ಕರ್ನಾಟಕ

karnataka

ETV Bharat / bharat

ಮೈಸೂರು - ಚೆನ್ನೈ ವಂದೇ ಭಾರತ್ ಎಕ್ಸ್​ಪ್ರೆಸ್​​ ರೈಲಿನ ಮೇಲೆ ಕಲ್ಲು ಎಸೆತ..

ಭಾರತದ ಹಲವೆಡೆ ವಂದೇ ಭಾರತ್​ ರೈಲಿನ ಮೇಲೆ ಕಲ್ಲು ತೂರಾಟ ಘಟನೆಗಳು ವರದಿಯಾಗುತ್ತಲೇ ಇವೆ.

Stone thrown on Chennai - Mysore Vande Bharat Express
ಮೈಸೂರು- ಚೆನ್ನೈ ವಂದೇ ಭಾರತ್ ಎಕ್ಸ್​ಪ್ರೆಸ್​​ ರೈಲಿನ ಮೇಲೆ ಕಲ್ಲು ಎಸೆತ..

By

Published : Jul 14, 2023, 7:26 PM IST

ಚೆನ್ನೈ: ಮೈಸೂರು- ಚೆನ್ನೈ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿಗೆ ಅಪರಿಚಿತ ವ್ಯಕ್ತಿಯೊಬ್ಬರು ಕಲ್ಲು ಎಸೆದಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಶುಕ್ರವಾರ ಮುಂಜಾನೆ 4.30ಕ್ಕೆ ಮೈಸೂರಿನಿಂದ ಚೆನ್ನೈಗೆ ಆಗಮಿಸಿದ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಪುರಚಿ ತಲೈವರ್ ಡಾ.ಎಂ.ಜಿ. ರಾಮಚಂದ್ರನ್ ಸೆಂಟ್ರಲ್ ರೈಲು ನಿಲ್ದಾಣ ತಲುಪಿದೆ. ಬೇಸಿನ್ ಬ್ರಿಡ್ಜ್ ರೈಲ್ವೇ ಯಾರ್ಡ್ ಅನ್ನು ದಾಟಿ ಸೆಂಟ್ರಲ್ ರೈಲು ನಿಲ್ದಾಣ ತಲುಪುವ ಮಾರ್ಗದಲ್ಲಿ ಅಪರಿಚಿತ ವ್ಯಕ್ತಿ ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಕಲ್ಲು ಎಸೆದಿದ್ದಾನೆ. ಬಲವಾಗಿ ಕಲ್ಲು ಎಸೆದ ಕಾರಣ ರೈಲಿನ ಎರಡು ಕೋಚ್‌ಗಳ ಕನ್ನಡಿಗಳು ಹಾಳಾಗಿವೆ.

ವಂದೇ ಭಾರತ್​ ರೈಲು ಸೆಂಟ್ರಲ್​ ರೈಲು ನಿಲ್ದಾಣದ ಫ್ಲಾಟ್​ಫಾರ್ಮ್​ನಲ್ಲಿ ಬಂದು ನಿಂತಿದ್ದು, ಪ್ರಯಾಣಿಕರು ರೈಲಿಗೆ ಹತ್ತಿದ್ದಾರೆ. ಆ ವೇಳೆ, ಪ್ರಯಾಣಿಕರು ಬೋಗಿಗಳ ಗಾಜುಗಳು ಒಡೆದು ಕಲ್ಲುಗಳು ಒಳಗೆ ಬಿದ್ದಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಪ್ರಯಾಣಿಕರು ಕೇಂದ್ರ ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ರೈಲ್ವೇ ರಕ್ಷಣಾ ಪಡೆ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಸಮೀಪದ ಕಣ್ಗಾವಲು ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದ ಬಳಿ ಬೆಳ್ಳಂಬೆಳಗ್ಗೆ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದ್ದು, ಗಾಜುಗಳನ್ನು ಒಡೆದಿದ್ದಾರೆ. ರೈಲಿಗೆ ಕಲ್ಲು ಎಸೆದವರ ಬಗ್ಗೆ ರೈಲ್ವೆ ರಕ್ಷಣಾ ಪಡೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಹಿಂದೆ ಕಳೆದ ಮಾರ್ಚ್ 28 ರಂದು ಕೂಡ ಚೆನ್ನೈ - ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಎಸ್ 14 ಬೋಗಿಯ ಕನ್ನಡಿ ಕಲ್ಲು ತೂರಾಟ ನಡೆದು ಹಾನಿಗೊಳಗಾಗಿತ್ತು. ಚೆನ್ನೈ- ಮೈಸೂರು ವಂದೇ ಭಾರತ್ ರೈಲು ವಾಣಿಯಂಪಾಡಿ ಪಕ್ಕದಲ್ಲಿ ಚಲಿಸುತ್ತಿದ್ದಾಗ ವ್ಯಕ್ತಿಯೊಬ್ಬರು ಕಲ್ಲು ತೂರಾಟ ನಡೆಸಿದ್ದರು. ಬಳಿಕ ಆರ್‌ಪಿಎಫ್ ಪೊಲೀಸರು ಆರೋಪಿಯನ್ನು ಜೋಲಾರ್‌ಪೇಟೆಯಲ್ಲಿ ಬಂಧಿಸಿದ್ದರು.

ಹಲವೆಡೆ ವಂದೆ ಭಾರತ್​ ರೈಲಿಗೆ ಕಲ್ಲು ತೂರಾಟ: ಅದೇ ರೀತಿ ಇದೀಗ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ. ರೈಲಿಗೆ ಕಲ್ಲು ಎಸೆದ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ದೇಶದ ಮೊದಲ ಸೆಮಿ ಹೈ ಸ್ಪೀಡ್​ ರೈಲು ವಂದೇ ಭಾರತ್​ ಮೇಲೆ ನಿರಂತರವಾಗಿ ಕಲ್ಲು ತೂರಾಟ ನಡೆಯುತ್ತಿದೆ. ಮೊನ್ನೆಯಷ್ಟೇ ಉತ್ತರಪ್ರದೇಶದ ಗೋರಖ್​ಪುರ ಹಾಗೂ ಲಖನೌ ನಡುವೆ ಹೋಗುತ್ತಿದ್ದ ವಂದೇ ಭಾರತ್​ ರೈಲಿಗೆ ಕಲ್ಲು ಎಸೆದಿದ್ದರು. ಗೋರಖ್​​​​ಪುರದಿಂದ ರೈಲು ಲಖನೌಗೆ ಹೊರಟಿತ್ತು, ಅಯೋಧ್ಯೆಯ ಸಮೀಪದ ಸೋಗವಾಲ್​ ಬಳಿ ತಲುಪಿದಾಗ ರೈಲಿನ ಹಲವು ಕೋಚ್​ಗಳ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. ಇದರಿಂದ ರೈಲಿನ ಹಲವು ಕೋಚ್​ಗಳಿಗೆ ಹಾನಿಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ತಂದೆ ಹಾಗೂ ಇಬ್ಬರು ಮಕ್ಕಳನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ:ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ.. ತಂದೆ, ಇಬ್ಬರು ಮಕ್ಕಳ ಬಂಧನ

ABOUT THE AUTHOR

...view details