ಕರ್ನಾಟಕ

karnataka

ETV Bharat / bharat

ಕ್ರಾಂತಿಕಾರಿ ಕೇಸರಿ ಸಿಂಗ್ ಬರ್ಹತ್.. ಸ್ವಾತಂತ್ರ್ಯ ಚಳವಳಿಯಲ್ಲಿ ಬಿಲ್ವಾರದ ಕುಟುಂಬದ ವೀರಗಾಥೆ

ಕೇಸರಿ ಸಿಂಗ್ ಬರ್ಹತ್ 21 ನವೆಂಬರ್ 1872 ರಂದು ಜನಿಸಿದರು. ಅವರು ಶಹಪುರ ಪ್ರದೇಶದ ದೇವ್ ಖೇಡಾದ ಸಾಮಂತರಾಗಿದ್ದರು. ಯುವಕರಲ್ಲಿ ಕ್ರಾಂತಿಯ ಕಿಚ್ಚನ್ನು ಹೊತ್ತಿಸಿದರು. ಅವರ ಇಡೀ ಕುಟುಂಬವು ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

Story of Barhath family Rajasthan
ಸ್ವಾತಂತ್ರ್ಯ ಚಳವಳಿಯಲ್ಲಿ ಬಿಲ್ವಾರದ ಕುಟುಂಬದ ವೀರಗಾಥೆ

By

Published : Oct 23, 2021, 5:07 AM IST

ಮಹಾನ್ ಕ್ರಾಂತಿಕಾರಿ ಕೇಸರಿ ಸಿಂಗ್ ಬರ್ಹತ್ ಮತ್ತು ಅವರ ಕುಟುಂಬದ ವೀರರ ಸಾಹಸ ಶಕ್ತಿ, ಭಕ್ತಿ ಮತ್ತು ತ್ಯಾಗ ಅಮರ ಭೂಮಿಯಾದ ಶಹಪುರದ ಪ್ರತಿಯೊಂದು ಕಣ ಕಣದಲ್ಲೂ ಪ್ರತಿಧ್ವನಿಸುತ್ತದೆ. ಶಹಪುರ ರಾಜಸ್ಥಾನದ ಬಿಲ್ವಾರ ಜಿಲ್ಲೆಯಲ್ಲಿದೆ.

ಇಲ್ಲಿರುವ ವಸ್ತುಸಂಗ್ರಹಾಲಯವು ಕೇಸರಿ ಸಿಂಗ್, ಅವರ ಸಹೋದರ ಜೋರಾವರ್ ಸಿಂಗ್ ಮತ್ತು ಪುತ್ರ ಪ್ರತಾಪಸಿಂಹ ಬರ್ಹತ್ ಅವರ ಅದ್ಭುತ ಕಥೆಯನ್ನು ಚಿತ್ರಿಸುತ್ತದೆ. ಕೇಸರಿ ಸಿಂಗ್‌ನ ಪೇಟವನ್ನು ಈಗಲೂ ಮ್ಯೂಸಿಯಂನಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ.

ಸ್ವಾತಂತ್ರ್ಯ ಚಳವಳಿಯಲ್ಲಿ ಬಿಲ್ವಾರದ ಕುಟುಂಬದ ವೀರಗಾಥೆ

ಕೇಸರಿ ಸಿಂಗ್ ಬರ್ಹತ್ 21 ನವೆಂಬರ್ 1872 ರಂದು ಜನಿಸಿದರು. ಅವರು ಶಹಪುರ ಪ್ರದೇಶದ ದೇವ್ ಖೇಡಾದ ಸಾಮಂತರಾಗಿದ್ದರು. ಯುವಕರಲ್ಲಿ ಕ್ರಾಂತಿಯ ಕಿಚ್ಚನ್ನು ಹೊತ್ತಿಸಿದರು. ಅವರ ಇಡೀ ಕುಟುಂಬವು ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಸ್ವಾತಂತ್ರ್ಯ ಚಳವಳಿಯ ಕಾರ್ಯತಂತ್ರವನ್ನು ರೂಪಿಸಲು ಕೇಸರಿ ಸಿಂಗ್ ಬರ್ಹತ್ ಅವರ ಭವನದಲ್ಲಿ ರಹಸ್ಯ ಸಮಾಲೋಚನೆಗಳನ್ನು ನಡೆಸಲಾಯಿತು. ಅವರು ಮಹಾತ್ಮ ಗಾಂಧಿಗೆ ಸಂಪೂರ್ಣ ಬೆಂಬಲವನ್ನು ನೀಡಿದರು. ಕೇಸರಿ ಸಿಂಗ್ ತಮ್ಮ 'ಚೇತವಾನಿ ರಾ ಚುಂಗತ್ಯ'ದ ಮೂಲಕ ಕ್ರಾಂತಿಯ ಕಹಳೆ ಊದಿದರು. ಇದು ರಾಗ್ ಸೂರತದಲ್ಲಿ ರಚಿಸಲಾದ ಪ್ರಸಿದ್ಧ ಐತಿಹಾಸಿಕ ಕೃತಿಯಾಗಿದೆ.

23 ಡಿಸೆಂಬರ್ 1912 ರಂದು, ಕೇಸರಿ ಸಿಂಗ್ ಬರ್ಹತ್ ಅವರ ಕಿರಿಯ ಸಹೋದರ ಜೋರಾವರ್ ಸಿಂಗ್ ಬರ್ಹತ್, ದೆಹಲಿಯ ಚಾಂದನಿ ಚೌಕ್‌ನಲ್ಲಿ ಲಾರ್ಡ್ ಹಾರ್ಡಿಂಗೆಯ ಭವ್ಯ ಮೆರವಣಿಗೆಯ ವೇಳೆ ಬಾಂಬ್ ಎಸೆದರು. ಆ ಸಮಯದಲ್ಲಿ ಪ್ರತಾಪಸಿಂಹ ಬರ್ಹತ್ ಕೂಡ ಅವರ ಜೊತೆಗಿದ್ದರು. ಜೋರಾವರ್ ಸಿಂಗ್ ಅವರು ಮಧ್ಯಪ್ರದೇಶ ಮತ್ತು ರಾಜಸ್ಥಾನದ ಮಾಲ್ವಾದಲ್ಲಿ 27 ವರ್ಷಗಳ ಕಾಲ ಸಂಚರಿಸಿ ಸ್ವಾತಂತ್ರ್ಯ ಸಂದೇಶ ಸಾರಿದರು. ಅವರು 17 ಅಕ್ಟೋಬರ್ 1939 ರಂದು ನಿಧನರಾದರು.

ಕೇಸರಿ ಸಿಂಗ್ ಬರ್ಹತ್ ಅವರ ಪುತ್ರ ಪ್ರತಾಪ ಸಿಂಹ ಬರ್ಹತ್ ಕೂಡ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಪ್ರತಾಪ ಸಿಂಹ ಬರ್ಹತ್ 24 ಮೇ 1893 ರಂದು ಜನಿಸಿದರು. 1912 ರಲ್ಲಿ ಲಾರ್ಡ್ ಹಾರ್ಡಿಂಜ್ ಮೇಲೆ ಬಾಂಬ್ ಎಸೆದಿದ್ದಕ್ಕಾಗಿ ಅವರು 25 ನೇ ವಯಸ್ಸಿನಲ್ಲಿ 24 ಮೇ 1918 ರಂದು ಹುತಾತ್ಮರಾದರು.

ನಮ್ಮ ಪೂರ್ವಜರ ಬಗ್ಗೆ ಹೆಮ್ಮೆ ಇದೆ ಎಂದು ಕೇಸರಿ ಸಿಂಗ್ ಬರ್ಹತ್ ಸರಳಾ ಕನ್ವರ್ ಅವರ ಮೊಮ್ಮಗಳು ಹೇಳುತ್ತಾರೆ. ನಿಸ್ಸಂದೇಹವಾಗಿ, ಭಾರತೀಯ ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ ಬರ್ಹತ್ ಕುಟುಂಬವು ದೊಡ್ಡ ಪಾತ್ರವನ್ನು ಹೊಂದಿದೆ. ಈ ಕುಟುಂಬದ ತ್ಯಾಗ, ಭಕ್ತಿ ಮತ್ತು ಭಾರತವನ್ನು ಬ್ರಿಟಿಷರ ಹಿಡಿತದಿಂದ ಮುಕ್ತಗೊಳಿಸಬೇಕೆಂಬ ಸಂಕಲ್ಪ ಭರತ ಭೂಮಿಯ ಇತಿಹಾಸದಲ್ಲಿ ಅಜಾರಾಮರ.

ABOUT THE AUTHOR

...view details