ಕರ್ನಾಟಕ

karnataka

By

Published : Feb 13, 2021, 3:44 PM IST

ETV Bharat / bharat

ಸೂಕ್ತ ಸಮಯಕ್ಕೆ ಜಮ್ಮು-ಕಾಶ್ಮೀರಕ್ಕೆ ಪೂರ್ಣ ರಾಜ್ಯದ ಮಾನ್ಯತೆ ನೀಡುತ್ತೇವೆ : ಅಮಿತ್ ಶಾ

ಕಾಂಗ್ರೆಸ್​ ಆಡಳಿತವನ್ನು ನೆನೆಸಿಕೊಳ್ಳಿ, ಸಾವಿರಾರು ಮಂದಿ ಕೊಲೆಗೀಡಾದರು, ದಿನಗಳವರೆಗೆ ಕರ್ಫ್ಯೂ ಹಾಕಲಾಗಿತ್ತು. ಆದರೆ, ನಮ್ಮ ಸರ್ಕಾರ ಬಂದ ಮೇಲೆ ಜಮ್ಮು ಕಾಶ್ಮೀರದಲ್ಲಿ ಅಂತಹ ಪರಿಸ್ಥಿತಿ ಇಲ್ಲ..

AMIT SHAH
ಅಮಿತ್ ಶಾ

ನವದೆಹಲಿ :ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಸರ್ಕಾರ ಕೈಗೊಂಡಿರುವ ಯೋಜನೆಗಳ ಕುರಿತು ಸದನಕ್ಕೆ ಮಾಹಿತಿ ನೀಡಿದರು. 370ನೇ ವಿಧಿ ರದ್ದು ಮಾಡಿದ ಬಳಿಕ ನಿಮ್ಮ ಆಶ್ವಾಸನೆಗಳು ಏನಾದವು ಎಂದು ನಮ್ಮನ್ನು ಕೇಳಲಾಗುತ್ತಿದೆ. ಇದೀಗ 370 ರದ್ದಾಗಿ 17 ತಿಂಗಳು ಕಳೆದಿದೆ. ಆದರೂ ಆ ಬಗ್ಗೆ ಪ್ರಶ್ನೆ ಮಾಡುತ್ತೀರಾ ಎಂದರು.

ಅಲ್ಲದೆ ನೀವು 70 ವರ್ಷದಿಂದ ಏನು ಮಾಡಿದ್ದೀರಾ ಅದರ ಲೆಕ್ಕ ಕೊಡಿ. ನೀವು ಸರಿಯಾಗಿ ಕೆಲಸ ಮಾಡಿದ್ದರೆ ನಿಮ್ಮನ್ನು ಕೇಳಬೇಕಾಗಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಲೋಕಸಭೆಯಲ್ಲಿ ಅಮಿತ್ ಶಾ ಭಾಷಣ..

ಆದರೆ, ಈ ಬಿಲ್​​ನಿಂದ ಜಮ್ಮು-ಕಾಶ್ಮೀರ ರಾಜ್ಯತ್ವ ಪಡೆಯುವುದಿಲ್ಲ ಎಂದು ಆರೋಪಿಸುತ್ತಾರೆ. ಆದರೆ, ಈ ಬಿಲ್​​ನಿಂದ ರಾಜ್ಯತ್ವ ಪಡೆಯುವಲ್ಲಿ ಯಾವುದೇ ಸಂಬಂಧವಿಲ್ಲ. ಸರಿಯಾದ ಸಮಯಕ್ಕೆ ನಾವು ಜಮ್ಮು ಮತ್ತು ಕಾಶ್ಮೀರಕ್ಕೆ ಪೂರ್ಣ ಪ್ರಮಾಣದ ರಾಜ್ಯದ ಮಾನ್ಯತೆ ನೀಡುತ್ತೇವೆ ಎಂದರು.

ಕಾಂಗ್ರೆಸ್​ ಆಡಳಿತವನ್ನು ನೆನೆಸಿಕೊಳ್ಳಿ, ಸಾವಿರಾರು ಮಂದಿ ಕೊಲೆಗೀಡಾದರು, ದಿನಗಳವರೆಗೆ ಕರ್ಫ್ಯೂ ಹಾಕಲಾಗಿತ್ತು. ಆದರೆ, ನಮ್ಮ ಸರ್ಕಾರ ಬಂದ ಮೇಲೆ ಜಮ್ಮು ಕಾಶ್ಮೀರದಲ್ಲಿ ಅಂತಹ ಪರಿಸ್ಥಿತಿ ಇಲ್ಲ ಎಂದರು.

ಜಮ್ಮು-ಕಾಶ್ಮೀರದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಎಲ್ಲಿಯೂ ಅಶಾಂತಿ, ವಂಚನೆ ಪ್ರಕರಣ ದಾಖಲಾಗಲೇ ಇಲ್ಲ, ಅಂದಹಾಗೆ ನಮ್ಮ ಪ್ರತಿಸ್ಪರ್ಧಿಗಳು ಸಹ ಈ ಬಗ್ಗೆ ಚಕಾರ ಎತ್ತಲಿಲ್ಲ. ಎಲ್ಲರು ಶಾಂತಿಯಿಂದ ಮತದಾನ ಮಾಡಿದ್ದರು. ಶೇ.51ರಷ್ಟು ಮತದಾನವಾಗಿತ್ತು ಎಂದಿದ್ದಾರೆ. ಕೋವಿಡ್​ನಿಂದ ಜಗತ್ತಿನಾದ್ಯಂತ ಆರ್ಥಿಕ ಹಿಂಜರಿತ ಉಂಟಾಗಿದೆ. ಆದರೆ, ಜಮ್ಮು ಮತ್ತು ಕಾಶ್ಮೀರವು ದೇಶದ ಪಂಜಾಬ್​, ರಾಜಸ್ಥಾನ್, ಛತ್ತೀಸ್​​​ಗಢಕ್ಕಿಂತಲೂ ಉತ್ತಮ ಆರ್ಥಿಕ ಸ್ಥಿತಿಯಲ್ಲಿದೆ ಎಂದರು.

ಇದನ್ನೂ ಓದಿ:ರಾಜಸ್ಥಾನದಲ್ಲಿ ಟ್ರ್ಯಾಕ್ಟರ್​ ಓಡಿಸಿದ ರಾಹುಲ್​​ ಗಾಂಧಿ.. ರೈತರ ಹೋರಾಟಕ್ಕೆ ಬಲ ತುಂಬಲು ಪಣ..

ABOUT THE AUTHOR

...view details