ಕರ್ನಾಟಕ

karnataka

ETV Bharat / bharat

ವೈಜಾಗ್ ಸ್ಟೀಲ್ ಪ್ಲಾಂಟ್ ಖಾಸಗೀಕರಣ ನಿರ್ಧಾರದ ವಿರುದ್ಧ ಆಂಧ್ರ ಬಂದ್ - ಆಂಧ್ರ ರಾಜ್ಯವ್ಯಾಪಿ ಬಂದ್,

ವೈಜಾಗ್ ಸ್ಟೀಲ್ ಪ್ಲಾಂಟ್ ಖಾಸಗೀಕರಣದ ನಿರ್ಧಾರದ ವಿರುದ್ಧ ಆಂಧ್ರ ರಾಜ್ಯವ್ಯಾಪಿ ಬಂದ್​ಗೆ ಕರೆ ನೀಡಲಾಗಿದೆ.

Andhra State wide bandh, Andhra State wide bandh news, Andhra State wide bandh latest news, ಆಂಧ್ರ ರಾಜ್ಯವ್ಯಾಪಿ ಬಂದ್, ಆಂಧ್ರ ರಾಜ್ಯವ್ಯಾಪಿ ಬಂದ್ ಸುದ್ದಿ,
ವೈಜಾಗ್ ಸ್ಟೀಲ್ ಪ್ಲಾಂಟ್ ಖಾಸಗೀಕರಣದ ನಿರ್ಧಾರದ ವಿರುದ್ಧ ಆಂಧ್ರ ರಾಜ್ಯವ್ಯಾಪಿ ಬಂದ್

By

Published : Mar 5, 2021, 9:14 AM IST

ವಿಶಾಖಪಟ್ಟಣಂ:ಆಂಧ್ರಪ್ರದೇಶದ ವೈಜಾಗ್ ಸ್ಟೀಲ್ ಪ್ಲಾಂಟ್‌ನ ಖಾಸಗೀಕರಣದ ನಿರ್ಧಾರದ ವಿರುದ್ಧ ರಾಜ್ಯವ್ಯಾಪಿ ಬಂದ್​ಗೆ ಕರೆ ನೀಡಲಾಗಿದೆ.

ಸರ್ಕಾರ ಬಂದ್‌ಗೆ ಬೆಂಬಲ ನೀಡುವುದಾಗಿಯೂ ಘೋಷಿಸಿದೆ. ಬಿಜೆಪಿ ಹೊರತುಪಡಿಸಿ ರಾಜ್ಯದ ಎಲ್ಲ ಪಕ್ಷಗಳು, ಸಾರ್ವಜನಿಕ ಮತ್ತು ಕಾರ್ಮಿಕ ಸಂಘಗಳು ಬಂದ್‌ಗೆ ಸಂಪೂರ್ಣ ಸಹಕಾರ ನೀಡುತ್ತಿವೆ.

ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ಬಂದ್​ ಮಾಡಲಾಗಿದೆ. ಆಂಧ್ರ ವಿಶ್ವವಿದ್ಯಾಲಯವನ್ನು ಬಂದ್​ ಮಾಡಲಾಗಿರುವುದರ ಬಗ್ಗೆ ಅಧಿಕೃತವಾಗಿ ಘೋಷಿಸಿದೆ. ಟ್ರಕ್ ಮಾಲೀಕರ ಸಂಘಗಳು, ನಾಗರಿಕ ಸಮಾಜ ಮತ್ತು ಕಾರ್ಮಿಕ ಸಂಘಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.

ಬಿಜೆಪಿ ಹೊರತುಪಡಿಸಿ ಎಲ್ಲ ಪಕ್ಷಗಳ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರು ಜಿಲ್ಲೆಗಳಲ್ಲಿ ತಮ್ಮ ಪಕ್ಷದ ಸದಸ್ಯರನ್ನು ಕರೆದು ಬಂದ್ ಸಹಕರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಸಹಕಾರ ಮತ್ತು ಬಂದ್‌ಗೆ ಬೆಂಬಲ ನೀಡಬೇಕು ಎಂದು ಮುಖ್ಯಮಂತ್ರಿ ಜಗನ್ ನಿರ್ಧರಿಸಿದ್ದಾರೆ ಎಂದು ಸಚಿವ ಪೆರ್ನಿ ನಾನಿ ಹೇಳಿದರು.

ಎಪಿಎಸ್​ಆರ್‌ಟಿಸಿ ಬಸ್‌ಗಳು ಮಧ್ಯಾಹ್ನದವರೆಗೆ ಸಂಚಾರ ಮಾಡಲಿವೆ ಎಂದು ಸಚಿವ ನಾನಿ ಹೇಳಿದರು.

ABOUT THE AUTHOR

...view details