ಎಟಾ(ರಾಜಸ್ಥಾನ):ಜನವರಿ 12 ರಂದು ದಲಿತ ಬಡಾವಣೆಯಲ್ಲಿ ಕಲ್ಲು ತೂರಾಟ ನಡೆದಿರುವ ಘಟನೆ ಇಲ್ಲಿಯ ರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಬಿಜೆಪಿ ಮುಖಂಡ ಸೇರಿದಂತೆ 15 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಜ.12ರ ತಡರಾತ್ರಿ ದಲಿತ ಬಡಾವಣೆಯಲ್ಲಿ ಮೇಲ್ಜಾತಿ ಸಮುದಾಯದ ವ್ಯಕ್ತಿ, ದಲಿತರನ್ನು ನಿಂದಿಸಿದ್ದಾರೆ ಎಂಬ ಆರೋಪದ ಹಿನ್ನೆಲೆ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಮೂವರು ದಲಿತರು ಗಾಯಗೊಂಡಿದ್ದಾರೆ.
ಇನ್ನು ಘಟನೆಯ ದಿನವೇ ರಾತ್ರಿ ರಾಜೇಂದ್ರ ಎಂಬುವವರು ಪೊಲೀಸ್ ಠಾಣೆಗೆ ತೆರಳಿ ಬಿಜೆಪಿ ಮುಖಂಡ ಸೇರಿದಂತೆ 15 ಜನಗಳ ವಿರುದ್ಧ ದೂರು ದಾಖಲಿಸಿದ್ದರು. ಅಲ್ಲದೇ 15ನೇ ತಾರೀಖಿನಂದು ತಮ್ಮ ಮಗಳ ಮದುವೆ ಇರುವುದಾಗಿ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿಯನ್ನೂ ಮಾಡಿಕೊಂಡಿದ್ದರು. ಅದರಂತೆ ಭಾನುವಾರ ನಡೆದ ರಾಜೇಂದ್ರ ಅವರ ಮಗಳ ಮದುವೆಗೆ ಪೊಲೀಸರು ರಕ್ಷಣೆಯನ್ನು ನೀಡಿದ್ದಾರೆ. ಮದುವೆ ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚರಿಕೆ ಕ್ರಮ ಕೈಗೊಂಡು ಪೊಲೀಸರು ಸಿಬ್ಬಂದಿಗಳೊಂದಿಗೆ ರಾಜೇಂದ್ರ ಅವರ ಮಗಳ ಮದುವೆಗೆ ರಕ್ಷಣೆ ಒದಗಿಸಿದ್ದಾರೆ.
ಈ ಕುರಿತು ಠಾಣೆಯ ಇನ್ಸ್ಪೆಕ್ಟರ್ ಸಂಜಯ್ ಸಿಂಗ್ ರಾಘವ್ ಮಾತನಾಡಿ, ಘಟನೆ ಜರುಗಿದ ಬಳಿಕ ಆ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಿ ಗಲಾಟೆಯನ್ನು ಹತೋಟಿಗೆ ತರಲಾಗಿದೆ. ಅಂದಿನಿಂದ ಇಲ್ಲಿಯವರೆಗೆ ಯಾವುದೇ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಇನ್ನು ರಾಜೇಂದ್ರ ಅವರು ಮಗಳ ಮದುವೆ ಯಾವುದೇ ಅಡೆತಡೆಗಳಿಲ್ಲದೇ ಸರಾಗವಾಗಿ ಆಗಿದೆ. ಪ್ರಕರಣದ ಆರೋಪಿಗಳು ತಲೆಮರೆಸಿಕೊಂಡಿದ್ದು, ಆರೋಪಿಗಳ ಹುಡುಕಾಟ ಕಾರ್ಯ ನಡೆದಿದೆ ಎಂದು ತಿಳಿಸಿದ್ದಾರೆ.
ಸಮುದಾಯವೊಂದರ ಎರಡು ಗುಂಪುಗಳ ನಡುವೆ ಮಾರಾಮಾರಿ - ಕಲ್ಲುತೂರಾಟ: ಸೂರತ್(ಗುಜರಾತ್):ಇನ್ನೊಂದೆಡೆಸಂಕ್ರಾತಿ ಹಬ್ಬದ ಎರಡನೇ ದಿನವಾದ ಉತ್ತರಾಯಣ ದಿನದಂದು ಗಾಳಿಪಟ ಹಾರಿಸಿದ್ದಾರೆ ಎಂಬ ಕಾರಣಕ್ಕೆಒಂದೇ ಸಮುದಾಯದ ಎರಡು ಗುಂಪುಗಳ ನಡುವೆಕಲ್ಲು ತೂರಾಟ ನಡೆದಿರುವ ಘಟನೆ ನಗರದ ಖಂಡೇರಾಪುರ ಪ್ರದೇಶದಲ್ಲಿ ನಡೆದಿದೆ. ಒಂದೇ ಸಮುದಾಯದವರಾದರೂ ವರ್ಣಭೇದ ತಾರತಮ್ಯವಿದ್ದ ಕಾರಣ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದೆ.