ಹೈದರಾಬಾದ್:ಭಾರತದಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು,ಈ ನಿಟ್ಟಿನಲ್ಲಿ ಸೋಂಕಿಗೆ ಒಳಗಾದವರನ್ನು ಪರೀಕ್ಷಿಸುವ ಸಲುವಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಹಾಗಾದ್ರೆ, ರಾಜ್ಯವಾರು ಪ್ರಸ್ತುತ ಕೋವಿಡ್ ಆರ್‌ಟಿ-ಪಿಸಿಆರ್ ಪರೀಕ್ಷಾ ದರ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಜ್ಯವಾರು ಕೋವಿಡ್ ಆರ್‌ಟಿ-ಪಿಸಿಆರ್ ಪರೀಕ್ಷಾ ದರಗಳು ಇಂತಿವೆ! - Current Covid R T-PCR test rates
ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ, ಅಲ್ಪ ಪ್ರಮಾಣದ ಡಿಎನ್‌ಎ ತೆಗೆದುಕೊಳ್ಳಲಾಗುತ್ತದೆ ಮತ್ತು ತೀವ್ರವಾದ ಸೋಂಕು ಪತ್ತೆ ಹಚ್ಚಲು ಅನುವಂಶಿಕ ವಸ್ತುಗಳ ನಿರ್ದಿಷ್ಟ ಅನುಕ್ರಮಗಳನ್ನು ವಿಸ್ತರಿಸಲಾಗುತ್ತದೆ.
ಆರ್‌ಟಿ-ಪಿಸಿಆರ್
ರಾಜ್ಯವಾರು ಪ್ರಸ್ತುತ ಕೋವಿಡ್ ಆರ್‌ಟಿ-ಪಿಸಿಆರ್ ಪರೀಕ್ಷಾ ದರಗಳು ಹೀಗಿವೆ.
- ಆರ್‌ಟಿ-ಪಿಸಿಆರ್ ಪರೀಕ್ಷೆ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ರಿಯಲ್-ಟೈಮ್ ಪಾಲಿಮರೇಸ್ ಚೈನ್ ರಿಯಾಕ್ಷನ್, ಮಾನವ ಜೀವಕೋಶಗಳಲ್ಲಿ ಕೋವಿಡ್-19 ವೈರಸ್ ಅನ್ನು ಪತ್ತೆಹಚ್ಚಲು ಅತ್ಯಂತ ಪರಿಣಾಮಕಾರಿ ಪರೀಕ್ಷೆಯಾಗಿದೆ.
- ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ, ಅಲ್ಪ ಪ್ರಮಾಣದ ಡಿಎನ್‌ಎ ತೆಗೆದುಕೊಳ್ಳಲಾಗುತ್ತದೆ ಮತ್ತು ತೀವ್ರವಾದ ಸೋಂಕನ್ನು ಪತ್ತೆ ಹಚ್ಚಲು ಅನುವಂಶಿಕ ವಸ್ತುಗಳ ನಿರ್ದಿಷ್ಟ ಅನುಕ್ರಮಗಳನ್ನು ವಿಸ್ತರಿಸಲಾಗುತ್ತದೆ.
- ಆರ್‌ಟಿ-ಪಿಸಿಆರ್ ಪರೀಕ್ಷೆಯು ತೀವ್ರವಾದ ಸೋಂಕನ್ನು ಪತ್ತೆ ಮಾಡುತ್ತದೆ. ಆದರೂ ರೋಗಿಯು ಕೋವಿಡ್-19 ನಿಂದ ಚೇತರಿಸಿಕೊಂಡಿದ್ದಾರೆಯೇ ಅಥವಾ ಅವರು ಈ ಹಿಂದೆ ಸೋಂಕನ್ನು ಹೊಂದಿದ್ದಾರೆಯೇ ಎಂದು ಕಂಡು ಹಿಡಿಯಲು ಸಾಧ್ಯವಿಲ್ಲ.
- ಕೋವಿಡ್ -19 ಪರೀಕ್ಷೆಗಳ ವೆಚ್ಚವನ್ನು ನಿರ್ಧರಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ರಾಜ್ಯ ಸರ್ಕಾರಗಳಿಗೆ ಬಿಟ್ಟಿದೆ.
- ಹೆಚ್ಚಿನ ಸರ್ಕಾರಿ ಸೌಲಭ್ಯಗಳಲ್ಲಿ, ಕೋವಿಡ್ -19 ಪರೀಕ್ಷೆ ಉಚಿತವಾಗಿದೆ. ಆದರೆ, ಖಾಸಗಿ ಲ್ಯಾಬ್‌ಗಳಲ್ಲಿ ಸಾಂಕ್ರಾಮಿಕ ರೋಗ ಆರಂಭವಾದಗಿನಿಂದಲೂ ಕೊರೊನಾವೈರಸ್ ಆರ್‌ಟಿ-ಪಿಸಿಆರ್ ಪರೀಕ್ಷೆಯ ಬೆಲೆಗಳನ್ನು ನಿಗದಿಪಡಿಸಲಾಗಿದೆ.
ಭಾರತದಾದ್ಯಂತ ಪ್ರಮುಖ ರಾಜ್ಯಗಳಲ್ಲಿ ಪರೀಕ್ಷೆಗಳ ಬೆಲೆ ಎಷ್ಟು ಎಂಬುದನ್ನು ಇಲ್ಲಿ ನೋಡೋಣ
ರಾಜ್ಯ | ಆರ್‌ಟಿ-ಪಿಸಿಆರ್ ದರ |
ಆಂಧ್ರಪ್ರದೇಶ | 1600 |
ಅಸ್ಸೋಂ | 2200 – ತುರ್ತು ಆಧಾರ |
ಬಿಹಾರ | 800 |
ಛತ್ತೀಸ್ಗಡ | 1600 |
ದೆಹಲಿ | 800 |
ಗೋವಾ | 4500 |
ಗುಜರಾತ್ | 800 |
ಹರಿಯಾಣ | 900 |
ಜಾರ್ಖಂಡ್ | 1050 |
ಕರ್ನಾಟಕ | 1200 |
ಕೇರಳ | 2100 |
ಮಧ್ಯಪ್ರದೇಶ | 1200 |
ಮಹಾರಾಷ್ಟ್ರ | 980 |
ಒಡಿಶಾ | 400 |
ಪಂಜಾಬ್ | 1600 |
ರಾಜಸ್ಥಾನ | 800 |
ತಮಿಳುನಾಡು | 1500- 2000 |
ತೆಲಂಗಾಣ | 850 |
ಉತ್ತರಪ್ರದೇಶ | 700 |
ಉತ್ತರಾಖಂಡ | 900 |
ಪಶ್ಚಿಮ ಬಂಗಾಳ | 1500 |