ಮಧ್ಯಪ್ರದೇಶ: ಇಲ್ಲಿನ ಚಿಂದ್ವಾರ ಜಿಲ್ಲೆಯ ವ್ಯಾಕ್ಸಿನೇಷನ್ ಕೇಂದ್ರವೊಂದರಲ್ಲಿ ಲಸಿಕೆ ಪಡೆಯಲು ಜನ ಮುಗಿಬಿದ್ದ ಘಟನೆ ನಡೆದಿದ್ದು, ವಿಡಿಯೋ ಇದೀಗ ವೈರಲ್ ಆಗಿದೆ.
ಮಧ್ಯಪ್ರದೇಶದ ಲಸಿಕೆ ಕೇಂದ್ರದಲ್ಲಿ ಬಿದ್ದು-ಎದ್ದ ಜನ ಲಸಿಕೆ ಕೇಂದ್ರವನ್ನು ತೆರೆಯುತ್ತಿದ್ದಂತೆ ನೆರೆದಿದ್ದ ಜನ ಪರಸ್ಪರರ ಮೇಲೆ ಬೀಳುತ್ತಾ, ಏಳುತ್ತಾ ದೌಡಾಯಿಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರವಾಗಿದೆ. ಪರಿಸ್ಥಿತಿ ಕೈಮೀರಿ ಹೋಗಲಿದೆ ಎಂಬುದನ್ನು ಗಮನಿಸಿದ ಅಧಿಕಾರಿಗಳು ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದಾರೆ.
ಮಧ್ಯಪ್ರದೇಶ ಸರ್ಕಾರವು ಇಲ್ಲಿಯವರೆಗೆ ಜನಸಂಖ್ಯೆಯ ಶೇ 3 ರಷ್ಟು ಜನರಿಗೆ ಎರಡೂ ಡೋಸ್ ಲಸಿಕೆಯನ್ನು ಒದಗಿಸಿದೆ. ಆದಾಗ್ಯೂ, ಜೂನ್ 21 ರಂದು 17 ಲಕ್ಷಕ್ಕೂ ಹೆಚ್ಚು ವ್ಯಾಕ್ಸಿನೇಷನ್ ಹೊಂದಿರುವ ರಾಷ್ಟ್ರೀಯ ದಾಖಲೆಯನ್ನು ಮಧ್ಯಪ್ರದೇಶ ಮಾಡಿತ್ತು. ಆದ್ರೆ, ಇಲ್ಲಿನ ಜನರು ವ್ಯಾಕ್ಸಿನ್ ಪಡೆಯದಿದ್ದರೂ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಪಡೆಯುತ್ತಿದ್ದಾರೆ ಎಂಬ ಬಗ್ಗೆ ಹಲವು ದೂರುಗಳು ಬಂದಿದ್ದವು.
ಇದನ್ನೂ ಓದಿ:ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದೇ ಮೋದಿ 'ಅಚ್ಛೇ ದಿನ್': ಖರ್ಗೆ ಆಕ್ರೋಶ