ಮುಂಬೈ :ವಾರ್ಷಿಕವಾಗಿ 180 ಕೋಟಿ ರೂ. ಪಾವತಿಸಲು ಬಿಡ್ ಮಾಡುವ ಮೂಲಕ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಇನ್ನೂ ಐದು ವರ್ಷಗಳ ಕಾಲ ಪ್ರಸಾರ ಮಾಡುವ ಮಾಧ್ಯಮ ಹಕ್ಕುಗಳನ್ನು ಸ್ಟಾರ್ ಇಂಡಿಯಾ ಉಳಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಸರಾಸರಿ ವಾರ್ಷಿಕ ಮೌಲ್ಯವು ಕಳೆದ ವರ್ಷ ಪಾವತಿಸಿದ ಹಕ್ಕುಗಳ ಶುಲ್ಕಕ್ಕಿಂತ ದ್ವಿಗುಣವಾಗಿದೆ ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ. ಕಳೆದ ವರ್ಷದ ಪಾವತಿಯು 90 ಕೋಟಿ ರೂ. ಅಗಿತ್ತು. ವಿಶ್ವ ದರ್ಜೆಯ ಫೀಡ್ ಉತ್ಪಾದಿಸುವ ಜವಾಬ್ದಾರಿಯನ್ನು ಈ ನೆಟ್‌ವರ್ಕ್ ವಹಿಸಲಿದೆ ಮತ್ತು ಲೀಗ್‌ಗಾಗಿ ಅದರ ಮಾರುಕಟ್ಟೆ ಬದ್ಧತೆ ನಿಯೋಜಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಪ್ರೊ ಕಬಡ್ಡಿ ಲೀಗ್ನ ಪಂದ್ಯಗಳನ್ನು ಮೊದಲ ಏಳು ವರ್ಷಗಳಿಂದ ಸ್ಟಾರ್ ಲೀಗ್ ಪ್ರಸಾರ ಮಾಡುತ್ತಿತ್ತು. ಮುಂದಿನ ಐದು ಸೀಸನ್ಗಳ ಹಕ್ಕುಗಳನ್ನು ಮಾರಾಟ ಮಾಡಲು ಅದರ ಸಂಘಟಕರಾದ ಮಾಶಲ್ ಸ್ಪೋರ್ಟ್ಸ್ ಇದೇ ಮೊದಲ ಬಾರಿಗೆ ಬಿಡ್ಡಿಂಗ್ ಪ್ರಕ್ರಿಯೆ ಆಯೋಜಿಸಿದ್ದರು. ಬ್ರಾಡ್‌ಕಾಸ್ಟರ್‌ನಿಂದ ಹೆಚ್ಚಿನ ಪಾವತಿ ಆಗಿರುವ ಫ್ರಾಂಚೈಸಿಗಳ ಆದಾಯವನ್ನು ದ್ವಿಗುಣಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.
"ಪ್ರೊ ಕಬಡ್ಡಿ ಲೀಗ್ನ ಮುಂದಿನ ಐದು ಸೀಸನ್ಗಳ ಟೆಲಿವಿಷನ್ ಮತ್ತು ಡಿಜಿಟಲ್ ಹಕ್ಕುಗಳನ್ನು ಉಳಿಸಿಕೊಂಡಿರುವ ಸ್ಟಾರ್ ನೆಟ್‌ವರ್ಕ್ ರೋಮಾಂಚನಗೊಂಡಿದೆ" ಎಂದು ಸ್ಟಾರ್ ಇಂಡಿಯಾ ಅಧ್ಯಕ್ಷ ಕೆ ಮಾಧವನ್ ಹೇಳಿದ್ದಾರೆ. ಪ್ರೊ ಕಬಡ್ಡಿ ಲೀಗ್ ಸಾಂಪ್ರದಾಯಿಕ ಕ್ರೀಡೆಯಾದ ಕಬಡ್ಡಿಯ ಕುರಿತು ಆಸಕ್ತಿ ಪುನರುಜ್ಜೀವನಗೊಳಿಸಿದೆ.