ಕರ್ನಾಟಕ

karnataka

ETV Bharat / bharat

ಸ್ಟರ್ಲೈಟ್ ದುರಂತ: ಸಿಎಂ ಸ್ಟಾಲಿನ್​ಗೆ ಮಧ್ಯಂತರ ವರದಿ ಸಲ್ಲಿಸಿದ ತನಿಖಾ ತಂಡ - vedanta

ಗಲಭೆಯ ನಂತರ 400 ಜನರ ವಿರುದ್ಧ ದಾಖಲಾಗಿರುವ 235 ಪ್ರಕರಣಗಳನ್ನು ಹಿಂಪಡೆಯುವಂತೆ ಸಿಎಂಗೆ ಶಿಫಾರಸು ಮಾಡಿದೆ ಎಂದು ತಿಳಿದು ಬಂದಿದೆ. ಪೊಲೀಸರಿಂದ ಆಕ್ಷೇಪಣೆ ಪ್ರಮಾಣಪತ್ರ ಸಿಗದ ಕಾರಣ ಹೆಚ್ಚಿನ ಜನರು ಉದ್ಯೋಗ ಪಡೆಯಲು ಕಷ್ಟಪಡುತ್ತಿದ್ದಾರೆ. ಹಾಗಾಗಿ ಪ್ರಕರಣ ಹಿಂಪಡೆಯುವಂತೆ ಶಿಫಾರಸು ಮಾಡಲಾಗಿದೆ ಎನ್ನಲಾಗ್ತಿದೆ.

ಸ್ಟರ್ಲೈಟ್ ದುರಂತ
ಸ್ಟರ್ಲೈಟ್ ದುರಂತ

By

Published : May 14, 2021, 10:45 PM IST

Updated : May 14, 2021, 10:52 PM IST

ಚೆನ್ನೈ: ತೂತುಕುಡಿಯ ಸ್ಟರ್ಲೈಟ್ ವಿರೋಧಿ ಗಲಭೆ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಅರುಣ್ ಜಗದೀಶನ್ ನೇತೃತ್ವದ ಸಮಿತಿ ಮಧ್ಯಂತರ ವರದಿಯನ್ನು ಸಿಎಂ ಸ್ಟಾಲಿನ್​ಗೆ ಸಲ್ಲಿಸಿದೆ.

ಸಿಎಂ ಕಚೇರಿಯಲ್ಲಿ ಜಗದೀಶನ್​ 35 ಪುಟಗಳ ವರದಿಯನ್ನು ಸ್ಟಾಲಿನ್​ಗೆ ಸಲ್ಲಿಸಿದರು. ಮಾಜಿ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರ ಅಡಿ ಸ್ಥಾಪಿಸಲಾದ ತನಿಖಾ ಸಮಿತಿಯು, ಗಲಭೆಯ ನಂತರ 400 ಜನರ ವಿರುದ್ಧ ದಾಖಲಾಗಿರುವ 235 ಪ್ರಕರಣಗಳನ್ನು ಹಿಂಪಡೆಯುವಂತೆ ಸಿಎಂಗೆ ಶಿಫಾರಸು ಮಾಡಿದೆ ಎಂದು ತಿಳಿದು ಬಂದಿದೆ. ಪೊಲೀಸರಿಂದ ಆಕ್ಷೇಪಣೆ ಪ್ರಮಾಣಪತ್ರ ಸಿಗದ ಕಾರಣ ಹೆಚ್ಚಿನ ಜನರು ಉದ್ಯೋಗ ಪಡೆಯಲು ಕಷ್ಟಪಡುತ್ತಿದ್ದಾರೆ. ಹಾಗಾಗಿ ಪ್ರಕರಣ ಹಿಂಪಡೆಯುವಂತೆ ಶಿಫಾರಸು ಮಾಡಲಾಗಿದೆ ಎನ್ನಲಾಗ್ತಿದೆ.

ಮೇ 13 ರಂದು ಸಿಎಂ ಕಚೇರಿಯು ತನಿಖಾ ವರದಿಯನ್ನು ನೀಡುವಂತೆ ಸಮಿತಿಗೆ ಕೋರಿತ್ತು. ಸಮಿತಿಯು ಏಪ್ರಿಲ್​ವರೆಗೆ 27 ಸಭೆಗಳನ್ನು ನಡೆಸಿ 719 ಜನರ ವಿಚಾರಣೆ ನಡೆಸಿದೆ.

Last Updated : May 14, 2021, 10:52 PM IST

ABOUT THE AUTHOR

...view details