ನವದೆಹಲಿ: ದೇಶದಲ್ಲಿ ಕೋವಿಡ್ ಆತಂಕದ ನಡುವೆ ಲಸಿಕೆ ಅಭಿಯಾನವು ವೇಗ ಪಡೆದುಕೊಂಡಿರುವುದು ಸಮಾಧಾನ ತಂದಿದೆ. ಹೀಗಾಗಿ ನಾನಾ ರಾಜ್ಯಗಳು ಶಾಲಾ- ಕಾಲೇಜುಗಳ ಆರಂಭಕ್ಕೆ ಮುಂದಾಗಿವೆ.
ಇಂದಿನಿಂದಲೇ ಕೆಲವೆಡೆ ಪೂರ್ಣ ಪ್ರಮಾಣದ ಶಾಲಾ-ಕಾಲೇಜುಗಳು ಆರಂಭವಾಗುತ್ತಿದ್ದರೆ. ಕೋವಿಡ್ ಆತಂಕ ಹೆಚ್ಚಿರುವ ಪ್ರದೇಶಗಳು ಹಂತ ಹಂತವಾಗಿ ಶಾಲೆ ತೆರೆಯಲು ಮುಂದಾಗಿವೆ.ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಗೂ ಮುಂಚಿತವಾಗಿ ಎಲ್ಲ ಶಾಲಾ ಶಿಕ್ಷಕರಿಗೆ ಆದ್ಯತೆ ಮೇರೆ ಲಸಿಕೆ ಹಾಕುವಂತೆ ಕೇಂದ್ರ ಶಿಕ್ಷಣ ಸಚಿವ ಮನ್ಸುಖ್ ಮಾಂಡವಿಯಾ ಆಯಾ ರಾಜ್ಯಗಳಿಗೆ ಸೂಚಿಸಿದ್ದಾರೆ.
ದೆಹಲಿಯಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಿಸುತ್ತಿರುವ ಹಿನ್ನೆಲೆ ಸೆ.1ರಿಂದ 9 ನೇ ತರಗತಿಯಿಂದ 12 ಹಾಗೂ ಎಲ್ಲಾ ಕಾಲೇಜುಗಳು ಆರಂಭವಾಗಲಿದೆ ಎಂದು ದೆಹಲಿ ಸರ್ಕಾರ ಘೋಷಿಸಿದೆ. ಆದರೆ, ಕೋವಿಡ್ ನಿಯಮಾವಳಿಗಳ ಕಡ್ಡಾಯ ಪಾಲನೆಯ ಜೊತೆಗೆ ಹಲವು ನಿಯಮ ಜಾರಿ ಮಾಡಿದೆ. ಕೇವಲ ಶೇ.50ರಷ್ಟು ಮಾತ್ರ ವಿದ್ಯಾರ್ಥಿಗಳಿಗೆ ಅವಕಾಶ ನೀಡಿ ದಿನ ಬಿಟ್ಟು ದಿನ ಬದಲಿ ಆಸನ ವ್ಯವಸ್ಥೆಯ ನಿಯಮ ಜಾರಿ ಮಾಡಲಾಗಿದೆ. ಜೊತೆಗ ಥರ್ಮಲ್ ಸ್ಕ್ರೀನಿಂಗ್, ಊಟದ ವಿರಾಮ ಕಡಿತ ಸೇರಿ ಹಲವು ರೂಲ್ಸ್ ಕಡ್ಡಾಯ ಮಾಡಲಾಗಿದೆ.
ಪೂರ್ಣ ಪ್ರಮಾಣದಲ್ಲಿ ಶಾಲೆ ಪುನಾರಂಭ
ತೆಲಂಗಾಣದಲ್ಲಿ ಕೋವಿಡ್ ಪ್ರಕರಣ ಕಡಿಮೆಯಾದ ಬೆನ್ನಲ್ಲೇ ಎಲ್ಲ ಶಾಲಾ - ಕಾಲೇಜುಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಕೋಚಿಂಗ್ ಸೆಂಟರ್ಸ್, ಪಾಲಿಟೆಕ್ನಿಕ್ ಕಾಲೇಜುಗಳಲ್ಲಿಯೂ ತರಗತಿ ಆರಂಭಕ್ಕೆ ಸರ್ಕಾರ ನಿರ್ಧರಿಸಿದ್ದು, ಇಂದಿನಿಂದ ಕೋವಿಡ್ ನಿಯಮಗಳ ಕಡ್ಡಾಯ ಪಾಲನೆಯ ಜೊತೆ ತರಗತಿ ಆರಂಭವಾಗುತ್ತಿವೆ. ಆದರೆ ವಸತಿ ಶಾಲೆಗಳ ಆರಂಭ ಕುರಿತಂತೆ ಸ್ಪಷ್ಟನೆ ನೀಡಲ್ಲ.
ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್