ಆದಿಲಾಬಾದ್: ಕೊರೊನಾದಿಂದ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹವನ್ನು ಅಂತ್ಯಕ್ರಿಯೆ ಮಾಡುತ್ತಿದ್ದ ವೇಳೆ ಸ್ಥಳೀಯ ನಿವಾಸಿಗಳು ಕಲ್ಲು ತೂರಿರುವ ಘಟನೆ ಆದಿಲಾಬಾದ್ನಲ್ಲಿ ವರದಿಯಾಗಿದೆ.
ಕೊರೊನಾ ಸೋಂಕಿತನ ಶವಸಂಸ್ಕಾರಕ್ಕೆ ವಿರೋಧ: ಸ್ಥಳೀಯರಿಂದ ಕಲ್ಲೆಸೆತ - ಆದಿಲಾಬಾದ್ ಕೊರೊನಾ ಸುದ್ದಿ
ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಮೃತದೇಹದ ಅಂತ್ಯಸಂಸ್ಕಾರ ಮಾಡುತ್ತಿದ್ದ ಕಾರ್ಯಕರ್ತರ ಮೇಲೆ ಸ್ಥಳೀಯರು ಕಲ್ಲು ತೂರಿರುವ ಘಟನೆ ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಅನುಕುಂಟ ಗ್ರಾಮದ ವ್ಯಕ್ತಿಯೊಬ್ಬರು ಸೋಮವಾರ ಕೊರೊನಾದಿಂದಾಗಿ ಆದಿಲಾಬಾದ್ನ ರಿಮ್ಸ್ನಲ್ಲಿ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಶವಸಂಸ್ಕಾರ ನಡೆಸುವ ಕಾರ್ಯಕರ್ತರು ಆಂಬ್ಯುಲೆನ್ಸ್ನಲ್ಲಿ ಅನುಕುಂಟ ಗ್ರಾಮವೆಂದು ತಿಳಿದು ಬಂಗಾರಿಗೂಡ ಗ್ರಾಮದ ನದಿಯ ದಡಕ್ಕೆ ತೆಗೆದುಕೊಂಡು ಹೋಗಿದ್ದರು. ರಾತ್ರಿ 8 ರ ಸುಮಾರಿಗೆ ಅಂತ್ಯಕ್ರಿಯೆ ನೆರವೇರಿಸುತ್ತಿದ್ದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಶವವನ್ನು ಇಲ್ಲಿಗೇಕೆ ತಂದಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಬಳಿಕ ಕಲ್ಲಿನಿಂದ ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಕುರಿತು ಪುರಸಭೆ ಕಮಿಷನರ್ ಪೊಲೀಸರಿಗೆ ದೂರು ನೀಡಿದ್ದು, ಕೈಲಾಸ್ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.