ಲೋಹರ್ಡಗಾ(ಜಾರ್ಖಂಡ್): ಲೋಹರ್ಡಗಾ ಜಿಲ್ಲೆಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಭೋಕ್ತಾ ಗಾರ್ಡನ್‌ನಲ್ಲಿ ಭಾನುವಾರ ಕೋಮುಗಲಭೆ ನಡೆದಿದೆ. ಕೆಲ ಕಿಡಿಗೇಡಿಗಳು ಇಲ್ಲಿ ರಾಮನವಮಿ ಕಾರ್ಯಕ್ರಮಕ್ಕೆ ಬೆಂಕಿ ಹಚ್ಚಿದ್ದಾರೆ. ಅಷ್ಟೇ ಅಲ್ಲದೇ ರಾಮನ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದಾದ ಬಳಿಕ ಸುತ್ತಮುತ್ತಲ ಪ್ರದೇಶದಲ್ಲಿ ಗದ್ದಲ ಉಂಟಾಗಿದೆ.
ರಾಮನವಮಿ ಮೆರವಣಿಗೆ ಮೇಲೆ ಕಲ್ಲು ತೂರಿ, ಬೆಂಕಿ ಹಚ್ಚಿದ ಕಿಡಿಗೇಡಿಗಳು ಏನಿದು ಘಟನೆ: ಇಲ್ಲಿನ ಹಿರಾಹಿ, ಭೋಕ್ತ ಗಾರ್ಡನ್, ಕುಜ್ರಾ ಸೇರಿದಂತೆ ಮುಂತಾದ ಗ್ರಾಮಗಳಲ್ಲಿ ಭಾನುವಾರ ಸಂಜೆ ಕೋಮುಗಲಭೆ ಭುಗಿಲೆದ್ದಿದೆ. ಹಿರಾಹಿ ಗ್ರಾಮದ ಸ್ಮಶಾನದ ಬಳಿ ಸಾಗುತ್ತಿದ್ದ ರಾಮನವಮಿ ಮೆರವಣಿಗೆಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ಘಟನೆಯಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ.
ರಾಮನವಮಿ ಮೆರವಣಿಗೆಯಲ್ಲಿ ಕಲ್ಲು ತೂರಾಟ ಹಿಂಸಾಚಾರ:ಹಿರಾಹಿ ಗ್ರಾಮದಲ್ಲಿ ರಾಮನವಮಿ ಮೆರವಣಿಗೆಯ ಮೇಲೆ ಕಲ್ಲು ತೂರಾಟದ ಘಟನೆಯ ನಂತರ ಹಿರಾಹಿ ಮತ್ತು ಅದರ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಗಲಾಟೆ ನಡೆದಿತ್ತು. ಈ ಘಟನೆಯಲ್ಲಿ ನಿರ್ದಿಷ್ಟ ಸಮುದಾಯದ ಕಿಡಿಗೇಡಿಗಳು ಹತ್ತಾರು ವಾಹನಗಳಿಗೆ ಬೆಂಕಿ ಹಚ್ಚಿ ಹಿಂಸಾಚಾರ ನಡೆಸಿದ್ದಾರೆ.
ರಾಮನವಮಿ ಮೆರವಣಿಗೆಯಲ್ಲಿ ಮೆರವಣಿಗೆಯಲ್ಲಿ ಬೆಂಕಿ ಓದಿ :ರಕ್ಷಕನು ಇವನೇ.. ಬೆಂಕಿಯಲ್ಲಿ ಸಾಹಸ.. ಹಸುಗೂಸನ್ನು ರಕ್ಷಿಸಿದ ಕಾನ್ಸ್ಟೇಬಲ್!
ಕಾರ್ಯಕ್ರಮಕ್ಕೆ ಬೆಂಕಿ:ಭೋಕ್ತಾ ಗಾರ್ಡನ್‌ನಲ್ಲಿ ರಾಮನವಮಿ ಮೆರವಣಿಗೆಗೆ ಕಲ್ಲು ತೂರಾಟ ನಡೆಸಿದ ನಂತರ ನಿರ್ದಿಷ್ಟ ಸಮುದಾಯದ ಜನರು ರಾಮನವಮಿ ಕಾರ್ಯಕ್ರಮಕ್ಕೆ ಬೆಂಕಿ ಹಚ್ಚಿದ್ದರು. ಇದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಜಾತ್ರೆಯ ಸ್ಥಳದಲ್ಲಿ ಹತ್ತು ದ್ವಿಚಕ್ರವಾಹನಗಳು, ಮೂರು ಗಾಡಿಗಳು, ಒಂದು ಟೆಂಪೋ, ನಾಲ್ಕು ಸೈಕಲ್‌ಗಳು ಮತ್ತು ಹಲವಾರು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ ಎನ್ನಲಾಗ್ತಿದೆ.
ರಾಮನವಮಿ ಮೆರವಣಿಗೆಯಲ್ಲಿ ಬೆಂಕಿ ಮನೆಗಳಿಗೆ ಬೆಂಕಿ: ಪ್ರತೀಕಾರದ ಕ್ರಮವಾಗಿ ಇನ್ನೊಂದು ಕಡೆಯ ಜನರು ಭೋಕ್ತ ಗಾರ್ಡನ್ ಬಳಿಯ ಎರಡು ಮನೆಗಳಿಗೆ ಬೆಂಕಿ ಹಚ್ಚಿದ್ದರು. ಅಂಗಡಿಗಳಲ್ಲಿ ಮಾರಾಟಕ್ಕೆ ಇಟ್ಟಿದ್ದ ತರಕಾರಿ, ಅಪ್ಪಳ ಸೇರಿದಂತೆ ಇತರೆ ವಸ್ತುಗಳನ್ನು ಸುಟ್ಟು ಭಸ್ಮವಾಗಿವೆ.
ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಪಡೆ ಟ್ರೈನ್ ಮೇಲೆ ಕಲ್ಲು ತೂರಾಟ: ಹಿಂಸಾಚಾರದ ಸಂದರ್ಭದಲ್ಲಿ, ರಾಂಚಿಯಿಂದ ದೆಹಲಿಗೆ ಹೋಗುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ಭೋಕ್ತಾ ಗಾರ್ಡನ್ ಬಳಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಅಟ್ಟಹಾಸ ಮೆರೆದರು. ಈ ವೇಳೆ ರೈಲಿನ ಕೋಚ್‌ಗಳ ಗಾಜು ಒಡೆದಿವೆ. ಈ ಕೋಮುಗಲಭೆಯಿಂದಾಗಿ ಹತ್ತಾರು ಜನರು ಗಾಯಗೊಂಡಿದ್ದು, ಮೂವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಹಿಂಸಾಚಾರದಲ್ಲಿ ಗಾಯಗೊಂಡ ವ್ಯಕ್ತಿ ಓದಿ:ರಾಜಸ್ಥಾನದ ಕರೌಲಿಯಲ್ಲಿ ಕೋಮು ಹಿಂಸೆ: ಪ್ರಮುಖ ಆರೋಪಿ ಮತ್ಲೂಮ್ ಅಹ್ಮದ್‌ಗಾಗಿ ಶೋಧ
ಸ್ಥಳದಲ್ಲಿ ಪೊಲೀಸ್ ತಂಡ ಮೊಕ್ಕಾಂ: ಸುದ್ದಿ ತಿಳಿದಾಕ್ಷಣ ಜಿಲ್ಲಾಧಿಕಾರಿ ಡಾ.ವಾಘ್ಮೋರ್ ಪ್ರಸಾದ್ ಕೃಷ್ಣ, ಎಸ್ಪಿ ಆರ್. ರಾಮ್‌ಕುಮಾರ್, ಡಿಡಿಸಿ ಗರಿಮಾ ಸಿಂಗ್, ಎಸ್‌ಡಿಒ ಅರವಿಂದ್ ಕುಮಾರ್ ಲಾಲ್, ಡಿಎಸ್‌ಪಿ ಪರಮೇಶ್ವರ ಪ್ರಸಾದ್ ಜೊತೆ ಲೋಹರ್ಡಗಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಗಲಭೆ ನಡೆದ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಪೊಲೀಸ್ ಆಡಳಿತದ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.