ಕರ್ನಾಟಕ

karnataka

ETV Bharat / bharat

ಗ್ರಾಮ ಸಭೆಯಲ್ಲಿ ಭಾಗಿಯಾದ ಸ್ಟಾಲಿನ್​.. ಈ ಸಾಧನೆ ಮಾಡಿದ ಮೊದಲ ಮುಖ್ಯಮಂತ್ರಿ..

ಅನೇಕ ವರ್ಷಗಳ ಕಾಲ ಪಪ್ಪಪಟ್ಟಿಯಲ್ಲಿ ಸ್ಥಳೀಯ ಚುನಾವಣೆ ನಡೆಸಲು ಸಾಧ್ಯವಾಗಿರಲಿಲ್ಲ. ಆದರೆ, ಕರುಣಾನಿಧಿ ಅವರ ಅಧಿಕಾರವಧಿಯಲ್ಲಿ ಈ ಸಮಸ್ಯೆ ಬಗೆಹರಿಸಲಾಯಿತು ಎಂದರು. ಚುನಾವಣೆ ಪ್ರಣಾಳಿಕೆಯಲ್ಲಿನ 202 ಭರವಸೆ ಈಗಾಗಲೇ ಪೂರ್ಣಮಾಡಲಾಗಿದ್ದು, ರೈತರಿಗೋಸ್ಕರ ಪ್ರತ್ಯೇಕ ಬಜೆಟ್ ಸಹ ಮಂಡನೆ ಮಾಡಲಾಗಿದೆ..

Stalin
Stalin

By

Published : Oct 2, 2021, 9:04 PM IST

ಚೆನ್ನೈ(ತಮಿಳುನಾಡು): ತಮಿಳುನಾಡಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದಲೂ ಒಂದಿಲ್ಲೊಂದು ಮಾದರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಎಲ್ಲರ ಮನಗೆದ್ದಿರುವ ತಮಿಳುನಾಡಿನ ನೂತನ ಸಿಎಂ ಎಂ ಕೆ ಸ್ಟಾಲಿನ್​ ಇದೀಗ ಮತ್ತೊಂದು ಸಾಧನೆ ಮಾಡಿದ್ದಾರೆ.

ತಮಿಳುನಾಡಿನ ರಾಜಕೀಯ ಇತಿಹಾಸದಲ್ಲೇ ಎಂ.ಕೆ ಸ್ಟಾಲಿನ್​ ಗ್ರಾಮ ಸಭೆವೊಂದರಲ್ಲಿ ಭಾಗಿಯಾಗಿದ್ದು, ಈ ಸಾಧನೆ ಮಾಡಿರುವ ಮೊದಲ ಸಿಎಂ ಆಗಿ ಹೊರ ಹೊಮ್ಮಿದ್ದಾರೆ. ಗಾಂಧಿ ಜಯಂತಿ ಅಂಗವಾಗಿ ಮಧುರೈನ ಪಪ್ಪಪಟ್ಟಿ ಗ್ರಾಮದಲ್ಲಿ ನಡೆದ ಗ್ರಾಮಸಭೆಯಲ್ಲಿ ಭಾಗಿಯಾಗಿ ಅಲ್ಲಿನ ಸಮಸ್ಯೆ ಆಗಲಿಸಿದರು.

ಈ ವೇಳೆ ಮಾತನಾಡಿರುವ ಅವರು, ಭಾರತ ಅಭಿವೃದ್ಧಿ ಹಳ್ಳಿಗಳ ಬೆಳವಣಿಗೆ ಮೇಲೆ ಕೇಂದ್ರೀಕೃತವಾಗಿದೆ. ಆಡಳಿತ ರಚನೆಯಲ್ಲಿ 3ನೇ ಹಂತದಲ್ಲಿರುವ ಸ್ಥಳೀಯ ಸಂಸ್ಥೆಗಳು ಯಾವಾಗಲೂ ಸದೃಢವಾಗಿರಬೇಕು ಎಂದರು.

ಇದನ್ನೂ ಓದಿರಿ:ಸಿಎಂ ಸ್ಥಾನದಿಂದ ಅಮರೀಂದರ್​ ಸಿಂಗ್‌ರನ್ನ ಕೆಳಗಿಳಿಸಿದ್ದು ಸೋನಿಯಾ ಅಲ್ಲ, 78 ಶಾಸಕರು : ಸುರ್ಜೇವಾಲಾ

ಅನೇಕ ವರ್ಷಗಳ ಕಾಲ ಪಪ್ಪಪಟ್ಟಿಯಲ್ಲಿ ಸ್ಥಳೀಯ ಚುನಾವಣೆ ನಡೆಸಲು ಸಾಧ್ಯವಾಗಿರಲಿಲ್ಲ. ಆದರೆ, ಕರುಣಾನಿಧಿ ಅವರ ಅಧಿಕಾರವಧಿಯಲ್ಲಿ ಈ ಸಮಸ್ಯೆ ಬಗೆಹರಿಸಲಾಯಿತು ಎಂದರು. ಚುನಾವಣೆ ಪ್ರಣಾಳಿಕೆಯಲ್ಲಿನ 202 ಭರವಸೆ ಈಗಾಗಲೇ ಪೂರ್ಣಮಾಡಲಾಗಿದ್ದು, ರೈತರಿಗೋಸ್ಕರ ಪ್ರತ್ಯೇಕ ಬಜೆಟ್ ಸಹ ಮಂಡನೆ ಮಾಡಲಾಗಿದೆ ಎಂದರು.

ABOUT THE AUTHOR

...view details