ಪುಣೆ (ಮಹಾರಾಷ್ಟ್ರ): ದೊಡ್ಡ ಪಟ್ಟಣಗಳಲ್ಲಿ ಹಂದಿಗಳು ಮತ್ತು ಬೀದಿ ನಾಯಿಗಳ ಹಾವಳಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಆದರೆ, ಮಹಾರಾಷ್ಟ್ರದ ಪುಣೆಯಲ್ಲಿ ಬೆಕ್ಕುಗಳು ಕಾಟ ಸೃಷ್ಟಿಯಾಗಿದೆ. ಆದ್ದರಿಂದ ಸಾಕು ನಾಯಿಗಳಂತೆ ಬೆಕ್ಕುಗಳ ನೋಂದಣಿ ಕಡ್ಡಾಯಗೊಳಿಸುವುದು ಜೊತೆಗೆ ಅವುಗಳ ಸಂತಾನಹರಣಕ್ಕೂ ಪುಣೆ ಪಾಲಿಕೆ ನಿರ್ಧರಿಸಿದೆ.
ದೊಡ್ಡ ಸಂಖ್ಯೆಯಲ್ಲಿ ಬೆಕ್ಕುಗಳು ದಾರಿತಪ್ಪಿ, ಬೀದಿ - ಬೀದಿಗಳಲ್ಲಿ ಸಂಚರಿಸುತ್ತವೆ. ಬೀದಿನಾಯಿಗಳಂತೆ ಬೆಕ್ಕುಗಳೂ ಪುಣೆ ನಿವಾಸಿಗಳಿಗೆ ಕಂಟಕವಾಗಿ ಪರಿಣಮಿಸುತ್ತಿವೆ. ಇದರಿಂದಾಗಿಯೇ ಹೆಚ್ಚುತ್ತಿರುವ ಬೆಕ್ಕುಗಳನ್ನು ನಿಯಂತ್ರಿಸಲು ಪುಣೆ ಪಾಲಿಕೆ ಬೆಕ್ಕುಗಳನ್ನು ಸಂತಾನಹರಣಗೊಳಿಸಲು ತೀರ್ಮಾನಿಸಿದೆ.
ಇದರ ಜೊತೆಗೆ ಬೆಕ್ಕುಗಳನ್ನು ನಾಯಿಗಳಂತೆ ನೋಂದಾಯಿಸುವ ಕೆಲಸ ನಡೆಯುತ್ತಿದೆ. ಇದಕ್ಕಾಗಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಪ್ರಾದೇಶಿಕ ಕಚೇರಿಯಲ್ಲಿ ಬೆಕ್ಕುಗಳ ನೋಂದಣಿ ಗೆ ವ್ಯವಸ್ಥೆ ಮಾಡಲಾಗಿದೆ.