ಕರ್ನಾಟಕ

karnataka

ETV Bharat / bharat

ಸಮಾನತೆಯ ಪ್ರತಿಮೆ ಬಳಿ ಧಾರ್ಮಿಕ ಕಾರ್ಯಕ್ರಮಗಳು ಆರಂಭ.. ಇಲ್ಲಿದೆ ರಾಮಾನುಜರ ಕುರಿತ ಮಾಹಿತಿ.. - ರಾಮಾನುಜಾಚಾರ್ಯರ ಬೋಧನೆಗಳು

11ನೇ ಶತಮಾನದ ಸಮಾಜ ಸುಧಾರಕ ಎನ್ನಿಸಿಕೊಂಡಿರುವ ರಾಮಾನಜಾಚಾರ್ಯರ ಹೆಸರಿನಲ್ಲಿ ಸಮಾನತೆಯ ಪ್ರತಿಮೆ ತೆಲಂಗಾಣದ ಹೈದರಾಬಾದ್ ಸಮೀಪ ಅನಾವರಣಗೊಳ್ಳುತ್ತಿದೆ. ರಾಮಾನುಜರ ಜೀವನ, ಬೋಧನೆ ಮತ್ತು ಪ್ರತಿಮೆಯ ವಿಶಿಷ್ಟತೆಗಳ ಬಗ್ಗೆ ವರದಿಯೊಂದು ಇಲ್ಲಿದೆ..

statue-of-equality-highlights-of-ramanujacharya-and-statue-of-equality
ಸಮಾನತೆಯ ಪ್ರತಿಮೆ ಬಳಿ ಧಾರ್ಮಿಕ ಕಾರ್ಯಕ್ರಮಗಳು ಆರಂಭ.. ಇಲ್ಲಿದೆ ರಾಮಾನುಜರ ಕುರಿತ ಮಾಹಿತಿ

By

Published : Feb 2, 2022, 5:25 PM IST

Updated : Feb 2, 2022, 6:07 PM IST

ಹೈದರಾಬಾದ್ :ದಕ್ಷಿಣ ಭಾರತದ ಸಮಾಜ ಸುಧಾರಕರಲ್ಲಿ ಅತ್ಯಂತ ಪ್ರಮುಖರೆನಿಸಿದವರು ಶ್ರೀ ರಾಮಾನುಜಾಚಾರ್ಯರು.ವಿಶಿಷ್ಠಾದ್ವೈತ ಪ್ರತಿಪಾದಕರಾಗಿದ್ದ ಶ್ರೀಗಳು ಭೂಮಿ ಮೇಲೆ ಅವತರಿಸಿ ಸಾವಿರ ವರ್ಷ ಪೂರ್ಣಗೊಂಡಿರುವ ನಿಮಿತ್ತ 216 ಅಡಿಯ ಎತ್ತರದ ಪ್ರತಿಮೆ ಹೈದರಾಬಾದ್‌ನ ಮುಚಿಂತಲ್​ ಎಂಬಲ್ಲಿ ಲೋಕಾರ್ಪಣೆಗೊಳ್ಳಲು ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ರಾಮಾನುಜಾಚಾರ್ಯರ ಬಗ್ಗೆ ಕೆಲ ಸಂಗತಿಗಳನ್ನು ತಿಳಿದುಕೊಳ್ಳೋಣ..

ರಾಮಾನುಜಾಚಾರ್ಯರು ತಮಿಳುನಾಡಿನ ಪೆರಂಬದೂರಿನಲ್ಲಿ ಸುಮಾರು 1017ರಲ್ಲಿ ಜನಿಸಿದರು. ತಂದೆ ಕೇಶವ ಸೋಮಯಾಜಿ ಮತ್ತು ತಾಯಿ ಕಾಂತಿಮತಿ. ಸಿದ್ಧಾಂತಗಳಲ್ಲಿ ಅತ್ಯಂತ ಪ್ರಮುಖವಾದ ವಿಶಿಷ್ಟಾದ್ವೈತದ ಪ್ರತಿಪಾದಕರು ಶ್ರೀ ರಾಮಾನುಜಾಚಾರ್ಯರು 1137ರಲ್ಲಿ ಶ್ರೀರಂಗಂನಲ್ಲಿ ನಿಧನರಾದರೆಂದು ಇತಿಹಾಸ ಹೇಳುತ್ತದೆ.

ರಾಮಾನುಜಾಚಾರ್ಯರ ಬೋಧನೆಗಳು

  • ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಅಷ್ಟಾಕ್ಷರಿ ಮಹಾಮಂತ್ರವನ್ನು ಪಠಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಜೀವನ ಎಂದರೇನು?, ಜೀವನದ ಗುರಿ ಏನು?, ಜೀವನಕ್ಕೆ ಇರುವ ಅಡೆತಡೆಗಳು ಯಾವುವು?, ನಿಮ್ಮ ಗುರಿಯನ್ನು ಸಾಧಿಸುವ ಮಾರ್ಗಗಳು ಯಾವುವು? ಎಂಬ ನಿಜವಾದ ತಿಳುವಳಿಕೆಯನ್ನು ಆ ಮಹಾಮಂತ್ರ ನೀಡುತ್ತದೆ. ಇದರ ಜೊತೆಗೆ ಈ ತಿಳುವಳಿಕೆ ನೀಡುವ ಮೂಲಕ ಜನರನ್ನು ದುಃಖದಿಂದ ಪಾರಾಗುವ ಮಾರ್ಗವನ್ನು ಸುಗಮಗೊಳಿಸುತ್ತದೆ.
    ಸಮಾನತೆಯ ಪ್ರತಿಮೆ ಬಳಿ ಧಾರ್ಮಿಕ ಕಾರ್ಯಕ್ರಮಗಳು ಆರಂಭ
  • ಪ್ರಪಂಚವು ಒಂದು ದೇಹವಾಗಿದೆ, ಪ್ರತಿಯೊಂದು ಭಾಗಕ್ಕೂ ಮಹತ್ವವಿದೆ. ನಿಮ್ಮ ಪಾತ್ರವನ್ನು ಅರಿತುಕೊಳ್ಳಿ ಮತ್ತು ಎಲ್ಲರೂ ಒಂದೇ ಎಂಬುದನ್ನು ಅರಿತುಕೊಂಡು ಆನಂದಿಸಿ, ನಿಮ್ಮ ರಕ್ಷಣೆಗೆ ಪ್ರತಿಯೊಂದನ್ನೂ ರಕ್ಷಿಸಿಕೊಳ್ಳಿ. ಅಂದರೆ ನಿಮ್ಮನ್ನು ನೀವು ರಕ್ಷಿಸಿಕೊಂಡರೆ ಪ್ರಪಂಚನ್ನು ರಕ್ಷಿಸಿಕೊಂಡಂತೆ ಎಂದು ಅರ್ಥ.
  • ನಿಮ್ಮ ಪಾದಗಳು ಗಾಯಗೊಂಡಾಗ ನಿಮ್ಮ ಕಣ್ಣುಗಳು ಕಣ್ಣೀರು ಸುರಿಸುತ್ತವೆ. ನಿಮಗೆ ಅನಾರೋಗ್ಯ ಉಂಟಾದಾಗ ಕಾಲುಗಳು ನಿಮ್ಮನ್ನು ವೈದ್ಯರ ಬಳಿ ಕರೆದೊಯ್ಯುತ್ತವೆ. ಆದ್ದರಿಂದ ಒಂದಕ್ಕೊಂದು ತೀರಾ ಹತ್ತಿರದ ಸಂಬಂಧ ಹೊಂದಿವೆ ಎಂದು ತಿಳಿಯಿರಿ.
  • ನೀವು ಮತ್ತು ನಾನು ವಿಭಿನ್ನ ಬಣ್ಣವನ್ನು ಹೊಂದಿರಬಹುದು. ವಿಭಿನ್ನ ನಂಬಿಕೆಯನ್ನು ಹೊಂದಿರಬಹುದು. ವಿಭಿನ್ನ ಕೌಶಲ್ಯಗಳನ್ನು ಹೊಂದಿರಬಹುದು. ಆದರೆ, ನಾವೆಲ್ಲರೂ ಒಂದೇ ದೇಹದ ಭಾಗಗಳಂತೆ ಕೆಲಸ ಮಾಡಬೇಕು. ಏಕೆಂದರೆ, ನಾವೆಲ್ಲರೂ ಒಂದೇ ಒಂದು ಶಕ್ತಿಗೆ ಸೇರಿದವರು. ಆ ಶಕ್ತಿಯೇ ದೇವರು.

ಇವು ಪ್ರಮುಖವಾದ ರಾಮಾನುಜಾಚಾರ್ಯರ ಬೋಧನೆಗಳಾಗಿದ್ದು, ಮಹಾತ್ಮ ಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್, ಸ್ವಾಮಿ ವಿವೇಕಾನಂದ ಮಾತ್ರವಲ್ಲದೇ ಇಸ್ಕಾನ್ ಮತ್ತು ಇತರ ಅನೇಕ ಸಂಸ್ಥೆಗಳು ಮತ್ತು ವಿದ್ಯಾಕೇಂದ್ರಗಳು ರಾಮಾನುಜಾಚಾರ್ಯರ ಕೃತಿಗಳಿಂದ ಸ್ಫೂರ್ತಿ ಪಡೆದಿವೆ.

ಇಂದು ಜಗತ್ತಿನಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ಭಕ್ತಿ ಪಂಥಗಳು ಸಮಾನತೆಯನ್ನು ಪ್ರತಿಪಾದಿಸುತ್ತವೆ. ಬಸವಣ್ಣ, ಅನ್ನಮಾಚಾರ್ಯ, ತ್ಯಾಗರಾಜ, ಕಬೀರ, ಮೀರಾಬಾಯಿ ಮುಂತಾದವರ ಸಿದ್ಧಾಂತಗಳು ರಾಮಾನುಜಾಚಾರ್ಯರ ಸಿದ್ಧಾಂತಗಳಿಗೆ ಹತ್ತಿರ ಇವೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಈ ಹಿನ್ನೆಲೆಯಲ್ಲಿ ರಾಮಾನುಜಾಚಾರ್ಯರ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಪ್ರತಿಮೆಗೆ ಸಮಾನತೆಯ ಪ್ರತಿಮೆ ಎಂದು ಕರೆಯಲಾಗುತ್ತಿದೆ. ಗುಜರಾತ್​ನಲ್ಲಿ ಸರ್ದಾರ್ ವಲ್ಲಭಾಯಿ ಪಟೇಲ್ ಹೆಸರಿನಲ್ಲಿ ಏಕತೆ ಪ್ರತಿಮೆ ಇರುವಂತೆ, ಹೈದರಾಬಾದ್​ನಲ್ಲಿ ರಾಮಾನುಜಾಚಾರ್ಯರ ಹೆಸರಲ್ಲಿ ಸಮಾನತೆಯ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಈ ಪ್ರತಿಮೆಯ ಬಗ್ಗೆ ಸ್ವಲ್ಪ ತಿಳಿಯೋಣ..

ಸಮಾನತೆಯ ಪ್ರತಿಮೆಯ ಬಗ್ಗೆ..

  • ನಿರ್ಮಾಣವಾಗಿರುವ 216 ಅಡಿ ಎತ್ತರದ ರಾಮಾನುಜಾಚಾರ್ಯರ ಪ್ರತಿಮೆಯು ಐದು ಲೋಹಗಳಿಂದ ನಿರ್ಮಾಣವಾಗಿದ್ದು, ಸೊಗಸಾಗಿ ನಿರ್ಮಿಸಲ್ಪಟ್ಟಿದೆ.
  • ರಾಮಾನುಜರ ಕೈಯಲ್ಲಿ ಹಿಡಿಯುವ ತ್ರಿದಂಡಂ ಸುಮಾರು 135 ಅಡಿ ಎತ್ತರವಿರುತ್ತದೆ. ತ್ರಿದಂಡಂ ಎಂದರೆ, ಮೂರು ಬೆತ್ತಗಳನ್ನು ಸುತ್ತಿ ಮಾಡಲ್ಪಟ್ಟ ಒಂದು ಬೆತ್ತದಂತೆ ಕಾಣುವ ಪವಿತ್ರವಾದ ವಸ್ತುವಾಗಿದ್ದು, ಕೊನೆಯಲ್ಲಿ ಬಿಳಿ ಬಣ್ಣದ ಬಟ್ಟೆಯನ್ನು ಧ್ವಜವನ್ನಾಗಿ ಹೊಂದಿರುತ್ತದೆ. ಅಂದ ಹಾಗೆ ಮೂರೂ ಬೆತ್ತಗಳು, ಪ್ರಕೃತಿ, ಆತ್ಮ, ಪರಮೋಚ್ಛ ಶಕ್ತಿಯ ಪ್ರತೀಕವಾಗಿರುತ್ತವೆ.
  • ಅತ್ಯದ್ಭುತ ವಾಸ್ತು ಶೈಲಿಯೊಂದಿಗೆ ರಾಮಾನುಜರ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಇದರ ಜೊತೆಗೆ ಸ್ಥಳದಲ್ಲಿ ರಾಮಾನುಜರ ಜೀವನವನ್ನು ಸಾರುವ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತದೆ.
  • ಪ್ರಧಾನಿ ಮೋದಿ ಫೆಬ್ರವರಿ 5ರಂದು ಸಮಾನತೆಯ ಪ್ರತಿಮೆಯನ್ನು ಅನಾವರಣಗೊಳಿಸುತ್ತಾರೆ. ಫೆಬ್ರವರಿ 12ರಂದು ರಾಮಾನುಜಾಚಾರ್ಯರ 120 ಕೆಜಿ ಚಿನ್ನದ ವಿಗ್ರಹವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉದ್ಘಾಟಿಸಲಿದ್ದಾರೆ.
  • ರಾಮಾನುಜಾಚಾರ್ಯರ ಪ್ರತಿಮೆಯನ್ನು ಅಂತಿಮಗೊಳಿಸಿದ್ದು, ಚಿನಜೀಯರ್ ಸ್ವಾಮೀಜಿ. ಆರಂಭದಲ್ಲಿ ಚಿನಜೀಯರ್ ಸ್ವಾಮೀಜಿಯವರು ಆಗಮ ಶಾಸ್ತ್ರ ಮತ್ತು ಶಿಲ್ಪ ಶಾಸ್ತ್ರವನ್ನು ಒಳಗೊಂಡ 14 ಪ್ರತಿಮೆಯ ಮಾದರಿಗಳನ್ನು ರೂಪಿಸಿದ್ದರು. ಅಂತಿಮವಾಗಿ, 3 ಪ್ರತಿಮೆಯ ಮಾದರಿಗಳನ್ನು ತೆಗೆದುಕೊಂಡು ನಂತರ ಒಂದನ್ನು ಆಯ್ಕೆ ಮಾಡಿಕೊಳ್ಳಲಾಯಿತು.
  • ರಾಮಾನುಜಾಚಾರ್ಯರ 108 ದೇವಾಲಯದ ರಚನೆಗಳನ್ನು ಪ್ರತಿಮೆಯ ಆವರಣದಲ್ಲಿ ಕೆತ್ತಲಾಗಿದೆ. ಗರ್ಭಗುಡಿ, ಸ್ತಂಭಗಳ ಮೇಲೆ ಈ ರಚನೆಗಳನ್ನು ಕೆತ್ತಲಾಗಿದೆ.
  • ದೇವಸ್ಥಾನದ ವಿಗ್ರಹಗಳನ್ನು ಪುರುಷಶಿಲ ಎಂಬ ಕಲ್ಲನ್ನು ಬಳಸಲಾಗುತ್ತದೆ. ಈ ಕಲ್ಲು ವಿಗ್ರಹಗಳ ಕೆತ್ತನೆಗೆ ಹೇಳಿ ಮಾಡಿಸಿದಂತಹ ಕಲ್ಲಾಗಿದೆ.
  • ಅಲ್ಲಗಡ್ಡ, ತಿರುಪತಿ, ಮಹಾಬಲೀಪುರಂ, ಶ್ರೀರಂಗಂ, ಮಧುರೈಗಳಿಂದ ಬಂದ ಅನೇಕ ಶಿಲ್ಪಿಗಳು ಈ ದೇವಾಲಯವನ್ನು ರೂಪಿಸಿದ್ದಾರೆ. ಕೆಲವು ಸ್ತಂಭಗಳನ್ನು ಕಪ್ಪು ಶಿಲೆಯಿಂದ ಚೀನಾದಲ್ಲಿ ನಿರ್ಮಾಣ ಮಾಡಲಾಗಿತ್ತು.
  • ಹೊಯ್ಸಳರ ವಾಸ್ತುಶಿಲ್ಪ ಶೈಲಿಯಲ್ಲಿ ಸ್ತಂಭಗಳ ನಿರ್ಮಾಣ ಮಾಡಲಾಗಿದೆ. ರಾಜಸ್ಥಾನದ ಬಸೆಸ್ಲಾಲಾ ಗ್ರಾಮದಿಂದಲೂ ಕಲ್ಲು ತರಲಾಗಿದೆ. ಈ ಆವರಣದ ದೇವಾಲಯಗಳಲ್ಲಿ 468 ಕಂಬಗಳನ್ನು ಸ್ಥಾಪಿಸಲಾಗಿದೆ.

ಶ್ರೀರಾಮಾನುಜ ಸಹಸ್ರಾಬ್ಧಿ ಸಮಾರೋಹಂ ಹೆಸರಲ್ಲಿ ಈ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ ಫೆಬ್ರವರಿ 2ರಿಂದ ಫೆಬ್ರವರಿ 14ರವರೆಗೆ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅವುಗಳು ಯಾವುವು ಎಂಬುದನ್ನು ನೋಡೋಣ..

  • ವಿಶ್ವಕಲ್ಯಾಣಕ್ಕಾಗಿ 1035 ಯಜ್ಞ ಕುಂಡಗಳೊಂದಿಗೆ ಶ್ರೀ ಲಕ್ಷ್ಮಿ ನಾರಾಯಣ ಮಹಾ ಯಜ್ಞ
  • 1.5 ಲಕ್ಷ ಕೆಜಿಯಷ್ಟು ಶುದ್ಧ ದೇಶೀಯ ತುಪ್ಪ ಧಾರ್ಮಿಕ ಕಾರ್ಯಕ್ಕೆ ಬಳಕೆ
  • ನಾಲ್ಕು ವೇದಗಳ 9 ಭಾಗಗಳ ಪಠಣೆ, ಮತ್ತು 10 ಕೋಟಿ ಬಾರಿ ಅಷ್ಟಾಕ್ಷರಿ ಮಂತ್ರ ಜಪ
  • ಪುರಾಣಗಳು, ಆಗಮಗಳ ಪಠಣೆ, ಮಹಾ ಪ್ರಸಾದ ಹಂಚಿಕೆ
  • ಪ್ರತೀ ಯಾಗಶಾಲೆಯಲ್ಲೂ 9 ಯಜ್ಞಕುಂಡಗಳ ರಚನೆ
  • ಒಂದು ಮುಖ್ಯ ಯಾಗಶಾಲೆ ಮತ್ತು 144 ಇತರ ಯಾಗಶಾಲೆಗಳು
  • ಪ್ರತಿದಿನ ಬೆಳಗ್ಗೆ 6.30ರಿಂದ 7.30ರವರೆಗೆ 12 ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ 1 ಕೋಟಿ ಬಾರಿ ಅಷ್ಟಾಕ್ಷರಿ ಮಂತ್ರ ಪಠಣೆ
  • ಯಾಗಶಾಲೆಯಲ್ಲಿ ಪ್ರತಿ ಯಜ್ಞಕುಂಡದ ಬಳಿ 108 ಶ್ಲೋಕಗಳ ವಿಷ್ಣುಸಹಸ್ರನಾಮ ಪಠಣೆ
  • ಪ್ರತಿದಿನ ಬೆಳಗ್ಗೆ 6.30ರಿಂದ 7.30ರವರೆಗೆ ಜಪ, 7.30ರಿಂದ 8.30ರವರೆಗೆ ಪ್ರತಿ ದೇವರ ಆವಾಹನೆ

ಚಿನಜೀಯರ್ ಅವರಿಂದ ನಿರ್ವಹಿಸಲ್ಪಡುವ ಈ ಚಿನಜೀಯರ್ ಆಶ್ರಮವು ವೈಷ್ಣವ ಧರ್ಮದ ತತ್ತ್ವ ಸಾರುವ ಕೆಲಸ ಮಾಡುತ್ತಿದೆ. ಶ್ರೀ ರಾಮಾನುಜರು ಪ್ರತಿ ಪಾದಿಸಿದ್ದ ವಿಶಿಷ್ಟಾದ್ವೈತ ಸಿದ್ಧಂತಾದ ಕುರಿತು ಜನರಿಗೆ ಅರಿವು ಮೂಡಿಸುತ್ತಿದೆ. ಈ ಹೆಚ್​​.ಹೆಚ್​​. ಚಿನಜೀಯಾರ್ ಸ್ವಾಮೀಜಿ ಸ್ವಲ್ಪ ತಿಳಿದುಕೊಳ್ಳೋಣ.

  • ಅತ್ಯಂತ ದೈವಿಕ, ಕರುಣಾಮಯಿ, ಮಾನವೀಯತೆ ಮತ್ತು ಜನರ ಕಲ್ಯಾಣಕ್ಕಾಗಿ ಪ್ರತಿ ಕ್ಷಣವನ್ನು ಚಿನಜೀಯಾರ್ ಸ್ವಾಮೀಜಿ ಮುಡಿಪಾಗಿಟ್ಟಿದ್ದಾರೆ ಎಂದು ಜನರು ಹೇಳಿಕೊಳ್ಳುತ್ತಾರೆ.
  • ಹೆಚ್​​.ಹೆಚ್​​. ಚಿನಜೀಯಾರ್ ಆಶ್ರಯದ ಅಡಿಯಲ್ಲಿ ನಡೆಯುವ ಆಸ್ಪತ್ರೆಯ ಮೂಲಕ ಲಕ್ಷಗಟ್ಟಲೆ ಮಹಿಳೆಯರಿಗೆ ಆರಂಭಿಕ ಕ್ಯಾನ್ಸರ್ ಪತ್ತೆಗಾಗಿ ತಪಾಸಣೆ ಮಾಡಲಾಗಿದೆ.
  • ವಿಶೇಷ ಚೇತನರಿಗೆ ಶಾಲೆ ಮತ್ತು ಕಾಲೇಜು ಸ್ಥಾಪನೆ ಮಾಡಲಾಗಿದೆ. ಅಂತಹ ಮಕ್ಕಳು ಲ್ಯಾಪ್‌ಟಾಪ್‌ಗಳನ್ನು ಬಳಸಿಕೊಂಡು ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಾರೆ. ಈ ಮೂಲಕ ಆ ಮಕ್ಕಳು ಬೇರೆಯವರ ಅವಲಂಬನೆ ಕಡಿಮೆ ಮಾಡಲು ಪ್ರಯತ್ನ ಮಾಡಲಾಗಿದೆ. ಈ ಮಕ್ಕಳು ಕ್ರೀಡೆಗಳಲ್ಲೂ ರಾಜ್ಯ ಮತ್ತು ರಾಷ್ಟ್ರವನ್ನು ಪ್ರತಿನಿಧಿಸುತ್ತಿದ್ದಾರೆ.
  • ಬುಡಕಟ್ಟು ಪ್ರದೇಶಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಶಾಲೆಗಳನ್ನು ಸ್ಥಾಪಿಸಲಾಗಿದೆ. ಇದರಿಂದಾಗಿ ನಕ್ಸಲಿಸಂ ತೊಡೆದುಹಾಕಲು ಚಿನಜೀಯಾರ್ ಸ್ವಾಮೀಜಿ ಪ್ರಯತ್ನಿಸುತ್ತಿದ್ದಾರೆ.
  • ವೈದಿಕ ಪರಂಪರೆ ಮತ್ತು ಸಂಸ್ಕೃತಿಯನ್ನು ಕಲಿಯಲು ಮಕ್ಕಳಿಗಾಗಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಪ್ರಪಂಚದಾದ್ಯಂತ ಇರುವ ಮಕ್ಕಳು ಭಾಗವಹಿಸುತ್ತಿದ್ದಾರೆ.

ಇದನ್ನೂ ಓದಿ: ಈ ವಯಸ್ಸಿನವರು ನಿತ್ಯ ದೈಹಿಕ ಚಟುವಟಿಕೆ ಮಾಡುವುದರಿಂದ ಮೆದುಳಿಗೂ ಶಕ್ತಿ - ಅಧ್ಯಯನ

Last Updated : Feb 2, 2022, 6:07 PM IST

ABOUT THE AUTHOR

...view details