ಬರೇಲಿ :ಈ ವರ್ಷ ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆ ಕಾಂಗ್ರೆಸ್ ಭರ್ಜರಿಯಾಗಿ ತಯಾರಿ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ಚುನಾವಣಾ ಕಾರ್ಯಕ್ರಮದ ಹಿನ್ನೆಲೆ ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ ಕಾಲ್ತುಳಿತ ಉಂಟಾಗಿದೆ.
'ಲಡ್ಕಿ ಹೂಂ, ಲಡ್ ಸಕ್ತಿ ಹೂಂ'(ನಾನು ಹುಡುಗಿ ಮತ್ತು ನಾನೂ ಹೋರಾಡಬಲ್ಲೆ) ಎಂಬ ಘೋಷ ವಾಕ್ಯದೊಂದಿಗೆ ಚುನಾವಣಾ ಪ್ರಚಾರಕ್ಕಾಗಿ ವಿಶೇಷ ಕಾರ್ಯಕ್ರಮವೊಂದನ್ನು ರೂಪಿಸಿದೆ. ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.
ಕಾಂಗ್ರೆಸ್ ಚುನಾವಣಾ ಜಾಥ ಹಿನ್ನೆಲೆ ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ ಇಂತಹ ಘಟನೆ ನಡೆದಿದೆ. ಬಾಲಕಿಯರು ಓಡುವಾಗ ಮುಗ್ಗರಿಸಿ ಬಿದ್ದಿರುವ ವಿಡಿಯೋಗಳು ಈಗ ವೈರಲ್ ಆಗಿವೆ. ಬಾಲಕಿಯರು ಬಿದ್ದಿದ್ದರಿಂದ ಹಿಂದಿನಿಂದ ಬರುತ್ತಿದ್ದವರು ಹಠಾತ್ ಆಗಿ ತಮ್ಮ ಓಟ ನಿಲ್ಲಿಸಬೇಕಾಯಿತು. ಹಾಗೂ ಮುಂಜೋಲಿ ತಡೆಯದೇ ಕೆಳಕ್ಕುರಳಬೇಕಾದ ಪರಿಸ್ಥಿತಿಗೆ ಕಾರಣವಾಯಿತು.
ಕ್ಷಮೆ ಕೇಳಿದ ಮಾಜಿ ಮೇಯರ್ ಅರೋನ್..
ಮ್ಯಾರಥಾನ್‌ನಲ್ಲಿ ಆದ ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕಿ ಹಾಗೂ ಬರೇಲಿ ಮಾಜಿ ಮೇಯರ್ ಸುಪ್ರಿಯಾ ಅರೋನ್, ಆತಂಕಪಡುವ ಅಗತ್ಯವೇನೂ ಇಲ್ಲ. ಎಲ್ಲವೂ ಸರಿಯಾಗಿಯೇ ಇದೆ ಎಂದು ಹೇಳಿದ್ದಾರೆ. ಬಾಲಕಿಯರು ಎಡವಿ ಬೀಳುವುದು ಸ್ವಾಭಾವಿಕವಾದದ್ದು. ಆದರೂ ನಾವು ಈ ಘಟನೆಗೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.