ಹೈದರಾಬಾದ್: 2021ರ ಏಪ್ರಿಲ್ 19ರಂದು ಭಾರತ ಸರ್ಕಾರವು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ -19 ವ್ಯಾಕ್ಸಿನೇಷನ್ ಘೋಷಿಸಿದ ನಂತರ, ಅನೇಕ ರಾಜ್ಯಗಳು 18 ರಿಂದ 44 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ವ್ಯಾಕ್ಸಿನೇಷನ್ ನೀಡಲು ಮುಂದಾಗಿವೆ. ಈವರೆಗೆ ಸುಮಾರು 24 ರಾಜ್ಯಗಳು ಇದನ್ನು ಅಧಿಕೃತವಾಗಿ ಘೋಷಿಸಿವೆ.
ಪಂಜಾಬ್, ಹರಿಯಾಣ, ದೆಹಲಿ, ರಾಜಸ್ಥಾನ, ಗುಜರಾತ್,ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ಅಸ್ಸೋಂ, ಸಿಕ್ಕಿಂ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ,ಒಡಿಶಾ, ಛತ್ತೀಸ್ಗಢ, ಉತ್ತರಾಖಂಡ್, ಉತ್ತರಪ್ರದೇಶ, ಹಿಮಾಚಲಪ್ರದೇಶ, ಜಮ್ಮು ಮತ್ತು ಕಾಶ್ಮೀರ, ತೆಲಂಗಾಣ,ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ಜನತೆಗೆ ಉಚಿತ ವ್ಯಾಕ್ಸಿನ್ ನೀಡುವುದಾಗಿ ಘೋಷಿಸಿವೆ.