ಕರ್ನಾಟಕ

karnataka

ETV Bharat / bharat

500 ವರ್ಷಗಳ ಇತಿಹಾಸ ಇರುವ ಚೀಸ್​ಗೆ ಮರುಜೀವ ನೀಡಲಿದೆ ಪಶ್ಚಿಮ ಬಂಗಾಳ ಸರ್ಕಾರ - Portuguese tradition has a history of 500 years

ಪೋರ್ಚುಗೀಸ್ ವಲಸಿಗರು ಭಾರತವನ್ನು ತೊರೆದಿದ್ದರೂ ಸಹ ನಮಗೆ ಪ್ರವಾಸಿ ಆಕರ್ಷಣೆಗಳಾದ ಬ್ಯಾಂಡೆಲ್ ಬೆಸಿಲಿಕಾ (ಚರ್ಚ್) ಮತ್ತು ‘ಬಾಂಡೆಲ್ ಚೀಸ್’ಗಳನ್ನು ಉಡುಗೊರೆಯಾಗಿ ನೀಡಿ ಹೋಗಿದ್ದಾರೆ. ಇದರಲ್ಲಿ ಹೆಚ್ಚು ಹೆಸರುವಾಸಿಯಾಗಿರುವುದು ಬಾಂಡೆಲ್ ಚೀಸ್. ಈಗ ಇದನ್ನು ದೊಡ್ಡ ಉದ್ಯಮವನ್ನಾಗಿಸಲು ಮಮತಾ ದೀದಿ ಸರ್ಕಾರ ಮುಂದಾಗಿದೆ..

State government set to revive 500-year-old Bandel cheese
State government set to revive 500-year-old Bandel cheese

By

Published : Jun 5, 2022, 4:10 PM IST

ಕೋಲ್ಕತ್ತಾ: ಪೋರ್ಚುಗೀಸ್ ಚೀಸ್​ಗೆ 500 ವರ್ಷಗಳ ಇತಿಹಾಸವಿದೆ. ಕಳೆದುಹೋದ ಕೆಲವು ಇಂತಹ ವ್ಯವಸ್ಥೆಗಳನ್ನು ಜೀವಂತವಾಗಿಡಲು ರಾಜ್ಯ ಕಾರ್ಯದರ್ಶಿ ನಾಬಣ್ಣ ಮುಂದಾಗಿದ್ದಾರೆ. ಇದರಲ್ಲಿ ಬ್ಯಾಂಡೆಲ್ ಚೀಸ್ ಪ್ರಮುಖವಾಗಿದೆ. ಅಳಿವಿನಂಚಿನಲ್ಲಿರುವ ಪೋರ್ಚುಗೀಸ್ ಚೀಸ್ ಇದಾಗಿದೆ. ಮಮತಾ ಬ್ಯಾನರ್ಜಿಯವರ ಸರ್ಕಾರವು ಪೋರ್ಚುಗೀಸರ ಚೀಸ್​ನ ರುಚಿಯನ್ನು ಭಾರತೀಯರಿಗೆ ನೀಡಲು ಮುಂದಾಗಿದೆ.

ಪೋರ್ಚುಗೀಸ್ ವಲಸಿಗರು ಭಾರತವನ್ನು ತೊರೆದಿದ್ದರೂ ಸಹ, ನಮಗೆ ಪ್ರವಾಸಿ ಆಕರ್ಷಣೆಗಳಾದ ಬ್ಯಾಂಡೆಲ್ ಬೆಸಿಲಿಕಾ (ಚರ್ಚ್) ಮತ್ತು ‘ಬಾಂಡೆಲ್ ಚೀಸ್’ಗಳನ್ನು ಉಡುಗೊರೆಯಾಗಿ ನೀಡಿ ಹೋಗಿದ್ದಾರೆ. ಒಂದು ಕಾಲದಲ್ಲಿ ಬಾಂಡೆಲ್ ಚೀಸ್ ಏಷ್ಯಾದ್ಯಂತ ಪ್ರಸಿದ್ಧವಾಗಿತ್ತು. ಆದರೆ, ಈಗ ಆ ವಸ್ತು ಅಳಿವಿನ ಅಂಚಿನಲ್ಲಿದೆ.

ರಾಜ್ಯದಲ್ಲಿ ಬೆರಳೆಣಿಕೆಯಷ್ಟು ಮಳಿಗೆಗಳನ್ನು ಹೊರತುಪಡಿಸಿ, ಈ ಚೀಸ್​ ತೆಗೆದುಕೊಳ್ಳುವವರು ಬಹಳ ಕಡಿಮೆಯಾಗಿದ್ದಾರೆ. ಆದಾಗ್ಯೂ, ಈ ಪೋರ್ಚುಗೀಸ್ ಚೀಸ್ ಇನ್ನೂ ಕೋಲ್ಕತ್ತಾದ ಹಾಗ್ ಮಾರ್ಕೆಟ್‌ನಲ್ಲಿ ಕೇವಲ ಒಂದೆರಡು ಅಂಗಡಿಗಳಲ್ಲಿ ಲಭ್ಯವಿದೆ. ಹೂಗ್ಲಿ ಮತ್ತು ಬಂಕುರಾ ಜಿಲ್ಲೆಗಳಲ್ಲಿ ಬೆರಳೆಣಿಕೆಯ ಕುಟುಂಬಗಳು ಬಂಡಲ್ ಚೀಸ್ ತಯಾರಿಕೆಯಲ್ಲಿ ತೊಡಗಿಕೊಂಡಿವೆ.

ಆದಾಗ್ಯೂ, ಪ್ರಪಂಚದಾದ್ಯಂತ ಹೆಚ್ಚಿನ ದೇಶಗಳಲ್ಲಿ ಇದು ಬೇಡಿಕೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಚೀಸ್ ತಯಾರಿಕೆ ಉದ್ಯಮವನ್ನು ಪುನಶ್ಚೇತನಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೆಲವು ಹೂಡಿಕೆದಾರರನ್ನು ಒಳಗೊಳ್ಳುವ ಮೂಲಕ ಈ ಅಪರೂಪದ ಚೀಸ್ ತಯಾರಿಸಲು ಈಗಾಗಲೇ ಉಪಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಇದು ಪ್ಯಾನ್-ಇಂಡಿಯಾ ಬೇಡಿಕೆಯನ್ನು ಹೊಂದಿರುವುದರಿಂದ ಅಗತ್ಯವಿದ್ದಲ್ಲಿ ರಾಜ್ಯ ಸರ್ಕಾರವು ತರಬೇತಿಯನ್ನು ನೀಡಲು ಚಿಂತನೆ ನಡೆಸುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಅಳಿವಿನಂಚಿನಲ್ಲಿರುವ ಆಹಾರ ಉದ್ಯಮಗಳನ್ನು ಉಳಿಸಲು ರಾಜ್ಯ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಹಿಂದೆ ಸಾಕಷ್ಟು ಬೇಡಿಕೆ ಇತ್ತು. ಆದರೆ, ಈಗ ಕಳೆದುಹೋಗುತ್ತಿದೆ ಎಂದು ಉನ್ನತ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಆಮ್‌ ಆದ್ಮಿಯ ರಾಜ್ಯಾಧ್ಯಕ್ಷರಾಗಿ ಪೃಥ್ವಿ ರೆಡ್ಡಿ ಪುನರಾಯ್ಕೆ

For All Latest Updates

TAGGED:

ABOUT THE AUTHOR

...view details