ಕರ್ನಾಟಕ

karnataka

ETV Bharat / bharat

Mob attacks Meghalaya CM office: ಮೇಘಾಲಯ ಸಿಎಂ ಕಚೇರಿ ಮೇಲೆ ಕಲ್ಲು ತೂರಾಟ: 7 ಭದ್ರತಾ ಸಿಬ್ಬಂದಿಗೆ ಗಾಯ - ಈಟಿವಿ ಭಾರತ ಕನ್ನಡ

Mob attacks Meghalaya CM office: ಮೇಘಾಲಯ ಮುಖ್ಯಮಂತ್ರಿ ಕಚೇರಿ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.

ಮುಖ್ಯಮಂತ್ರಿ ಕಚೇರಿ ಮೇಲೆ ಕಲ್ಲು ತೂರಾಟ
ಮುಖ್ಯಮಂತ್ರಿ ಕಚೇರಿ ಮೇಲೆ ಕಲ್ಲು ತೂರಾಟ

By

Published : Jul 25, 2023, 10:27 AM IST

ಗುವಾಹಟಿ (ಅಸ್ಸಾಂ):ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರ ಗುವಾಹಟಿಯ ತುರಾ ನಗರದಲ್ಲಿರುವ ಕಚೇರಿ ಮೇಲೆ ಸೋಮವಾರ ಸಂಜೆ ದುಷ್ಕರ್ಮಿಗಳ ಗುಂಪು ಕಲ್ಲು ತೂರಾಟ ನಡೆಸಿದೆ. ಘಟನೆಯಲ್ಲಿ ಕನಿಷ್ಠ ಏಳು ಜನ ಭದ್ರತಾ ಸಿಬ್ಬಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಕಲ್ಲು ತೂರಾಟದ ಸಂದರ್ಭದಲ್ಲಿ ಸಂಗ್ಮಾ ಹಾಗೂ ಕೆಲ ಸಚಿವರು ಕಚೇರಿಯಲ್ಲೇ ಇದ್ದರು. ಎಲ್ಲರೂ ಸುರಕ್ಷಿತವಾಗಿರುವುದಾಗಿ ಅಲ್ಲಿನ ಸ್ಥಳೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ. ಘಟನೆಯ ಬಳಿಕ ತುರಾ ನಗರದಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿತ್ತು.

ಘಟನೆಯ ವಿವರ: ಗಾರೊ ಹಿಲ್ಸ್ ಮೂಲದ ನಾಗರಿಕ ಸಮಾಜ ಗುಂಪು ತುರಾನಗರವನ್ನು ಚಳಿಗಾಲದ ರಾಜಧಾನಿ ಮಾಡಬೇಕೆಂದು ಬೇಡಿಕೆ ಇಟ್ಟಿದೆ. ಈ ನಿಟ್ಟಿನಲ್ಲಿ ಜನರು ಉಪವಾಸ ಸತ್ಯಾಗ್ರಹ ಕೂಡ ನಡೆಸುತ್ತಿದ್ದಾರೆ. 14 ದಿನಗಳ ಉಪವಾಸ ಸತ್ಯಾಗ್ರಹದ ನಂತರ, ಸಿಎಂ ಸಂಗ್ಮಾ ತಮ್ಮ ಕಚೇರಿಯಲ್ಲಿ ಧರಣಿನಿರತ ಗುಂಪುಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸುತ್ತಿದ್ದರು. ಇದರಲ್ಲಿ, ಅಚಿಕ್​ ಮತ್ತು ಜಿಹೆಚ್​ಎಸ್​ಎಮ್​ಸಿ ಸೇರಿದಂತೆ ಇತರ ಪ್ರತಿಭಟನಾ ಗುಂಪುಗಳ ಪ್ರತಿನಿಧಿಗಳು ಭಾಗಿಯಾಗಿದ್ದರು. ಕಚೇರಿಯಲ್ಲಿ ಸಭೆ ನಡೆಯುತ್ತಿದ್ದಾಗ ಕಚೇರಿ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಗಲಾಟೆ ನಡೆದು ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ನೆರೆದಿದ್ದ ಗುಂಪುಗಳನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಇದರಿಂದ ಕೋಪಗೊಂಡ ಪ್ರತಿಭಟನಾಕಾರರು ತೀವ್ರವಾಗಿ ಕಲ್ಲು ತೂರಾಟ ಮಾಡಿದ್ದಾರೆ. ಸಿಎಂ ಕಚೇರಿ ಮೇಲೂ ಕಲ್ಲು ಎಸೆದಿದ್ದರಿಂದ ಕಿಟಕಿ ಗಾಜುಗಳು ಒಡೆದಿವೆ. ಕಚೇರಿಯಲ್ಲಿದ್ದ ಏಳು ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಸಿಎಂ ಕಚೇರಿ ಮುಂದೆ ಉದ್ವಿಗ್ನ ವಾತಾವರಣವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಧರಣಿನಿರತ ಗುಂಪುಗಳ ಪ್ರತಿನಿಧಿಗಳನ್ನು ಸಿಎಂ ಮತ್ತೊಮ್ಮೆ ಸಭೆಗೆ ಕರೆದಿದ್ದಾರೆ. ಶಿಲ್ಲಾಂಗ್​ನಲ್ಲಿ 8 ಅಥವಾ 9ರಂದು ಸಭೆ ನಡೆಸಬಹುದೆಂದು ಮೂಲಗಳು ತಿಳಿಸಿವೆ.

ಸಿಎಂ ಸಂಗ್ಮಾ ಪ್ರತಿಕ್ರಿಯೆ:ತುರಾದಲ್ಲಿ ನಡೆದ ಘಟನೆ ಅತ್ಯಂತ ದುರದೃಷ್ಟಕರ. ಪ್ರತಿಭಟನಾನಿರತ ಗುಂಪುಗಳೊಂದಿಗಿನ ಸಭೆ ಬಹುತೇಕ ಮುಗಿದಿತ್ತು. ಆಗ ಹೊರಗಿನಿಂದ ಗಲಾಟೆ ಸದ್ದು ಕೇಳಿಸಿತು. ಆದರೆ ಧರಣಿನಿರತ ಗುಂಪುಗಳಲ್ಲದವರು ಉದ್ದೇಶಪೂರ್ವಕವಾಗಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಸಿಎಂ ಹೇಳಿದ್ದಾರೆ. ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆಗಾಗಿ ತಲಾ 50 ಸಾವಿರ ರೂ. ನೀಡಲಾಗಿದ್ದು, ಅವರ ಎಲ್ಲ ವೆಚ್ಚವನ್ನೂ ಸರಕಾರವೇ ಭರಿಸಲಿದೆ ಎಂದು ಭರವಸೆ ಕೊಟ್ಟಿದ್ದಾರೆ.

ಇದನ್ನೂ ಓದಿ:ಮಣಿಪುರ ಹಿಂಸಾಚಾರ ಕುರಿತು ಪ್ರಧಾನಿ ಮೋದಿ ಹೇಳಿಕೆಗೆ ಒತ್ತಾಯಿಸಿ ಪ್ರತಿಪಕ್ಷಗಳ ಪ್ರತಿಭಟನೆ - VIDEO

ABOUT THE AUTHOR

...view details