ಹೈದರಾಬಾದ್:ಸಾಮಾನ್ಯವಾಗಿ ಮಹಿಳೆಯರು ತಮ್ಮ ಉದ್ಯೋಗ ಸ್ಥಳದಲ್ಲಿ ಎದುರಿಸುವ ದೌರ್ಜನ್ಯಗಳಲ್ಲಿ ಲೈಂಗಿಕ ಕಿರುಕುಳ ಒಳಗೊಂಡಂತೆ ವ್ಯಂಗ್ಯ ಮಾತು, ಟೀಕೆಗಳಿಂದ ಅಸಹನೀಯ ಎನ್ನಿಸುವ ಕಿರುಕುಳದವರೆಗೆ ತಮ್ಮ ಮೇಲಧಿಕಾರಿ, ಸಹೋದ್ಯೋಗಿ, ತಮ್ಮ ಕೈಕೆಳಗೆ ಕೆಲಸ ಮಾಡುವ ನೌಕರರಿಂದ ದೌರ್ಜನ್ಯವನ್ನು ಎದುರಿಸುವ ಪ್ರಕರಣಗಳು ಪತ್ತೆಯಾಗಿವೆ.
ಈ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ಅಪರಾಧ ಹೆಚ್ಚಳ: ವಿಶೇಷ ವರದಿ - State/UT-wise Conviction Rate (CVR)
2015 ರಿಂದ 2019ರ ವರೆಗಿನ ರಾಜ್ಯವಾರು ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ವರದಿಯನ್ನು ಗಮನಿಸಿದಾಗ ಅಚ್ಚರಿಯೆಂಬಂತೆ ಮಿಜೋರಾಂ ರಾಜ್ಯದಲ್ಲಿ ಹೆಚ್ಚಿನ ಅಪರಾಧ ಪ್ರಕರಣಗಳು ಕಂಡುಬಂದಿದೆ.
ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಹೆಚ್ಚಳ
ದೇಶದಲ್ಲಿ ಅಪರಾಧ ಪ್ರಕರಣಗಳು ಮಹಿಳೆಯರ ಮೇಲೆಯೇ ಹೆಚ್ಚುತ್ತಿರುವುದು ಇತ್ತೀಚಿನ ಅಧ್ಯಯನಗಳಿಂದ ತಿಳಿದುಬಂದಿದೆ. ಇದಕ್ಕೆ ಸೂಕ್ತ ಉದಾಹರಣೆಯಾಗಿ 2015 ರಿಂದ 2019ರ ವರೆಗೆ ರಾಜ್ಯವಾರು ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ವರದಿಯನ್ನು ಗಮನಿಸಿದಾಗ ಅಚ್ಚರಿಯೆಂಬಂತೆ ಮಿಜೋರಾಂ ರಾಜ್ಯದಲ್ಲಿ ಹೆಚ್ಚಿನ ಅಪರಾಧ ಪ್ರಕರಣಗಳು ಪತ್ತೆಯಾಗಿವೆ.
ಮಹಿಳೆಯರ ಮೇಲಿನ ಅಪರಾಧ ಪ್ರಕರಣ ಹೆಚ್ಚುತ್ತಿರುವ ಟಾಪ್ 5 ರಾಜ್ಯಗಳ ಮಾಹಿತಿ
ಟಾಪ್ 5 ರಾಜ್ಯಗಳ ಮಾಹಿತಿ | 2015 | ಅಪರಾಧ ಪ್ರಮಾಣ | 2016 | ಅಪರಾಧ ಪ್ರಮಾಣ | 2017 | ಅಪರಾಧ ಪ್ರಮಾಣ | 2018 | ಅಪರಾಧ ಪ್ರಮಾಣ | 2019 | ಅಪರಾಧ ಪ್ರಮಾಣ |
1 | ಮಿಜೋರಾಂ | 77.5% | ಮಿಜೋರಾಂ | 88.8% | ನಾಗಾಲ್ಯಾಂಡ್ | 74.5% | ಮಿಜೋರಾಂ | 90.2% | ಮಿಜೋರಾಂ | 88.3% |
2 | ನಾಗಾಲ್ಯಾಂಡ್ | 77.4% | ಮೇಘಾಲಯ | 67.7% | ಮಿಜೋರಾಂ | 71.4% | ನಾಗಾಲ್ಯಾಂಡ್ | 89.7% | ಮಣಿಪುರ | 58.0% |
3 | ಉತ್ತರಾಖಂಡ | 57.1% | ಉತ್ತರಾಖಂಡ | 52.6% | ಉತ್ತರ ಪ್ರದೇಶ | 66.4% | ಉತ್ತರ ಪ್ರದೇಶ | 60.3% | ಮೇಘಾಲಯ | 57.3% |
4 | ಉತ್ತರ ಪ್ರದೇಶ | 55.8% | ಉತ್ತರಾಖಂಡ | 46.2% | ಉತ್ತರಾಖಂಡ | 62.9% | ಉತ್ತರಾಖಂಡ | 52.0% | ಉತ್ತರ ಪ್ರದೇಶ | 55.2% |
5 | ಛತ್ತೀಸ್ಘಡ | 44.2% | ಮಣಿಪುರ | 43.8% | ಮಣಿಪುರ | 60.9% | ಮಣಿಪುರ | 43.3% | ಉತ್ತರಾಖಂಡ | 50.6% |