ಕರ್ನಾಟಕ

karnataka

ETV Bharat / bharat

ಕುರುಬ ಎಸ್‌ಟಿ ಹೋರಾಟ ಸಮಿತಿಯಿಂದ ಭಾಜಪ ಪ್ರ. ಕಾರ್ಯದರ್ಶಿ ಸಂತೋಷ್ ಜೀ ಭೇಟಿ.. - ಎಸ್​​ಟಿ ಬೇಡಿಕೆಯ ಮನವಿ ಬಗ್ಗೆ ಸವಿವರವಾಗಿ ಚರ್ಚೆ

ಎಸ್​​ಟಿ ಬೇಡಿಕೆಯ ಮನವಿ ಬಗ್ಗೆ ಸವಿವರವಾಗಿ ಚರ್ಚಿಸುವ ಸಂದರ್ಭ, ಶ್ರೀಶ್ರೀಶ್ರೀ ಜಗದ್ಗುರು ನಿರಂಜನಾನಂದಪುರಿ ಮಹಾಸ್ವಾಮಿಗಳು ಶ್ರೀಮಠ ಕಾಗಿನೆಲೆ ಕನಕಗುರುಪೀಠ, ಕಾಗಿನೆಲೆ ಮತ್ತು ಹೊಸದುರ್ಗ ಕಾಗಿನೆಲೆ ಕನಕಗುರುಪೀಠ ಶಾಖಾಮಠದ ಶ್ರೀಶ್ರೀಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು ಉಪಸ್ಥಿತರಿದ್ದರು..

ST Fight Committee
ಕುರುಬರ ಎಸ್​​ಟಿ ಹೋರಾಟ ಸಮಿತಿ

By

Published : Nov 25, 2020, 3:59 PM IST

ನವದೆಹಲಿ :ಕುರುಬರ ಎಸ್​ಟಿ ಹೋರಾಟ ಸಮಿತಿಯ ಕರ್ನಾಟಕ ನಿಯೋಗವು ಭಾಜಪ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಅವರನನ್ನ ಇಂದು ನವದೆಹಲಿಯಲ್ಲಿ ಭೇಟಿಯಾದರು.

ಎಸ್​​ಟಿ ಬೇಡಿಕೆಯ ಮನವಿ ಬಗ್ಗೆ ಸವಿವರವಾಗಿ ಚರ್ಚಿಸುವ ಸಂದರ್ಭ, ಶ್ರೀಶ್ರೀಶ್ರೀ ಜಗದ್ಗುರು ನಿರಂಜನಾನಂದಪುರಿ ಮಹಾಸ್ವಾಮಿಗಳು ಶ್ರೀಮಠ ಕಾಗಿನೆಲೆ ಕನಕಗುರುಪೀಠ, ಕಾಗಿನೆಲೆ ಮತ್ತು ಹೊಸದುರ್ಗ ಕಾಗಿನೆಲೆ ಕನಕಗುರುಪೀಠ ಶಾಖಾಮಠದ ಶ್ರೀಶ್ರೀಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು, ಶ್ರೀಶ್ರೀಶ್ರೀ ಶಿವಾನಂದಪುರಿ ಮಹಾಸ್ವಾಮಿಗಳು, ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು.

ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ವಿಧಾನಪರಿಷತ್ ಸದಸ್ಯ ರಘುನಾಥ್ ರಾವ್ ಮಲಕಾಪೂರೆ, ಮಾಜಿ ಸಚಿವ ಹೆಚ್.ಎಂ. ರೇವಣ್ಣ, ಹಾಗೂ ಮಾಜಿ ಸಂಸದ ಮತ್ತು ಹೋರಾಟ ಸಮಿತಿ ಅಧ್ಯಕ್ಷ ಶ್ರೀ ಕೆ.ವಿರುಪಾಕ್ಷಪ್ಪ, ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಕೆ.ಮುಕುಡಪ್ಪ, ಕುರುಬರ ಸಂಘದ ಕಾರ್ಯಾಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀ ಡಿ. ವೆಂಕಟೇಶಮೂರ್ತಿ, ಸಮಿತಿ ಖಜಾಂಚಿಗಳಾದ ಶ್ರೀ ಕೆ.ಈ. ಕಾಂತೇಶ, ಶ್ರೀ ಟಿ.ಬಿ.ಬಳಗಾವಿ ಇತರರು ಉಪಸ್ಥಿತರಿದ್ದರು.

ABOUT THE AUTHOR

...view details