ಕರ್ನಾಟಕ

karnataka

ಸಿಎಂ ಆದ ಮೊದಲ ದಿನವೇ ತಮಿಳುನಾಡು ಜನತೆಗೆ ಸ್ಟಾಲಿನ್ ಬಂಪರ್‌ ಗಿಫ್ಟ್‌

ಪ್ರತಿ ಪಡಿತರ ಚೀಟಿದಾರರಿಗೆ 4,000 ರೂ.ಗಳ ಕೋವಿಡ್​ ಪರಿಹಾರ, ಹಾಲಿನ ಬೆಲೆ ಇಳಿಕೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇರಿದಂತೆ ತಮಿಳುನಾಡಿನ ಜನರಿಗೆ ನೂತನ ಸಿಎಂ ಎಂ.ಕೆ.ಸ್ಟಾಲಿನ್​ ಬಂಪರ್​ ಕೊಡುಗೆ ಘೋಷಿಸಿದ್ದಾರೆ.

By

Published : May 7, 2021, 2:21 PM IST

Published : May 7, 2021, 2:21 PM IST

Stalin sanctions Bumper gift to  Tamilnadu
ಸಿಎಂ ಆದ ಮೊದಲ ದಿನವೇ ತಮಿಳುನಾಡು ಜನತೆಗೆ ಬಂಪರ್​ ಗಿಫ್ಟ್​ ಕೊಟ್ಟ ಎಂ.ಕೆ.ಸ್ಟಾಲಿನ್

ಚೆನ್ನೈ (ತಮಿಳುನಾಡು): ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಎಂ.ಕೆ.ಸ್ಟಾಲಿನ್ ಅವರು ಫೋರ್ಟ್ ಸೇಂಟ್ ಜಾರ್ಜ್‌ನ ಸಚಿವಾಲಯದಲ್ಲಿರುವ ತಮ್ಮ ಕಚೇರಿಯಿಂದ ಐದು ನಿರ್ಣಾಯಕ ಕಡತಗಳಿಗೆ ಸಹಿ ಹಾಕಿದರು. ಈ ಮೂಲಕ ಸಿಎಂ ಆಗಿ ಪದಗ್ರಹಣ ಮಾಡಿದ ದಿನದಂದೇ ತಮಿಳುನಾಡಿನ ಜನತೆಯ ಖುಷಿ ಹೆಚ್ಚಿಸಿದ್ದಾರೆ.

ಕೊರೊನಾ ಚಿಕಿತ್ಸೆಯನ್ನು ಮುಖ್ಯಮಂತ್ರಿಗಳ ಆರೋಗ್ಯ ವಿಮಾ ಯೋಜನೆಯಡಿ ನೀಡುವುದು, ಖಾಸಗಿ ಆಸ್ಪತ್ರೆಗಳಲ್ಲಿ ಈ ಯೋಜನೆಯಡಿ ಎಲ್ಲಾ ಚಿಕಿತ್ಸಾ ವೆಚ್ಚಗಳನ್ನು ಸರ್ಕಾರವು ಮರುಪಾವತಿ ಮಾಡುವುದು, ರಾಜ್ಯಾದ್ಯಂತ ಮಹಿಳೆಯರಿಗೆ ಸರ್ಕಾರಿ ಸಿಟಿ ಬಸ್‌ಗಳಲ್ಲಿ (ಸಾಮಾನ್ಯ ಸೇವೆ) ಉಚಿತ ಪ್ರಯಾಣವನ್ನು ಘೋಷಿಸಿದ್ದಾರೆ.

ನೂತನ ಸಿಎಂ ಎಂ.ಕೆ.ಸ್ಟಾಲಿನ್

ಚುನಾವಣಾ ಅಭಿಯಾನದ ಸಮಯದಲ್ಲಿ ಭರವಸೆ ನೀಡಿದಂತೆ ಪ್ರತಿ ಪಡಿತರ ಚೀಟಿದಾರರಿಗೆ 4,000 ರೂ.ಗಳ ಕೋವಿಡ್​ ಪರಿಹಾರವನ್ನು ವಿತರಿಸಲಾಗುವುದು. ಕೊರೊನಾ ಸಾಂಕ್ರಾಮಿಕ ಪರಿಹಾರವಾಗಿ ಮೊದಲ ಕಂತು 2,000 ರೂ. ಮೇ ತಿಂಗಳಲ್ಲಿ ನೀಡಲಾಗುವುದು ಎಂದು ನೂತನ ಸಿಎಂ ಘೋಷಿಸಿದ್ದಾರೆ.

ಇದನ್ನೂ ಓದಿ:ದಶಕದ ಬಳಿಕ ತಮಿಳುನಾಡು ಗದ್ದುಗೆ ಏರಿದ ಡಿಎಂಕೆ: ಸಿಎಂ ಆಗಿ ಎಂ.ಕೆ.ಸ್ಟಾಲಿನ್‌ ಪ್ರಮಾಣ

ಸರ್ಕಾರಿ ಹಾಲಿನ ಸಹಕಾರಿ ಸಂಘವಾದ ಆವಿನ್, ಹಾಲಿನ ಬೆಲೆಯನ್ನು ಲೀಟರ್‌ಗೆ 3 ರೂ.ಗಳಷ್ಟು ಕಡಿಮೆ ಮಾಡಿದ್ದು, ಇದು ಮೇ 16 ರಿಂದ ಜಾರಿಗೆ ಬರಲಿದೆ.

For All Latest Updates

TAGGED:

ABOUT THE AUTHOR

...view details