಾಚಲ ಪ್ರದೇಶ):ದೇಶದ ಸ್ವಾತಂತ್ರ್ಯಕ್ಕೆ ದೊರೆತ ನಾಲ್ಕು ವರ್ಷಗಳ ನಂತರ ಎಂದರೆ 1951ರ ಅಕ್ಟೋಬರ್ 25ರಂದು ಇಡೀ ರಾಷ್ಟ್ರವೇ ಹೊಸ ಇತಿಹಾಸ ಬರೆಯಲು ಸಜ್ಜಾಗಿತ್ತು. ಅಂದು ಸ್ವಾತಂತ್ರ್ಯ ಭಾರತದಲ್ಲಿ ಮೊದಲ ಬಾರಿಗೆ ಚುನಾವಣೆ ನಿಗದಿಯಾಗಿತ್ತು. ಹಿಮಾಚಲ ಪ್ರದೇಶದ ಒಂದು ಸಣ್ಣ ಹಳ್ಳಿಯ ಶಿಕ್ಷಕ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದ್ದರು. ಈಗ ಆ ವ್ಯಕ್ತಿಗೆ 105 ವರ್ಷಗಳಾಗಿದ್ದು, ಇವತ್ತು ಕೂಡ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.
ಹೌದು, ದೇಶದ ಮೊದಲ ಮತದಾರ ಎಂದೇ ಖ್ಯಾತಿಯಾದ ಮಾಸ್ಟರ್ ಶ್ಯಾಮ್ ಸರಣ್ ನೇಗಿ 105ನೇ ವಯಸ್ಸಿನಲ್ಲೂ ಇಂದು ಕಿನ್ನೌರ್ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮಾಡಿದರು. ಅಧಿಕೃತ ದಾಖಲೆಯ ಪ್ರಕಾರ ಸರಣ್ ನೇಗಿ 1951-52ರ ಸಾರ್ವತ್ರಿಕ ಚುನಾವಣೆಯಲ್ಲಿ ಭಾಗವಹಿಸಿದ ಇದು ದೇಶದ ಮೊದಲ ಮತದಾರ ಎಂದೇ ಹೆಸರು ವಾಸಿಯಾಗಿದ್ದಾರೆ.
ಇಂದು ಮತದಾನದ ಬಳಿಕ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದ ನಾನು ಮತ ಚಲಾಯಿಸುವ ಅವಕಾಶವನ್ನು ನಾನು ಎಂದಿಗೂ ಕಳೆದುಕೊಂಡಿಲ್ಲ. ಈ ಬಾರಿಯೂ ಮತದಾನ ಮಾಡಲು ನನಗೆ ಸಂತೋಷವಾಗಿದೆ ಎಂದು ಹೇಳಿದರು. ಅಲ್ಲದೇ, ಪ್ರತಿಯೊಬ್ಬ ಮತದಾರರು ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು.
ಮನೆಯಲ್ಲಿ ನೇಗಿ ಮತ ಚಲಾವಣೆ: ಈ ಹಿಂದಿನ ಚುನಾವಣೆಗಳ ಸಂದರ್ಭಗಳಲ್ಲಿ ಸರಣ್ ನೇಗಿ ಮತ ಚಲಾಯಿಸಲು ಹತ್ತಿರದ ಮತಗಟ್ಟೆಗೆ ಹೋಗುತ್ತಿದ್ದರು. ಆದರೆ, ಈ ಬಾರಿ 80 ವರ್ಷ ಮೇಲ್ಪಟ್ಟವರು ತಮ್ಮ ವಾಸಸ್ಥಳದಲ್ಲೇ ಮತ ಚಲಾಯಿಸಲು ಚುನಾವಣಾ ಆಯೋಗವು ವಿಶೇಷ ಅವಕಾಶ ಮಾಡಿಕೊಟ್ಟಿದೆ.