ಕರ್ನಾಟಕ

karnataka

ETV Bharat / bharat

ತಾಜಿಯಾ ಹೊರ ತೆಗೆಯುವ ವೇಳೆ ಗಲಾಟೆ.. ಪೊಲೀಸರ ಮೇಲೆ ಕಲ್ಲುತೂರಾಟ.. ಸ್ಥಳದಲ್ಲಿ ಪ್ರಕ್ಷುಬ್ಧ ಸ್ಥಿತಿ.. - ಉತ್ತರಪ್ರದೇಶದ ಕ್ರೈಂ ನ್ಯೂಸ್

ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯರೊಬ್ಬರು, ಪೊಲೀಸರು ಕಾರಣವಿಲ್ಲದೆ ನಮ್ಮ ಮನೆಗೆ ನುಗ್ಗಿ ಇಬ್ಬರನ್ನು ಎಳೆದುಕೊಂಡು ಹೋಗಿದ್ದಾರೆ. ಯಾರೋ ಕಲ್ಲು ತೂರಿದ್ದಕ್ಕೆ, ಪೊಲೀಸರು ಅಮಾಯಕರಿಗೆ ಶಿಕ್ಷೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ..

ತಾಜಿಯಾ
ತಾಜಿಯಾ

By

Published : Aug 20, 2021, 3:58 PM IST

ಆಗ್ರಾ(ಉತ್ತರಪ್ರದೇಶ) :ಮೊಹರಂ ಪ್ರಯುಕ್ತ ತಾಜಿಯಾವನ್ನು ಹೊರ ತೆಗೆಯುವ ವೇಳೆ ಗಲಭೆಯುಂಟಾಗಿ ಪೊಲೀಸರ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿರುವ ಘಟನೆ ಜಿಲ್ಲೆಯ ಎಟ್ಮದ್ದೌಲಾದಲ್ಲಿ ನಡೆದಿದೆ. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದು, ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

ಪೊಲೀಸರ ಮೇಲೆ ಕಲ್ಲುತೂರಾಟ..

ಪ್ರತಿ ವರ್ಷ ತಾಜಿಯಾವನ್ನು ಬಹಳ ವಿಜೃಂಭಣೆಯಿಂದ ಹೊರ ತೆಗೆಯಲಾಗುತ್ತಿತ್ತು. ಆದರೆ, ಈ ವರ್ಷ ಕೋವಿಡ್​ ಕಾರಣದಿಂದಾಗಿ ಮೆರವಣಿಗೆ ನಡೆಸಲು ಹಲವು ಮಾರ್ಗಸೂಚಿಗಳನ್ನು ಹೊರಡಿಸಲಾಗಿತ್ತು. ಆದರೆ, ಸ್ಥಳೀಯರು ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆ, ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕಬ್ಬಿಣದ ಸರಳುಗಳ ಹೊತ್ತಿದ್ದ ಟಿಪ್ಪರ್​ ಪಲ್ಟಿ : 13 ಕಾರ್ಮಿಕರ ದುರ್ಮರಣ

ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯರೊಬ್ಬರು, ಪೊಲೀಸರು ಕಾರಣವಿಲ್ಲದೆ ನಮ್ಮ ಮನೆಗೆ ನುಗ್ಗಿ ಇಬ್ಬರನ್ನು ಎಳೆದುಕೊಂಡು ಹೋಗಿದ್ದಾರೆ. ಯಾರೋ ಕಲ್ಲು ತೂರಿದ್ದಕ್ಕೆ, ಪೊಲೀಸರು ಅಮಾಯಕರಿಗೆ ಶಿಕ್ಷೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ABOUT THE AUTHOR

...view details