ಕರ್ನಾಟಕ

karnataka

ETV Bharat / bharat

ವಿಎಚ್‌ಪಿ ಶೋಭಾ ಯಾತ್ರೆ ವೇಳೆ ಕಲ್ಲು ತೂರಾಟ: ಮೂವರು ಪೊಲೀಸರು ಸೇರಿ 20 ಜನರಿಗೆ ಗಾಯ - ಮೊಬೈಲ್​ ಎಸ್‌ಎಂಎಸ್

ಹರ್ಯಾಣದಲ್ಲಿ ವಿಎಚ್‌ಪಿ ಶೋಭಾ ಯಾತ್ರೆ ವೇಳೆ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಮೂವರು ಪೊಲೀಸರು ಸೇರಿದಂತೆ 20 ಮಂದಿ ಗಾಯಗೊಂಡಿದ್ದಾರೆ. ಮೊಬೈಲ್​ ಎಸ್‌ಎಂಎಸ್ ಮತ್ತು ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.

Nuh Birjmandal Yatra
ವಿಎಚ್‌ಪಿ ಶೋಭಾ ಯಾತ್ರೆ ವೇಳೆ ಕಲ್ಲು ತೂರಾಟ

By

Published : Jul 31, 2023, 10:50 PM IST

ನುಹ್ (ಹರಿಯಾಣ):ಹರಿಯಾಣದ ನುಹ್ ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಬ್ರಿಜ್ ಮಂಡಲ್ ಯಾತ್ರೆಯ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಈ ವೇಳೆ ವಾಹನಗಳ ಮೇಲೆ ಕಲ್ಲು ತೂರಾಟ, ಗುಂಡು ಹಾರಿಸಿದ ಸದ್ದು ಕೇಳಿದೆ. ಈ ಘರ್ಷಣೆಯಲ್ಲಿ ಒಟ್ಟು 20 ಮಂದಿ ಗಾಯಗೊಂಡಿರುವ ಬಗ್ಗೆ ಎಂದು ವರದಿಯಾಗಿದೆ. ಗಾಯಗೊಂಡವರಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಸೇರಿದ್ದಾರೆ.

ಮಾಹಿತಿಯ ಪ್ರಕಾರ, ಅಲ್ ಆಫಿಯಾ ಜನರಲ್ ಆಸ್ಪತ್ರೆ ಮಂಡಿಖೇಡಾದಲ್ಲಿ ಮೂವರು, ಪುನ್ಹಾನಾದಲ್ಲಿ ಒಬ್ಬರು, ನುಹ್ ಸಿಎಚ್‌ಸಿಯಲ್ಲಿ 8 ಜನ, ತೌಡು ಸಿಎಚ್‌ಸಿಯಲ್ಲಿ ಮೂವರು, ನಲ್ಹಾರ್‌ನ ಸರ್ಕಾರಿ ಶಹೀದ್ ಹಸನ್ ಖಾನ್ ಮೇವಾಟಿ ವೈದ್ಯಕೀಯ ಕಾಲೇಜಿನಲ್ಲಿ ಐವರನ್ನು ದಾಖಲಿಸಲಾಗಿದೆ.

ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆಯನ್ನು ಪ್ರತಿವರ್ಷ ಆಯೋಜಿಸಲಾಗುತ್ತದೆ. ಎಂದಿನಂತೆ ಈ ವರ್ಷವೂ ಈ ಯಾತ್ರೆಯು ನುಹ್ ಜಿಲ್ಲೆಯ ಹಲವು ಪ್ರದೇಶಗಳ ಮೂಲಕ ನಲ್ಹಾಡ್​ ಶಿವ ದೇವಾಲಯಕ್ಕೆ ಹೋಗುತ್ತಿತ್ತು. ಯಾತ್ರೆಯ ವೇಳೆ ಗುರುಗ್ರಾಮದಿಂದ ನೂರಾರು ವಾಹನಗಳಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಶಿವನಿಗೆ ಜಲಾಭಿಷೇಕ ಮಾಡಲು ನಲ್ಹಾಡ್​ ಶಿವ ದೇವಸ್ಥಾನಕ್ಕೆ ತೆರಳುತ್ತಿದ್ದರು.

ಗುರುಗ್ರಾಮ ವಿಶ್ವ ಹಿಂದೂ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಯಶ್ವಂತ್ ಶೇಖಾವತ್ ಮಾತನಾಡಿ, ಯಾತ್ರೆಯು ಶಿವ ದೇವಾಲಯ ನಲ್ಹಾಡ್​​ ಅನ್ನು ತಲುಪಿದ ತಕ್ಷಣ, ಕಿಡಿಗೇಡಿಗಳು ಯಾತ್ರೆಯ ವೇಲೆ ಕಲ್ಲು ತೂರಾಟ ಆರಂಭಿಸಿದರು. ಈ ಕಲ್ಲು ತೂರಾಟದಿಂದಾಗಿ ಯಾತ್ರೆಯಲ್ಲಿ ಭಾಗಿಯಾಗಿದ್ದ ಹಲವು ವಾಹನಗಳ ಗಾಜುಗಳು ಒಡೆದಿವೆ. ಕೆಲವು ವಾಹನಗಳಿಗೆ ಬೆಂಕಿ ಹಚ್ಚಿ ವಿಧ್ವಂಸಕ ಕೃತ್ಯಗಳನ್ನೂ ನಡೆಸಲಾಗಿದೆ ಎಂದರು.

ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಭಯಭೀತರಾದ ಕಾರಣ ಆ ಭಾಗದ ಎಲ್ಲ ಅಂಗಡಿಗಳನ್ನು ಮುಚ್ಚಲಾಗಿದೆ. ಯಾತ್ರೆಯು ಒಂದು ಗಂಟೆ ಸುಮಾರಿಗೆ ನುಹ್ ಅವರ ತಿರಂಗಾ ಪಾರ್ಕ್ ಬಳಿ ತಲುಪಿದಾಗ ಅಲ್ಲಿದ್ದ ಕೆಲವರೊಂದಿಗೆ ವಾಗ್ವಾದ ನಡೆದಿದೆ. ಜಗಳದ ನಡುವೆಯೇ ಕಲ್ಲು ತೂರಾಟ ಆರಂಭವಾಯಿತು. ಈ ಕಲ್ಲು ತೂರಾಟದಲ್ಲಿ ಹಲವು ವಾಹನಗಳ ಗಾಜು ಒಡೆದಿವೆ.

ಎಸ್​ಎಂಎಸ್​, ಇಂಟರ್ನೆಟ್ ಸೇವೆ ಸ್ಥಗಿತ:ಘಟನೆ ಹಿನ್ನೆಲೆ ಈ ಪ್ರದೇಶದಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಎಸ್​ಎಂಎಸ್​ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಕುರಿತು ಸರ್ಕಾರ ಆದೇಶ ಹೊರಡಿಸಿದೆ. ನಲ್ಹಾಡ್​ನಲ್ಲಿ ನಡೆದ ಗಲಾಟೆಯ ನಂತರ, ಬದ್ಕಲಿ ಚೌಕ್ ಮತ್ತು ಪಿಂಗವಾನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಘರ್ಷಣೆಗಳು ನಡೆದಿರುವ ಬಗ್ಗೆ ವರದಿಯಾಗಿವೆ. ಪ್ರಕರಣದ ಗಂಭೀರತೆಯನ್ನು ಗಮನಿಸಿ ಬೇರೆ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ್ ಪಡೆಗಳು ಆಗಮಿಸಿವೆ. ಜೊತೆಗೆ ಈ ಭಾಗದಲ್ಲಿರುವ ಎಲ್ಲ ಅಂಗಡಿಗಳನ್ನು ಬಂದ್​ ಮಾಡಲಾಗಿದೆ.

ಇದನ್ನೂ ಓದಿ:ಮಣಿಪುರ ಹಿಂಸಾಚಾರ : 45 ಅಂಧ ವಿದ್ಯಾರ್ಥಿಗಳನ್ನು ರಕ್ಷಿಸಿದ ಅಸ್ಸೋಂ ರೈಫಲ್ಸ್​

ABOUT THE AUTHOR

...view details