ಪಿಥೋರಗಢ (ಉತ್ತರಾಖಂಡ): ಕಾಳಿ ನದಿಯ ದಡದಲ್ಲಿರುವ ಒಡ್ಡು ನಿರ್ಮಾಣ ಸ್ಥಳದಲ್ಲಿ ನೇಪಾಳದ ನಾಗರಿಕರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ನಿರ್ಮಾಣ ಸ್ಥಳದಲ್ಲಿದ್ದ ಕೆಲವು ಕಾರ್ಮಿಕರು ಹೇಳಿದ್ದಾರೆ.
ಧಾರ್ಚುಲಾ ನಗರದ ಭದ್ರತೆಗಾಗಿ ಭಾರತದ ಕಡೆಯಿಂದ ಕಾಳಿ ನದಿಯ ದಡದಲ್ಲಿ ಒಡ್ಡು ನಿರ್ಮಿಸಲಾಗುತ್ತಿದೆ. ಇದಕ್ಕೆ 77 ಕೋಟಿ ರೂ. ಗಳನ್ನು ಸಹ ವಿನಿಯೋಗಿಸಲಾಗುತ್ತಿದೆ.
ಈ ಹಿಂದೆ ನೇಪಾಳವು ಈ ಒಡ್ಡು ನಿರ್ಮಾಣದ ಬಗ್ಗೆ ಪ್ರಶ್ನೆ ಎತ್ತಿತ್ತು. ಭಾರತವು ತಮ್ಮ ಭೂಪ್ರದೇಶದಲ್ಲಿ ಒಡ್ಡು ನಿರ್ಮಿಸುತ್ತಿದೆ ಎಂದು ನೇಪಾಳ ಆರೋಪ ಮಾಡಿತ್ತು. ಆದಾಗ್ಯೂ, ಸ್ಥಳೀಯ ಆಡಳಿತವು ನೇಪಾಳದ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು.
ಇದನ್ನೂ ಓದಿ:ಕಾಂಗ್ರೆಸ್ ಕೌನ್ಸಿಲರ್ ತಲೆಗೆ ಗುಂಡಿಕ್ಕಿ ಹತ್ಯೆ!
ಈಗ ನೇಪಾಳದ ನಾಗರಿಕರು ಒಡ್ಡು ನಿರ್ಮಾಣ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆ ಎನ್ನಲಾಗಿದೆ. ಇಂದು ಮಧ್ಯಾಹ್ನ 1.30ರ ಸುಮಾರಿಗೆ ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಜಮಾಯಿಸಿದ ನಾಗರೀಕರು ಕಲ್ಲು ತೂರಾಟ ನಡೆಸಿದ್ದು, ಕೆಲಸ ಮಾಡುತ್ತಿದ್ದ ಕಾರ್ಮಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.